ಉತ್ತರಪ್ರಭ ಸುದ್ದಿ
ಗದಗ:
ನಾಡು ಮೆಚ್ಚಿದ ಜನನಾಯಕ, ಸಹಕಾರ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲ ಅವರ ಧರ್ಮಪತ್ನಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಶಾಸಕ ಶ್ರೀ ಎಚ್.ಕೆ.ಪಾಟೀಲರ ಮಾತೋಶ್ರೀಯವರಾದ ಶ್ರೀಮತಿ ಪದ್ಮಾವತಿ ಕೆ. ಪಾಟೀಲರು ಇಂದು ಮಧ್ಯಾಹ್ನ 4 ಗಂಟೆಗೆ ಸ್ವರ್ಗವಾಸಿಗಳಾದರೆಂದು ತಿಳಿಸಲಾಗಿದೆ.
88 ವಸಂತಗಳ ತುಂಬುಜೀವನ ನಡೆಸಿದ ಶ್ರೀಮತಿ ಪದ್ಮಾವತಿಯವರು ಕೆಲಕಾಲದಿಂದ ವೃದ್ಧಾಪ್ಯ ಸಹಜ ತೊಂದರೆಗಳಿoದ ಬಳಲುತ್ತಿದ್ದರು. ಅವರು ತಮ್ಮ ಹಿಂದೆ ಇಬ್ಬರು ಪುತ್ರರಾದ ಎಚ್.ಕೆ.ಪಾಟೀಲ ಹಾಗೂ ಪಿ.ಕೆ.ಪಾಟೀಲರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಹುಲಕೋಟಿಯ ಮುಕ್ತಿಧಾಮದಲ್ಲಿ ನಾಳೆ ದಿನಾಂಕ 5 ರಂದು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You May Also Like

ಬೃಹತ್ ಮೇರವಣಿಗೆ ಮೂಲಕ ಸಿ.ಸಿ.ಪಾಟೀಲ ನಾಮಪತ್ರ ಸಲ್ಲಿಕೆ ನಾಳೆ

ಉತ್ತರಪ್ರಭ ನರಗುಂದ:ನರಗುಂದ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಸಿ.ಸಿ.ಪಾಟೀಲ ನಾಳೆ ದಿ. 19-4-2023ರ…

ಬಸ್ ಬ್ರೇಕ್ ಫೇಲ್ : ಸಮಯ ಪ್ರಜ್ಞೆ ಮೆರೆದ ಚಾಲಕ

ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಹತ್ತಿರ ಘಟನೆ ನಡೆದಿದೆ.

ಕಾರ್ಮಿಕ ಇಲಾಖೆ: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗದಗ : ಕಾರ್ಮಿಕ ಇಲಾಖೆ ಅಡಿಯಲ್ಲಿ ಬರುವ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಯಟಿಯಲ್ಲಿ ಖಾಲಿ…

ಗದಗ ಜಿಲ್ಲೆ : ನರೇಗಾದಲ್ಲಿ ಬಿಎಫ್‌ಟಿ ಹುದ್ದೆಗೆ ಅರ್ಜಿ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 5 ಬಿ.ಎಫ್.ಟಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.