ಉತ್ತರಪ್ರಭ ಗದಗ :
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಬಿಜೆಪಿ-ಕಾಂಗ್ರೆಸ್ ನಡುವೆ ಕಾವುಕಟ್ಟಿದ ರಾಜಕೀಯ ಹಕ್ಕೊತ್ತುವರಿ..!
ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ನಡೆಯಿತು. ಈ ಸಂದರ್ಭ ನಗರಸಭೆ ಕಚೇರಿ ಮುಂದೆ ಭಾರಿ ಹೈಡ್ರಾಮಾ ಸೃಷ್ಟಿಯಾಯಿತು.

ನಾಮಪತ್ರ ಸಲ್ಲಿಸಲು ನಗರಸಭೆ ಕಚೇರಿ ಬಳಿ ಆಗಮಿಸಿದ್ದ ಬಿಜೆಪಿಯ ಸದಸ್ಯರು, ಕಾರ್ಯಕರ್ತರು, ಹಾಗೂ ಪ್ರಮುಖ ನಾಯಕರು ಪ್ರವೇಶದ ನಾಕಾಬಂದಿಗೆ ಸಿಲುಕಿದರು.
ನಗರಸಭೆ ಅಧಿಕಾರಿಗಳು ಸದಸ್ಯರಿಗೆ ಮಾತ್ರ ಪ್ರವೇಶ ನೀಡುವ ನಿಯಮವನ್ನು ಮುಂದಿಟ್ಟುಕೊಂಡು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹಾಗೂ ಸ್ಥಳೀಯ ನಾಯಕರನ್ನು ನಗರಸಭೆ ಗೇಟ್ ಬಳಿ ತಡೆ ನೀಡಿದರು.

ಇದರಿಂದ ಅಸಮಾಧಾನಗೊಂಡ ಬಿಜೆಪಿ ಕಾರ್ಯಕರ್ತರು, ಪೊಲೀಸರ ಜತೆ ವಾಗ್ವಾದಕ್ಕಿಳಿದರೆ, ಸಚಿವ ಎಚ್.ಕೆ. ಪಾಟೀಲ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯು ಈಗ ಗದಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ :
ಬಿಜೆಪಿಯ ಅಭ್ಯರ್ಥಿಗಳು :

- ಅಧ್ಯಕ್ಷ ಸ್ಥಾನಕ್ಕೆ : ಚಂದ್ರಶೇಖರ ತಡಸದ್
- ಉಪಾಧ್ಯಕ್ಷೆ ಸ್ಥಾನಕ್ಕೆ :
ವಿಜಯಲಕ್ಷ್ಮೀ ದಿಂಡೂರು
ಕಾಂಗ್ರೆಸ್ ಅಭ್ಯರ್ಥಿಗಳು :

- ಅಧ್ಯಕ್ಷ ಸ್ಥಾನಕ್ಕೆ : ಕೃಷ್ಣಾ ಪರಾಪುರ್
- ಉಪಾಧ್ಯಕ್ಷ ಸ್ಥಾನಕ್ಕೆ : ಶಕುಂತಲಾ ಅಕ್ಕಿ
ಈ ಬೆಳವಣಿಗೆಗಳಿಂದ ಗದಗ-ಬೆಟಗೇರಿ ನಗರಸಭೆ ರಾಜಕೀಯವಾಗಿ ಬಿಸಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮುಖಾಮುಖಿ ಹೋರಾಟ ತೀವ್ರ ಸ್ವರೂಪ ತಾಳಲಿದೆ ಎಂಬುದು ಸ್ಪಷ್ಟವಾಗಿದೆ.