ಉತ್ತರಪ್ರಭ ಸುದ್ದಿ,

ಗದಗ: ನಗರದ ಐಡಿಬಿಐ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ ರೂಪಾಯಿ ಹಣ ಸಾಲ ಪಡೆದಿದ್ದ ಮಾಜಿ ನಗರಸಭೆ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಅವರ ಪುತ್ರ ದತ್ತಾತ್ರೇಯ ಬಾಕಳೆ ಸೇರಿದಂತೆ 17 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ತಿಳಿಸಿದ್ದಾರೆ. ಶುಕ್ರವಾರ ನಗರದ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗದಗ ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಮಗ ದತ್ತಾತ್ರೇಯ ಬಾಕಳೆ, ಇದೇ ವರ್ಷದ ಏಪ್ರಿಲ್ ತಿಂಗಳಿಂದ ಜೂನ್ ವರೆಗೆ ದತ್ತಾತ್ರೇಯ ಸಹಚರರ ಹೆಸರಲ್ಲಿ ಬ್ಯಾಂಕ್ ನಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟಿದ್ದ ಹಾಗೂ ಗದಗ ಸ್ಟೇಷನ್ ರೋಡ ವಿಮಲೇಶ ಜ್ಯುವೆಲರ್ ಇವರೆಲ್ಲರೂ ಸೇರಿಸಿಕೊಂಡು ತಮ್ಮ ಬಳಿ ಇರುವ ಆಭರಣಗಳಿಗೆ ಮೇಲೆ ಸ್ವಲ್ಪ ಪ್ರಮಾಣದ ಬಂಗಾರದ ಲೇಪನ ಇದ್ದು, ಒಳಗಡೆ ಬೇರೆ ಲೋಹ ಇದೆ ಅಂತಾ ಗೊತ್ತಿದ್ದೂ, ಇವು ಸಂಪೂರ್ಣ ಬಂಗಾರದ ಆಭರಣಗಳು ಅಂತಾ ಸುಳ್ಳು ಹೇಳಿ ಅವುಗಳನ್ನು ಅಡವಿಟ್ಟು ಸಾಲ ಪಡೆಯುವ ಬಗ್ಗೆ ಒಳಸಂಚು ಮಾಡಿ ನಂತರ ಗದಗ ಶಹರದ ಭೂಮರಡ್ಡಿ ಸರ್ಕಲ ಹತ್ತಿರವಿರುವ ಯೂನಿಯನ್‌ ಬ್ಯಾಂಕದಲ್ಲಿ ಮೇಲೆ ನಮೂದ ಮಾಡಿದ ಎಲ್ಲರೂ ಸೇರಿ ಒಟ್ಟು 4983.2 ಗ್ರಾಂ ತೂಕದ ಬಂಗಾರದ ಲೇಪನವಿರುವ ಬ್ರಾಸಲೇಟ್‌, ಬೆಂಗಲ್ಸ್ ಹಾಗೂ ಚೈನ್‌ಗಳನ್ನು ಅಡವಿಟ್ಟು ಒಟ್ಟು 1,43,34 ಲಕ್ಷ(1 ಕೋಟಿ 43 ಲಕ್ಷದ 34 ಸಾವಿರದ) ರೂ.ಗಳ ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡಿದ್ದಾರೆ ಎಂದರು.

ಆರೋಪಿ ದತ್ತಾತ್ರೇಯ ಬಾಕಳೆ, ಬ್ಯಾಂಕ್ ನಲ್ಲಿನ ಚಿನ್ನ ಚೆಕ್ ಮಾಡುವ ಸುರೇಶ್ ರೇವಣಕರ ಅವರ ಸಹಾಯ ಪಡೆದು ವಂಚನೆ ಮಾಡಿದ್ದ. ದತ್ತಾತ್ರೇಯ ಆ್ಯಂಡ್ ಟೀಮ್ ತರುತ್ತಿದ್ದ ನಕಲಿ ಚಿನ್ನಕ್ಕೆ 22 ಕ್ಯಾರೆಟ್ ಚಿನ್ನ ಅಂತಾ ಸುರೇಶ್ ಸರ್ಟಿಫಿಕೇಟ್ ಕೊಡ್ತಿದ್ರಂತೆ. ಪ್ರಮಾಣ ಪತ್ರ ಪಡೆದು ಎರಡು ತಿಂಗಳ ಅಂತರದಲ್ಲಿ ಬೇರೆ ಬೇರೆ ಹೆಸರಲ್ಲಿ ಒಟ್ಟು 4,871.04 (4 ಕೆಜಿ 87.04) ಗ್ರಾಂ ನಕಲಿ ಚಿನ್ನವನ್ನ ಅಡ ಇರಿಸಲಾಗಿತ್ತು.. ಚಿನ್ನ ಅಡಮಾನವಿಟ್ಟು ಬರೋಬ್ಬರಿ 1 ಕೋಟಿ 43 ಲಕ್ಷ 34 ಸಾವಿರ ರೂಪಾಯಿಯನ್ನ ಸಾಲದ ರೂಪದಲ್ಲಿ ಪಡೆಯಲಾಗಿತ್ತು..

ಪ್ರಕರಣ ಸಂಬಂಧ ಬೆಟಗೇರಿ ಬಡಾವಣೆಯಲ್ಲಿ ಕೇಸ್ ದಾಖಲಾಗಿದ್ದು, ವಂಚನೆ ಸಹಕಾರ ನೀಡಿದ್ದ ಬ್ಯಾಂಕ್ ನ ಚಿನ್ನ ಚೆಕ್ ಮಾಡುತ್ತಿದ್ದ ಸುರೇಶ್ ರೇವಣಕರ, ದತ್ತಾತ್ರೇಯ ಬಾಕಳೆ, ಅರಣ್ ಕುಮಾರ್, ಆದಿಲ್ ನಿಶಾನಿ, ರವಿ ಹತ್ತರಕಲ್, ಗಣೇಶ ಮಾದರ, ಮಾಣಿಕ್ ಲಕ್ಕುಂಡಿ, ದಾನೇಶ್ ಉಮಾದಿ, ರಾಕೇಶ್ ನವಲಗುಂದ, ಮಂಜುನಾಥ ಹೊಸಮನಿ, ಸುಚೀತಕುಮಾರ ಹರಿವಾಣ, ದುಂಡಪ್ಪ ಕೊಟ್ಟೂರುಶೆಟ್ಟರ್, ಸಿದ್ಧಾರ್ಥ್ ಭರಡಿ, ನಾಗರಾಜ ರಾಮಗಿರಿ, ಅರುಣಕುಮಾರ ಹೂಗಾರ, ಸಚಿನ್ ಹರಿವಾಣ, ಸಂತೋಷ ವೀರಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಿದರು. ನಕಲಿ ಚಿನ್ನಾಭರಣ ಎಲ್ಲಿಂದ ಖರೀದಿ ಮಾಡಿದರು. ಆರೋಪಿಗಳಿಂದ ಎಷ್ಟು ಹಣ ಸೀಜ್ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಮುಂದಿನ ತನಿಖೆಯ ನಂತರ ತಿಳಿದು ಬರಲಿದೆ. ಈ ಪ್ರಕರಣವನ್ನ ಗಂಭೀರವಾಗಿ ಆರೋಪಿತರ ಪತ್ತೆ ಕುರಿತು ಡಿಎಸ್ ಪಿ ಗದಗ ಉಪ-ವಿಭಾಗ, ಗದಗ ರವರ ಮಾರ್ಗದರ್ಶನದಲ್ಲಿ. ಸಿಪಿಐ ಬೆಟಗೇರಿ ವೃತ್ತ ರವರ ನೇತೃತ್ವಲ್ಲಿ ಪಿಎಸ್‌ಐ ಬೆಟಗೇರಿ ಬಡಾವಣೆ ಹಾಗೂ 6 ಜನ ಸಿಬ್ಬಂದಿ ಜನರು ಸೇರಿದಂತೆ ಒಂದು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

You May Also Like

ವಿವಿಧ ಸಂಘಟನೆಗಳಿಂದ 916ನೇ ಬಸವ ಜಯಂತಿ ಆಚರಣೆ

ಬಸವಣ್ಣನವರ ತತ್ವಗಳು ಸರ್ವಕಾಲಿ ಸತ್ಯಗಳಾಗಿವೆ ಉತ್ತರಪ್ರಭ ಸುದ್ದಿ ಗದಗ : ಶ್ರೀ ತೋಂಟದಾರ್ಯ ಮಠದ ಪೂಜ್ಯ…

ರಾಜ್ಯದಲ್ಲಿಂದು 267 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 267 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾದಂತಾಗಿದೆ.

ಮಸ್ಕಿಗೆ ಮೂಲಭೂತ ಸೌಕರ್ಯ ಮರೀಚಿಕೆ..!

ಜಿಲ್ಲೆಯ ಮಸ್ಕಿ ಪಟ್ಟಣ ತಾಲೂಕು ಕೇಂದ್ರವಾಗಿ ಎರಡು ವರ್ಷ ಉರುಳುತ್ತಿದ್ದರು. ಇಲ್ಲಿನ ಮೂಲಭೂತ ಸೌಕರ್ಯಗಳು ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ…

ಸರ್ಕಾರಗಳ ಸಾಧನೆ ಮನೆ-ಮನೆಗೆ ತಲುಪಿಸಿ- ಲಿಂಗರಾಜ ಪಾಟೀಲ್

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮನೆ-ಮನೆಗೆ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಧಾರವಾಡ ವಿಭಾಗೀಯ ಬಿಜೆಪಿ ಸಂಘಟನಾ ಪ್ರಭಾರಿ ಲಿಂಗರಾಜ್ ಪಾಟೀಲ್ ಹೇಳಿದರು.