ಉತ್ತರಪ್ರಭ
ಗದಗ: ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಸಿವ್ಹಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಇಐಐಸಿ ಇವರುಗಳ ಸಹಯೋಗದೊಂದಿಗೆ ರಾಷ್ಟ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ದಿನಾಚರಣೆಯ ಅಂಗವಾಗಿ ಒಂದು ದಿನದ ಪರಿಸರ ಕುರಿತು ತಿಳುವಳಿಕೆ ಕಾರ್ಯಕ್ರಮವನ್ನು ದಿನಾಂಕ:06.12.22 ರಂದು ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ ಎಂ ಅವಟಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪರಿಸರ ಮಾಲಿನ್ಯ ನಿಯಂತ್ರಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು. ಪರಿಸರ ಉಳಿವಿಗಾಗಿ ಜನರಲ್ಲಿ ತಿಳುವಳಿಕೆಯನ್ನು ನೀಡುವುದರೊಂದಿಗೆ ಗಿಡ ಮರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕಾಗಿದೆ. ಮಾಲಿನ್ಯ ನಿಯಂತ್ರಿಸಲು ಪರಿಸರ ಪೂರಕ ಚಟುವಟಿಕೆಗಳನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪರಿಸರ ಮಾಲಿನ್ಯ ನಿಯಂತ್ರಣ ದಿನದ ಅಂಗವಾಗಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಸಿವ್ಹಿಲ್ ವಿಭಾಗದ ಮುಖ್ಯಸ್ಥರಾದ ಡಾ.ಕೆ ಲೋಕೇಶ ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡುತ್ತಾ ಪರಿಸರ ಮಾಲಿನ್ಯದಿಂದ ಅನೇಕ ದುಶಪರಿಣಾಮಗಳು ದಿನ ನಿತ್ಯದ ಜೀವನದ ಮೇಲೆ ಪ್ರಭಾವ ಬಿಳುವುದರಿಂದ ಆರೋಗ್ಯದಲ್ಲಿ ಏರು ಪೇರಾಗಿ ಅನಾರೋಗ್ಯಕ್ಕೆ ಇಡಾದ ಅನೇಕ ಪ್ರಸಂಗಗಳಿವೆ.




ನಮ್ಮ ಭಾಗದ ಸಹ್ಯಾದ್ರಿ ಎಂದೆ ಖ್ಯಾತಿಯಾದ ಕಪ್ಪತ್ತಗುಡ್ಡ ರಕ್ಷಣೆಗೆ ತೋಂಟದ ಶ್ರೀಗಳು ಕಟಿ ಬದ್ದರಾಗಿ ನಿಂತು ರಕ್ಷಣೆ ಮಾಡಿದ ಪರಿಣಾಮ ಇವತ್ತು ಗದಗ ಜಿಲ್ಲೆ ದೇಶದಲ್ಲಿ ಸ್ವಚ್ಚ ಗಾಳಿ ನೀಡುವ ಪ್ರಥಮ ಜಿಲ್ಲೆಯ ಪಟ್ಟಿಯಲ್ಲಿ ಇರುವುದು ಹೆಮ್ಮೆಯ ಸಂಗತಿ. ಇಂತಹ ಉತ್ತಮವಾದ ಪರಿಸರವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಸಿವ್ಹಿಲ ವಿಭಾಗದ ಸಹಾಯಕ ಪ್ರಧ್ಯಾಪಕರು ಮತ್ತು ಇಐಐಸಿ ಉಪಾಧ್ಯಕ್ಷರಾದ ಪ್ರಸನ್ನ ನಾಡಗೌಡ , ಇಐಐಸಿ ಅಧ್ಯಕ್ಷರು ಮತ್ತು ಇಇಇ ವಿಭಾಗದ ಪ್ರಾಧ್ಯಾಪಕರಾದ ಜಗದೀಶ ಶಿವನಗುತ್ತಿ ಸೇರಿದಂತೆ ಎಲ್ಲ ವಿಭಾಗದ ಬೋಧಕ , ಬೋಧಕೆತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.