ಚಿತ್ರವರದಿ: ಗುಲಾಬಚಂದ ಜಾಧವ

ಆಲಮಟ್ಟಿ : ಲೋಕದ ಹಿತಕ್ಕಾಗಿ ಹಗಲಿರುಳು ಶ್ರಮಿಸಿರುವ ಕಾಯಕಯೋಗಿ ಕನಾ೯ಟಕ ಗಾಂಧಿ ಮಂಜಪ್ಪ ಹಡೇ೯ಕರ, ಭಾವೈಕ್ಯ ಹರಿಕಾರ ಲಿಂಗೈಕ್ಯ ತೋಂಟದ ಸಿದ್ದಲಿಂಗ ಶ್ರೀ, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರು ಸದಾಕಾಲವೂ ಪ್ರಾತಃಸ್ಮರಣೀಯರು. ಶರಣರು ಸವೋ೯ತ್ತಮ ಕಾಯಕ ಗೈದು ಅದ್ಬುತ ಹೆಗ್ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ನಾಡುಕಂಡ ಮೇರು ಸದೃಶ ಮಾನವತಾವಾದಿ ಈ ಶರಣರ ಛಾಪು ಎಂದಿಗೂ ಅಳಿಯದು ಎಂದು ಶಾಸಕ ಶಿವಾನಂದ ಪಾಟೀಲ ನುಡಿದರು.
ಇಲ್ಲಿನ ಎಸ್.ವ್ಹಿ. ವ್ಹಿ. ಸಂಸ್ಥೆ ಆವರಣದಲ್ಲಿನ ಶಿಕ್ಷಣ ತಜ್ಞ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಸಭಾ ವೇದಿಕೆಯಲ್ಲಿ ಗುರುವಾರ ಜರುಗಿದ ಕರುನಾಡು ಗಾಂಧಿ ಉತ್ಸವ, ಲಿಂ,ತೋಂಟದ ಸಿದ್ದಲಿಂಗ ಶ್ರೀಗಳವರ ಚತುರ್ಥ ಹಾಗೂ ವಚನ ಸಾಹಿತ್ಯ ರಕ್ಷಕ ಡಾ.ಫ.ಗು.ಹಳಕಟ್ಟಿಯವರ ಪುಣ್ಯ ಸ್ಮರಣೆ ಮತ್ತು ವಿವಿಧ ಶಾಲಾ,ಕಾಲೇಜುಗಳ ವಾಷಿ೯ಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಈ ಪುಣ್ಯ ಮಹಾತ್ಮರಲ್ಲಿನ ಅಗೋಚರ ಶಕ್ತಿ ಬಲು ದೊಡ್ಡದು. ಬದ್ದತೆಯಿಂದ ಸಮಾಜಮುಖಿ ಕಾಯಕ ನಿರ್ವಹಿಸಿದೆ ಎಂದರು.


12 ನೇ ಶತಮಾನದಲ್ಲಿ ಕ್ರಾಂತಿಗೈದು ಬಸವಣ್ಣನವರ ಆಚಾರ,ವಿಚಾರಗಳನ್ನು ಸಮಾಜಕ್ಕೆ ಧಾರೆಯರೆಯಲಾಗಿತ್ತು.ಅದನ್ನು19 ನೇ ಶತಮಾನದಲ್ಲಿ ಶರಣ ಮಂಜಪ್ಪ ಹಡೇ೯ಕರ ಅವರು ಅನುಕರಣೆಗೆ ತಂದಿದ್ದಾರೆ.ಅದರಂತೆ ಫ.ಗು.ಹಳಕಟ್ಟಿಯವರು ವಿಜಯಪುರ ಜಿಲ್ಲೆಗೆ ವಚನ ಗುಮ್ಮಟದ ಸ್ಪರ್ಶ ಲೇಪಿಸಿ ವಿಶೇಷತೆ ಸೃಷ್ಟಿ ಮಾಡಿದಂಥ ಏಕೈಕ ಮಹಾತ್ಮರು ಅಗಿದ್ದಾರೆ. ನಮ್ಮ ಜಿಲ್ಲೆಯವರೆ ಅಗಿರುವ ಗದುಗಿನ ತೋಂಟದ ಸಿದ್ದಲಿಂಗ ಶ್ರೀಗಳ ಮಾತು,ಕೃತಿಗಳು ಒಂದೇ. ಸಮಾಜದಲ್ಲಿ ಸದ್ಭಾವನೆಯೊಂದಿಗೆ ವೈಚಾರಿಕತೆ ಸ್ವಾಮೀಜಿಗಳಾಗಿ ಜನತೆಯ ಮನದಲ್ಲಿ ನೆಲೆಗೊಂಡಿದ್ದು ಅಭಿಮಾನ ಪಡುವಂಥದ್ದು. ಪ್ರತಿಭಾವಂತರಿಂದ ಸೃಷ್ಟಿಯಾಗುವ ಐತಿಹಾಸಿಕ ಚರಿತ್ರೆ ಸಮಾಜದ ಹೃದಯದಲ್ಲಿ ಮನೆ ಮಾಡುತ್ತವೆ ಎಂದರು.


ಸಿದ್ದಲಿಂಗ ಶ್ರೀಗಳವರ ತ್ಯಾಗ,ಪರಿಶ್ರಮದಿಂದ ಈ ಅವರಣದಲ್ಲಿ ವಿದ್ಯೆ ಮಕ್ಕಳಿಗೆ ಲಭಿಸುತ್ತಿದೆ. ಅವರ ಆಸೆ ಸಿದ್ದಗಂಗಾ ಶ್ರೀಗಳವರನ್ನು ನೆನಪಿಸುವ ಹಾಗಿದೆ. ಉತ್ತರ ಕನಾ೯ಟಕ ದಲ್ಲಿ ತೋಂಟದ ಪೂಜ್ಯರನ್ನು ಭಕ್ತಿಪೂರ್ವಕ ಸ್ಮರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಪಾಲನೆ,ಪೋಷಣೆ ಮಾಡಿ ಸಮಾಜಕ್ಕೆ ದಾರಿದೀಪವಾಗಿ ಬೆಳಗಿಸಿದ್ದಾರೆ.ಬಸವ ಮಾರ್ಗದ ಪ್ರತಿರೂಪ ತೋಂಟದ ಶ್ರೀಗಳು ಮೂಡಿಸಿರುವ ಹೆಜ್ಜೆ ಗುರುತುಗಳು ಸ್ಮರಣೀಯ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ವಿದ್ಯಾರ್ಥಿ ಜೀವನ ಅಪ್ರತಿಮ ಸಾಧನೆ ಮಾಡುವಂಥ ಜೀವನ. ವಾಷಿ೯ಕ ಸಮ್ಮೇಳನ ಬರಿ ಮಕ್ಕಳಿಗಷ್ಟೆ ಸೀಮಿತವಲ್ಲ. ಪಾಲಕರು,ಪೋಷಕರು ತಮ್ಮ ಕರುಳು ಬಳ್ಳಿಗಳ ಪ್ರಗತಿ,ಸಾಧನೆ ಕಂಡುಕೊಂಡು ಆತ್ಮಾವಲೋಕನ ಮಾಡಿಕೊಳ್ಳುವ ದಿನಯಿದು. ಅನೇಕ ರಂಗದಲ್ಲಿ ಸಾಧನೆ ಮಾಡಿರುವ ಮಕ್ಕಳಿಗೆ ವಾಷಿ೯ಕ ಸ್ನೇಹ ಸಮ್ಮೇಳನ ದಿನದಂದು ಪ್ರೋತ್ಸಾಹಿಸಿ ಹುರಿದುಂಬಿಸುವ ಉದ್ದೇಶವನ್ನಾಧರಿಸಿ ಇಂಥ ಕಾರ್ಯಕ್ರಮ ಜರುಗುತ್ತವೆ.ಆ ಮೂಲಕ ಮಕ್ಕಳ ಪ್ರತಿಭೆ ಸಮಾಜದ ಎದುರು ಅನಾವರಣಗೊಳ್ಳುತ್ತದೆ ಎಂದರು.
ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯೂ ಯೊಬ್ಬರು. ಅಂಥವರ ಹೆಸರಿನ ಜಲಾಶಯ ಹೊಂದಿರುವ ಆಲಮಟ್ಟಿಯಲ್ಲಿ ಈ ಶರಣ ಮಹಾತ್ಮರು ನಡೆದಾಡಿದ್ದಾರೆ. ಮಂಜಪ್ಪನವರ ಹೆಸರು ಈ ಭೂಮಿಯ ಮೇಲೆ ಉಳಿಯಬೇಕಾದರೆ ತೋಂಟದ ಸಿದ್ದಲಿಂಗ ಶ್ರೀಗಳೇ ಕಾರಣರು. ಮಂಜಪ್ಪನವರ ಹೆಸರು ಇನ್ನಷ್ಟು ಮೇಲೆತ್ತರಕ್ಕೆ ಕೊಂಡೊಯ್ಯಬೇಕು. ಮರೆಯಾಗದಂತೆ ಉಳಿಸಿ ಬೆಳೆಸಬೇಕು ಎಂದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಪ ಸದಸ್ಯ ಹಣಮಂತ ನಿರಾಣಿ, ಪಾಲಕರು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಉತ್ತಮ ಶಿಕ್ಷಣದಿಂದಲೇ ಭವಿಷ್ಯದಲ್ಲಿ ವಿಶೇಷ ಸಾಧನೆ ಗೈಯಲು ಸಾಧ್ಯ. ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರವೂ ಬಹು ಮುಖ್ಯ. ಅಕ್ಷರ ಅಭ್ಯಾಸದ ಜೊತೆಗೆ ನೈತಿಕ ಗುಣಗಳನ್ನು ಮಕ್ಕಳ ಮನದಲ್ಲಿಂದು ಬಿತ್ತ ಬೇಕಾಗಿದೆ. ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.ಒಳ್ಳೆ ಸನ್ನಡತೆ ಸಂಸ್ಕಾರದಿಂದಲೇ ಜೀವನದ ಗುರಿಗಳು ತಲುಪಲು ಸಾಧ್ಯ. ಭವಿಷ್ಯತ್ತಿನ ಪ್ರಜೆಗಳು ಭಾರತೀಯ ದೇಶಾಭಿಮಾನದ ಪ್ರೇಮ ಉಕ್ತಿಯಲ್ಲಿ ಮೆರೆಯಬೇಕು ಎಂದರು. ಕೇವಲ ಸರಕಾರಿ ನೌಕರಿ ಬಯಸದೇ ಸ್ವಾವಲಂಬಿ ಉದ್ಯೋಗಕ್ಕೆ ಆಸಕ್ತಿ ತೋರಬೇಕು. ಹೊಸ ಶಿಕ್ಷಣ ನೀತಿ ಜಾರಿಯಿಂದ ಅಮೂಲಾಗ್ರ ಬದಲಾವಣೆ ಅಗಲಿದೆ. ಭಾರತೀಯ ಇತಿಹಾಸದಲ್ಲಿ ಶೈಕ್ಷಣಿಕ ಪ್ಪಗತಿವಾಗಲಿದೆ. ಶಿಕ್ಷಣ ರಂಗದ ಬದಲಾವಣೆಯಿಂದ ಪ್ರತಿಯೊಬ್ಬರು ಪರಿಪೂರ್ಣ ವ್ಯಕ್ತಿರೂಪಗೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳನ್ನು ಹೊಸನೀತಿ ಶಿಕ್ಷಣದೆಡೆಗೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ಸಮಾಜಕ್ಕೆ ತೋಂಟದ ಸಿದ್ದಲಿಂಗ ಶ್ರೀ ತಮ್ಮದೇ ಅಮೋಘ ಕೊಡುಗೆ ನೀಡಿದ್ದಾರೆ.ಮಂಜಪ್ಪನವರ ವ್ಯಕ್ತಿತ್ವ ಅಸಾಧರಣ.ಗುರುತಿಸುವ ಕೆಲಸವಾಗಬೇಕು.ಇಲ್ಲಿನ ಈ ಸಂಸ್ಥೆಯ ಬೆಳವಣಿಗೆ, ಅಭಿವೃದ್ಧಿಯಲ್ಲಿ ತಾವು ಭಾಗಿಯಾಗುವುದಾಗಿ ಹಣಮಂತ ನಿರಾಣಿ ಭರವಸೆ ನೀಡಿದರು.
ವಿಜಯಪುರ ಅಮ್ಮನ ಮಡಿಲು ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉಪನ್ಯಾಸ ನೀಡಿ, ತ್ಯಾಗ,ಪ್ರೀತಿಯನ್ನು ಸಮಾಜಕ್ಕಾಗಿ ಸಮಪಿ೯ಸುವ ಮಹಾನುಭಾವರ ದೇಹ ಅಳಿದರೂ ಅವರು ಸದಾ ಅಮರವಾಗಿರುತ್ತಾರೆ.ಅವರುಗಳ ಅಂತರಾತ್ಮದ ಚೈತನ್ಯ ನಿರಂತರವಾಗಿ ನಮ್ಮೊಳಗಿನ ಅಂತರಂಗದಲ್ಲಿರುತ್ತವೆ. ನಮ್ಮ ಆದರ್ಶ ಜೀವನಕ್ಕೆ ಪ್ರೇರಕರು. ಜ್ಞಾನ ತಿರುಳಿನ ಅಂತರಂಗ ತೆರೆಸಿದಂಥ ಸಿದ್ದೇಶ್ವರ ಶ್ರೀ, ಸಿದ್ದಲಿಂಗ ಶ್ರೀ, ಮಂಜಪ್ಪ, ಹಳಕಟ್ಟಿ ಇವರೆಲ್ಲರೂ ಸಮಾಜ ಸುಧಾರಣೆಯ ಕ್ಷಕಿರಣಗಳಾಗಿದ್ದಾರೆ ಎಂದರು.
ಎಸ್.ವ್ಹಿ. ವ್ಹಿ. ಸಂಸ್ಥೆಯ ಕಾರ್ಯದರ್ಶಿ ಪ್ರೋ.ಶಿವಾನಂದ ಪಟ್ಟಣಶೆಟ್ಟರ, ಪಪೂ ಶಿಕ್ಷಣ ಇಲಾಖೆ ಉಪ ನಿದೇ೯ಶಕ ಎಸ್.ಎನ್. ಬಗಲಿ, ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಕನಾ೯ಟಕ ರಾಜ್ಯ ನೌಕರರ ಸಂಘ ಯೋಜನಾ ಶಾಖೆ ಅಧ್ಯಕ್ಷ ಎಸ್.ಬಿ.ದಳವಾಯಿ, ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ,ಅರಣ್ಯಾಧಿಕಾರಿ ಅಶೋಕ ಕಾಳೆ, ಹಿರಿಯ ಪತ್ರಕರ್ತ ಜಿ.ಸಿ.ಮುತ್ತಲದಿನ್ನಿ, ಶಂಕರ ಜಲ್ಲಿ, ನಿಡಗುಂದಿ ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತೋರಗಲಮಠ, ಗ್ರಾಪಂ ಅಧ್ಯಕ್ಷ ಮಂಜುನಾಥ ಹಿರೇಮಠ, ಬಿಸ್ಮಿಲ್ಲಾ ಹಳ್ಳದಮನಿ, ಮಲ್ಲನಗೌಡ ನರಸನಗೌಡರ,ತಾಪಂ ಮಾಜಿ ಅಧ್ಯಕ್ಷ ಬಂದೇನವಾಜ ಡೋಲಜಿ, ಪ್ರಾಚಾರ್ಯ ಎಚ್.ಎನ್ ಕೆಲೂರ, ಮುಖ್ಯ ಶಿಕ್ಷಕ ಎಸ್.ಆಯ್.ಗಿಡಪ್ಪಗೋಳ,ಮುಖ್ಯ ಶಿಕ್ಷಕಿ ಕೆ.ಎನ್.ಹಿರೇಮಠ,ತನುಜಾ ಪೂಜಾರಿ, ಜಹೀರ ಕಾಜಿ,ಮಹೇಶ್ ಧರ್ಮರ,ಪ್ರಕಾಶ ಮಾಲಗತ್ತಿ ಇತರರಿದ್ದರು.
ಶಾಸಕರಿಗೆ,ವಿಪ ಸದಸ್ಯರಿಗೆ ಹಾಗೂ ಗದಗಿನ ಕೆಎಲ್ಇ ಕಾಲೇಜ್ ಉಪನ್ಯಾಸಕ ಈರಣ್ಣ ದಾವಣಗೆರಿ,ಜೆಟಿವಿಪಿ ಸಂಸ್ಥೆಯ ಈರಣ್ಣ ಗುರುಪುತ್ರನವರ ಸೇರಿದಂತೆ ಹಲ ದಾನಿಗಳಿಗೆ,ಗಣ್ಯರಿಗೆ ಸಂಸ್ಥೆ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು
ಪ್ರತಿಭಾಶಾಲಿ ಮಕ್ಕಳಿಗೆ ಸತ್ಕರಿಸಲಾಯಿತು. ವಿವಿಧ ಶಾಲಾ,ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಆಜಾದ್ ಕಾ ಅಮೃತ ಮಹೋತ್ಸವದಂಗವಾಗಿ ಅರವಿಂದ ಚೂಕ್ಕಾಡಿ ರಚಿಸಿದ ಆಜ್ಞಾತ ಸಂತ ಮಂಜಪ್ಪ ಹಡೇ೯ಕರ ಪುಸ್ತಕ ಗಣ್ಯರು ಬಿಡುಗಡೆಗೊಳಿಸಿದರು. ಕರುನಾಡು ಗಾಂಧಿ ಮಂಜಪ್ಪ, ಭಾವೈಕ್ಯತ್ಯಾ ಹರಿಕಾರ ಸಿದ್ದಲಿಂಗ ಶ್ರೀ, ವಚನ ಪಿತಾಮಹ ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಪ್ರಸ್ತಾವಿಕ ಮಾತನಾಡಿದರು. ಮಹೇಶ್ ಗಾಳಪ್ಪಗೋಳ ನಿರೂಪಿಸಿದರು. ಪಿ.ವೈ.ಧನಶೆಟ್ಟಿ ವಂದಿಸಿದರು.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಚಟುವಟಿಕೆಗಳನ್ನು ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ, ಎಂ.ಎಚ್.ಬಳಬಟ್ಟಿ, ತನುಜಾ ಪೂಜಾರಿ, ಕವಿತಾ ಮರಡಿ ಅಚ್ಚುಕಟ್ಟಾಗಿ ಸಂಯೋಜಿಸಿದರು.

Leave a Reply

Your email address will not be published. Required fields are marked *

You May Also Like

ತನ್ನ ದಾಖಲೆ ತಾನೇ ಮುರಿದು ಆತಂಕ ಸೃಷ್ಟಿಸುತ್ತಿರುವ ಮಹಾಮಾರಿ

ಬೆಂಗಳೂರು : ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ದಾಖಲೆಯನ್ನೇ ಮುರಿದು ಸಾಗುತ್ತಿದೆ. ನಿನ್ನೆ ಒಂದೇ…

ಭಾನುವಾರ ಮದುವೆಗೆ ಅವಕಾಶ ರಾಜ್ಯ ಸರ್ಕಾರದ ಆದೇಶ

ರಾಜ್ಯಾಧ್ಯಂತ ಪ್ರತಿ ಭಾನುವಾರದಂದು ಬೆಳಿಗ್ಗೆ 7ಗಂಟೆಯಿಂದ ಸಂಜೆಯ 7 ಗಂಟೆಯವರೆಗೆ ಕರ್ಪ್ಯೂ ಜಾರಿ ಮಾಡಿದ್ದರಿಂದಾಗಿ, ಮದುವೆ ಸಮಾರಂಭ ಕೂಡ ನಡೆಸಬಾರದಾ ಎಂಬ ಗೊಂದಲಕ್ಕೆ ರಾಜ್ಯದ ಜನತೆ ಒಳಗಾಗಿದ್ದರು. ಇದೀಗ ಮದುವೆ ಸಮಾರಂಭವನ್ನು ನಡೆಸುವುದಕ್ಕೆ ಅವಕಾಶ ನೀಡಿ, ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.

ಚೀನಾದಲ್ಲಿ ಎರಡನೇ ಅಲೆ ಎಬ್ಬಿಸಿದ ಕೊರೊನಾ!

ಬೀಜಿಂಗ್‌ : ಕೊರೊನಾ ಹುಟ್ಟಿಗೆ ಕಾರಣವಾಗಿರುವ ಚೀನಾದಲ್ಲಿ ಎರಡನೇ ಅಲೆ ಶುರುವಾಗಿದೆ. ಏಪ್ರಿಲ್‌ ನಂತರ ಮೊದಲ…