ಉತ್ತರಪ್ರಭ

ಆಲಮಟ್ಟಿ: ರಾಷ್ಟ್ರದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ ಅಖಂಡ ವಿಜಯಪುರ ಜಿಲ್ಲೆಯ ರೈತರಿಗೆ, ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಿ ಪುಣ್ಯಕಟ್ಟಿಕೊಳ್ಳಿರಿ ಎಂದು ಹುಣಶ್ಯಾಳ ಪಿ.ಬಿ. ಗ್ರಾಮದ ವಿರಕ್ತಮಠದ ಸಂಗನಬಸವಸ್ವಾಮೀಜಿ ಹೇಳಿದರು.
ಸ್ಥಳೀಯ ಕೃಷ್ಣಾಭಾಗ್ಯ ಜಲ ನಿಗಮ(ನಿ) ಮುಖ್ಯ ಅಭಿಯಂತರರ ಕಚೇರಿಯ ಆವರಣದಲ್ಲಿ ಅಖಂಡ ಕರ್ನಾಟಕ ರೈತ ಸಂಘದವತಿಯಿಂದ ಕುಡಿಯುವ ನೀರಿಗಾಗಿ ಕಾಲುವೆ ಮೂಲಕ ಕೆರೆ ತುಂಬಿಸಲು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ 5ನೇ ದಿನವಾದ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.
ಬರಗಾಲದ ಬವಣೆಯಿಂದ ಬಳಲುತ್ತಿರುವ ವಿಜಯಪುರ ಜಿಲ್ಲೆಯ ಜನತೆಯ ನೀರಿನ ದಾಹ ನೀಗಿಸಲು ಆಲಮಟ್ಟಿಯಲ್ಲಿ ಬೃಹತ್ ಜಲಾಶಯ ನಿರ್ಮಿಸಲಾಗಿದೆ. ಪ್ರಸ್ತುತ ಬೇಸಿಗೆ ಕಡುವಾಗಿದೆ.ಮೂಕ ಜೀವಗಳು ತತ್ತರಿಸಿವೆ.ಜನ,ಜಾನುವಾರುಗಳು ನೀರಿಗಾಗಿ ತೀವ್ರ ಪರಿತಪ್ಪಿಸುವಂಥ ಪರಸ್ಥಿತಿ ಎದುರಾಗಿದೆ. ಸದ್ಯ ಜಲಾಶಯದಲ್ಲಿ ನೀರು ಸಂಗ್ರಹವಿದ್ದರೂ ನೀರು ಕೊಡಲು ಮೀನ-ಮೇಷ ಎಣಿಸದೇ ರೈತರಿಗೆ ನೀರು ಕೊಡಬೇಕು ಎಂದರು.
ಸರ್ಕಾರ ಚೆಲ್ಲಾಟ ರೈತರಿಗೆ ಸಂಕಟ ! ನಂತರ ಮಾತನಾಡಿದ ಅಖಂಡಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕಳೆದ 5ದಿನಗಳಿಂದ ಶಾಂತಿಯುತವಾಗಿ ಜಿಲ್ಲೆಯ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗಳನ್ನು ಕಾಲುವೆಗಳ ಮೂಲಕ ತುಂಬಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂಧಿಸದೇ ಇರುವದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸುವದರಿಂದ ಈ ಭಾಗದಲ್ಲಿನ ಜನ-ಜಾನುವಾರು, ವನ್ಯಜೀವಿಗಳ ನೀರಿನದಾಹ ತೀರುತ್ತದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗುವದರಿಂದ ಕೊಳವೆ ಬಾವಿ ಮತ್ತು ತೆರೆದ ಬಾವಿಗಳು ತುಂಬಲಿವೆ. ಇದೆಲ್ಲವನ್ನು ಗಮನಿಸಿ ಏ.30ರವರೆಗೆ ಕಾಲುವೆಗಳ ಮೂಲಕ ನೀರು ಹರಿಸಲು ಹಲವಾರು ಬಾರಿ ಸಂಘಟನೆವತಿಯಿಂದ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ಸರ್ಕಾರ ನೀರು ಬಿಟ್ಟಿದ್ದರೆ ರೈತರು ಧರಣಿ ನಡೆಸುವ ಪ್ರಮೇಯೇ ಬರುತ್ತಿರಲಿಲ್ಲ. ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿರುವದರಿಂದ ಅನಿವಾರ್ಯವಾಗಿ ಅಖಂಡ ಕರ್ನಾಟಕ ರೈತ ಸಂಘದವತಿಯಿಂದ ಅಹೋರಾತ್ರಿ ಧರಣಿ ನಡೆಸುವಂತಾಯಿತು. ಸರ್ಕಾರ ರೈತರ ಜೀವದೊಂದಿಗೆ ಚೆಲ್ಲಾಟವಾಡದೇ ಕಾಲುವೆಗಳ ಮೂಲಕ ನೀರು ಬಿಡಬೇಕು. ಇಲ್ಲದಿದ್ದರೆ ಸೋಮವಾರ ಮುಂಜಾನೆ 11ಗಂ.ನಿಂದ ಆಮರಣ ಉಪವಾಸ ನಡೆಸಲಾಗುವದು. ಆ ವೇಳೆ ಆಗುವ ಎಲ್ಲ ಆಗುಹೋಗುಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
123.081ಟಿಎಮ್‍ಸಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯದಲ್ಲಿ 43.839 ಟಿಎಮ್‍ಸಿ ನೀರು ಸಂಗ್ರಹವಿದೆ. ಇದರಲ್ಲಿ ಭಾಷ್ಪೀಕರಣ, ಜಲಚರಗಳಿಗಾಗಿ, ಕುಡಿಯುವ ನೀರಿಗಾಗಿ ಮೀಸಲಿರುವ ನೀರು 17.610ಟಿಎಮ್‍ಸಿ ನೀರು ಹೊರತುಪಡಿಸಿದರೂ ಉಳಿಯುವ 26.219ಟಿಎಮ್‍ಸಿ ನೀರಿನಲ್ಲಿ 1-2ಟಿಎಮ್‍ಸಿ ನೀರಿನಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಬಹುದಾಗಿದೆ. ಕೆರೆಗಳನ್ನು ತುಂಬಿಸಿದರೂ ಜಲಾಶಯದಲ್ಲಿ ಇನ್ನೂ 24-25ಟಿಎಮ್‍ಸಿ ನೀರು ಉಳಿಯುತ್ತದೆ. ಇದೆಲ್ಲದರ ಬಗ್ಗೆ ಸರ್ಕಾರಕ್ಕೆ ಅರಿವಿದ್ದರೂ ರೈತರಿಗೆ ನೀರು ಕೊಡಬಾರದು ಎನ್ನುವ ಮೊಂಡುತನವಿದೆಯೋ ಅಥವಾ ರೈತರು ಸತ್ತ ನಂತರ ಕೆರೆಗಳನ್ನು ತುಂಬಿಸಬೇಕು ಎನ್ನುವ ಇಚ್ಛೆ ಸರ್ಕಾರಕ್ಕೆ ಇದೆಯೋ ಎನ್ನುವದು ಅರ್ಥವಾಗದಂತಾಗಿದೆ ಎಂದು ಹೇಳಿದರು.
ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ವಿಠ್ಠಲ ಬಿರಾದಾರ, ಸಿದ್ದಲಿಂಗಪ್ಪ ಬಿರಾದಾರ, ಮಾಂತಯ್ಯ ಚಿಕ್ಕಮಠ, ಈರಣ್ಣ ದೇವರಗುಡಿ, ಚನ್ನಬಸಪ್ಪ ಸಿಂಧೂರ, ಮಲ್ಲಪ್ಪ ಮಾಡ್ಯಾಳ, ಸಂಗಪ್ಪ ಪಡಸಲಗಿ, ಗುರಲಿಂಗಪ್ಪ ಪಡಸಲಗಿ, ಶೇಖಪ್ಪ ಸಜ್ಜನ್, ರಾಜೇಸಾಬ ವಾಲಿಕಾರ ಹಾಗೂ ಇಂಗಳೇಶ್ವರ, ಬ್ಯಾಕೋಡ, ತಾಳಿಕೋಟೆ, ಹುಲಿಬೆಂಚಿ, ಹೂ.ಹಿಪ್ಪರಗಿ, ದೇವರಹಿಪ್ಪರಗಿ, ರಬಿನಾಳ, ಬಬಲೇಶ್ವರ, ಕಣಮುಚನಾಳ ಗ್ರಾಮಗಳ ರೈತರು ಇದ್ದರು.
ಅಹೋರಾತ್ರಿ ಧರಣಿ ಸತ್ಯಾಗ್ರಹವು 6ನೇ ದಿನಕ್ಕೆ ಕಾಲಿರಿಸಿತು.

Leave a Reply

Your email address will not be published. Required fields are marked *

You May Also Like

ಬೋಧಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚನೆ

2020-21 sಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆಗಳಾದ Dijital learning online/offline teaching, Study material preparation, LMS Preparation ಮುಂತಾದವುಗಳ ಬಗ್ಗೆ ತಯಾರಿ ಮಾಡಿಕೊಳ್ಳಲು, ಇಲಾಖೆ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ವಿಶ್ವವಿದ್ಯಾಲಯಗಳ ಭೋಧಕರಿಗೆ ಸೂಚಿಸಲಾಗಿದೆ.

ಎಸ್.ಎಸ್.ಎಲ್.ಸಿ-ಪಿಯುಸಿ ಪರೀಕ್ಷೆ ವೇಳಾಪಟ್ಟಿ: ಪಾಲಕ, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ..

ರಾಜ್ಯದಲ್ಲಿ ಜೂನ್ 25 ರಿಂದ ಜುಲೈ 4 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಜೂನ್ 18 ಕ್ಕೆ ಪಿಯುಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಎಟಿಎಂ ಕಳೆದ್ರೆ ಚಿಂತಿಸದಿರಿ, ನೀವು ಮಾಡಬೇಕಾಗಿದ್ದು ಏನು ಗೊತ್ತಾ?

ಅದೆಷ್ಟೋ ಜನ ಎಟಿಎಂ ಕಾರ್ಡ್ಗಳನ್ನು ಕಳೆದುಕೊಂಡು ಪರಿತಪಿಸಿದ್ದುಂಟು. ಮಾನಸಿಕ ನೆಮ್ಮದಿ ಕಳೆದುಕೊಂಡು ಇನ್ನಿಲ್ಲದೇ ಚಿಂತಿಸಿದ್ದುಂಟು. ಆದ್ರೆ ಇದೀಗ ಎಟಿಎಂ ಕಾರ್ಡ್ ಕಳೆದೊಯ್ತು ಅಂತ ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಚಿಂತೆಗೊಂದು ಪರಿಹಾರ ಇಲ್ಲಿದೆ.