ಉತ್ತರಪ್ರಭ
ಧಾರವಾಡ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ರಾಯಾಪುರ ಧಾರವಾಡದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನೂ ಯೋಗಾಭ್ಯಾಸ ಮಾಡುವದರ ಮೂಲಕ ಹಾಗೂ “ಯೋಗ ಜೀವನ ಪದ್ಧತಿ ” ಕುರಿತು ವಿಶೇಷ ವಿಚಾರಣಾ ಸಂಕೀರ್ಣ ಕಾರ್ಯಕಮವನ್ನು ಹ್ಮಮಿಕೊಳ್ಳುವುದರ ಮೂಲಕ ಆಚರಿಸಲಾಯಿತು.



ಪ್ರಸಿದ್ದ ಯೋಗ ಪಟು ಹಾಗೂ ಯೋಗ ಶಿಕ್ಷಕಿ, ಡಾ. ಸುಕುಮಾರಿ ಬಾದಾಮಿ ರವರು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು. ಮುಖ್ಯ ತರಬೇತಿದಾರರಾಗಿ ಮಾತನಾಡಿದ ಅವರು ನಮ್ಮ ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಋಷಿ ಮುನಿಗಳು ಇದರ ಸಿದ್ದಿ ಪಡೆದು ನೂರಾರು ವರ್ಷಗಳ ಕಾಲ ಆರೋಗ್ಯವಾಗಿ ಬದುಕಿದ್ದಾರೆ. ಇಂತಹ ಯೋಗವನ್ನು ಪುನರುತ್ಥಾನ ಮಾಡಿ ವಿಶ್ವ ಮನ್ನಣೆ ಸಿಗುವಂತೆ ಮಾಡಿದ್ದು ನಮ್ಮ ದೇಶದ ಹೆಮ್ಮೆ ಮತ್ತು ಕೀರ್ತಿಯಾಗಿದೆ. ಯೋಗವು ದಿವ್ಯವಾದ ಸಂಪತ್ತಾಗಿದ್ದು ಸದೃಢವಾದ ವ್ಯಕ್ತಿತ್ವ ಮತ್ತು ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
GTTC ಸಂಸ್ಥೆಯ ಪ್ರಾಂಶುಪಾಲರು ಶ್ರೀ ಶಿವಾನಂದ ಕುಂಬಾರ ಮಾತನಾಡಿ ಪ್ರತಿನಿತ್ಯದ ನಿಯಮಿತ ಯೋಗಾಭ್ಯಾಸವು ಮಾನಸಿಕ ಒತ್ತಡವನ್ನು ಕಡಿಮೆ ಗೊಳಿಸುವುದಲ್ಲದೆ ಮತ್ತು ದೈಹಿಕ ಸೌಂದರ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ದಿನನಿತ್ಯವೂ ಯೋಗಾಬ್ಯಾಸ ಮಾಡುವುದರ ಮೂಲಕ ಸದೃಢ ವ್ಯಕ್ತಿತ್ವ ರೂಪಿಸಬೇಕಾಗಿದೆ. ಭಾರತವನ್ನು ಯೋಗ ಗುರು ಎಂದು ಕರೆಯುವುದು ಉಲ್ಲೇಖನೀಯ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ HOD ಬಸವರಾಜ ಬಿ. ಹಿರಿಯ ತರಬೇತುದಾರರಾದ ಪ್ರಭು ತರೀಕೆರಿ, ದೇವದಾಸ ನಾಯಕ, ಮಂಜುನಾಥ ರೆಡೆಕರ, ಶರೀಫ್ ಖಾಜಿ, ರಘುನಾಥಗೌಡ, ಶಂಕರಗೌಡ, ಜಹೀರ್ ಕತಿಬ, ಮೊಹಮ್ಮದ್ ರಫೀಕ್, ಇಮ್ರಾನ್ ಮುಸ್ತಫಾ, ಪಾಂಡಪ್ಪ ಚವ್ಹಾಣ, ಪ್ರಶಾಂತ ಸುತಾರ, ಪ್ರಕಾಶ ನವಲೆ, ಶರಣಮ್ಮ ನಾಗರಾಳ, ಕುಮಾರಿ ಅಶ್ವಿನಿ ಅಂಗಡಿ, ಮಹೇಶ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.