ಚಿತ್ರವರದಿ : ಗುಲಾಬಚಂದ ಜಾಧವ
ಆಲಮಟ್ಟಿ(ವಿಜಯಪುರ ಜಿಲ್ಲೆ) : ಉತ್ಕಟ ಕಾಯಕದ ತತ್ವ ಶಾಸ್ತ್ರ ಪರಿಪಾಲಿಸಿ ಶರಣ ಸಂಸ್ಕೃತಿಯ ಪರಂಪರೆಯಲ್ಲಿ ಮಿಂದೆದ್ದು ಅವಿರತ ಸಮಾಜಮುಖಿ ಪರ ಅಮೋಘಮಯ ಕೆಲಸ ಕಾರ್ಯಗಳನ್ನು ಗೈದಿರುವ ರಾಷ್ಟ್ರಧರ್ಮ ದೃಷ್ಟಾರ ಕರುನಾಡು ಗಾಂಧಿ ಎನಿಸಿಕೊಂಡಿರುವ ಅಜ್ಞಾತ ಸಂತ ಹಡೇ೯ಕರ ಮಂಜಪ್ಪನವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೇಂದ್ರ ಸರಕಾರ ನೀಡಬೇಕು. ಈ ಮಹೋನ್ನತ ಪ್ರಶಸ್ತಿಗೆ ಒತ್ತಾಯ ಮಾಡುವ ತವಕದ ಕೆಲಸ ಪವಿತ್ರ ಬಸವ ನೆಲದಿಂದ ಮೊಳಗಬೇಕು ಎಂದು ಸಾಹಿತಿ ಆಯ್.ಬಿ.ಹಿರೇಮಠ ನುಡಿದರು.
ಇಲ್ಲಿನ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ 2021-22 ನೇ ಸಾಲಿನ ವಾಷಿ೯ಕ ಸ್ನೇಹ ಸಮ್ಮೇಳನ,ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುವ,ಪ್ರತಿಭಾ ಪುರಸ್ಕಾರ ಹಾಗು ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.


ಕಾಯಕ ನಿಷ್ಠೆ, ಶರಣರ ವಿಚಾರ ಮಂಥನದ ತತ್ವಗಳಲ್ಲಿ ಆಚಲವಾದ ನಂಬಿಕೆಯಿರಿಸಿಕೊಂಡಿದ್ದ ಮಂಜಪ್ಪನವರು ಸಮಾಜದ ಏಳಿಗೆಗಾಗಿ ಪರಿತಪ್ಪಿ ಜೀವ ಹಣ್ಣಾಗುವರೆಗೂ ದುಡಿದಿದ್ದಾರೆ.ಉಸಿರಿರುವರೆಗೂ ಶ್ರಮಿಸಿದ್ದಾರೆ. ಈ ಮಹಾತ್ಮನ ಸೇವಾ ಕಾಯಕ ಕೈಂಕರ್ಯಗಳು ಇತರರಿಗೆ ಮಾದರಿ. ಸ್ವಸ್ಥ ಸಮಾಜಕ್ಕಾಗಿ ಹಗಲಿರುಳು ಜೀವ ತೇದಿರುವ ಪುಣ್ಯಾತ್ಮ ಹಡೇ೯ಕರ ಮಂಜಪ್ಪ ಅವರಲ್ಲಿ ಹುದುಗಿದ್ದ ಆದರ್ಶಗುಣ ಎಂದೆಂದಿಗೂ ಸ್ಮರಣಾರ್ಹವಾಗಿವೆ ಎಂದರು.


1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗೈ ಅಧಿವೇಶನದಲ್ಲಿ ಮಂಜಪ್ಪನವರು, ಬಸವಣ್ಣನವರ ಜೀವನ ಚರಿತ್ರೆ, ಮೈಲಿಗಲ್ಲು, ಶರಣರ ವಚನಗಳು ಹಿಂದಿ ಭಾಷೆಗೆ ಅನುವಾದ ಮಾಡಿರುವ ಪ್ರತಿಗಳನ್ನು ಅಧಿವೇಶನದಲ್ಲಿ ಭಾಗಿಯಾಗಿದ್ದ ಮಹಾತ್ಮ ಗಾಂಧಿ ಹಾಗು ಡಾ‌. ಅಂಬೇಡ್ಕರ್ ಅವರಿಗೆ ನೀಡಿದ್ದರು. ಅದನ್ನು ಬಾಬಾ ಸಾಹೇಬರು ಏಕಚಿತ್ತದಿಂದ ಓದಿ ಮಂಜಪ್ಪನವರ ವ್ಯಕ್ತಿತ್ವ ಬಣ್ಣಿಸಿದರು. ನಾಡಿನ ಜನತೆಯನ್ನುದ್ದೇಶಿಸಿ ಹೊರ ಜಗತ್ತಿಗೆ ಅಮೂಲ್ಯ ಕಾಯಕದ ರತ್ನ ಅಣ್ಣನನ್ನು ಪರಿಚಯಿಸಿದ್ದಾರೆ ಕನಾ೯ಟಕದ ಜನ. ಹಾಗೆಯೇ ನಿಮ್ಮ ನೆಲದ ಅನರ್ಘ್ಯ ರತ್ನ ಇಂಥ ಮಹಾನ ಶರಣ ಹಡೇ೯ಕರ ಮಂಜಪ್ಪನವರು ಮಾಡಿದ ಸಾಮಾಜಿಕ ಕಳಕಳಿಯುತ ಪ್ರತಿಬಿಂಬದ ಕೆಲಸಗಳು ಅನನ್ಯವಾಗಿದೆ. ಹತ್ತು ವರ್ಷದ ಮೊದಲು ಹಿಂದಿ ಭಾಷೆಗೆ ತಜು೯ವೆ ಮಾಡಿ ಮಹಾನ ಜ್ಯೋತಿ ಬಸವಣ್ಣನ ಕುರಿತು ಬೆಳಕು ಚೆಲ್ಲಿ ಪರಿಚಯ ಮಾಡಿಕೊಟ್ಟಿದ್ದರೆ ತಾವು ಬೌದ್ಧ ಧರ್ಮ ಸ್ವೀಕರಿಸುತ್ತಿರಲಿಲ್ಲ. ಅಣ್ಣ ಬಸವಣ್ಣನ ಅನುಯಾಯಿ ಅಗುತ್ತಿದ್ದೆ.ಅವರು ಹುಟ್ಟು ಹಾಕಿದ ಧರ್ಮವನ್ನು ಸ್ವೀಕರಿಸುತ್ತಿದ್ದೆ ಎಂಬ ಮೌಲ್ಯಭರಿತ ಮಾತು ಅಂಬೇಡ್ಕರ್ ಅವರು ಅಂದು ಆಡಿದ್ದಾರೆ. ಆ ಮಾತುಗಳು ಕೇಳಿದರೆ ಈ ನೆಲದ ತಾಕತ್ತು ಎಂಥದ್ದು ಎಂಬುದು ನಮಗೆಲ್ಲ ಅರಿವಾಗುತ್ತದೆ. ಈ ಕರುನಾಡಿನ ನೆಲ ಸುಮ್ಮನೇ ಯಾವುದೋ ಮಾತಿಗೆ ಕೇಕೆ ಹಾಕುವಂಥ ನೆಲ ಅಲ್ಲ ಎಂದು ಮಾಮಿ೯ಕವಾಗಿ ಹೇಳಿದರು.


ಹತ್ತೊಂಬತ್ತು ವರ್ಷದ ಸನ್ಯಾಸಿ ಹತ್ತಿರ ಮಂಜಪ್ಪನವರು ಹೋಗಿ ಧರ್ಮದೀಕ್ಷೆ ನೀಡಿ ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಆ ಸನ್ಯಾಸಿ ನಾನು ನಿಮಗೆ ಧರ್ಮದೀಕ್ಷೆ ಕೊಡುತ್ತೆನೆ. ತಾವು ನನಗೆ ರಾಷ್ಟ್ರದೀಕ್ಷೆ, ಖಾದಿದೀಕ್ಷೆ ಕೊಡಿ ಎಂದು ವಿನಂತಿಸುತ್ತಾರೆ. ಅವರೆ ಬಂಥನಾಳದ ಸಂತ ಸಂಗನಬಸವ ಶಿವಯೋಗಿಗಳು ಎಂದು ಶ್ರೀಗಳ ಮತ್ತು ಮಂಜಪ್ಪನವರ ಅಂದಿನ ಭಾವನಾತ್ಮಕ ನೋಟ ಸಂಬಂಧದ ಮೆಲುಕು ಹಾಕಿದರು.


ಮಂಜಪ್ಪನವರು ಸಂಗನಬಸವ ಶಿವಯೋಗಿಗಳ ವ್ಯಕ್ತಿತಕ್ಕೆ ಮಾರು ಹೋಗಿದ್ದರು. ಪ್ರಭಾವಿತರಾಗಿ ಸಮಾಜ ಕಾಯಕ್ಕಿಳಿದರು. ಅಂಥ ಅದ್ಭುತ ಶಕ್ತಿ,ತಾಕತ್ತು ಸಂಗನ ಶ್ರೀಗಳ ಹೆಸರಿನಲ್ಲಿದೆ. ಕನಾ೯ಟಕ, ಆಂದ್ರ, ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಮೊದಲು ಅಕ್ಷರ ಕ್ರಾಂತಿ ಬೀಜ ಬಿತ್ತಿದ್ದಾರೆ ಶ್ರೀಗಳು. ಬ್ರಿಟಿಷ್ ರಿಂದಾಗಲಿ, ಸ್ವಾತಂತ್ರ್ಯದ ನಂತರ ನಡೆದಂತಹ ಯಾವುದೇ ಸರಕಾರಗಳಿಂದಾಗಲಿ ಇಲ್ಲಿ ಶೈಕ್ಷಣಿಕ ಪರಿಸರ ಅರಳಿಲ್ಲ. ಅದು ಬಂಥನಾಳ ಶ್ರೀಗಳಿಂದ ಸಾಧ್ಯವಾಗಿದೆ. ಶಿಕ್ಷಣ ಪ್ರೀತಿ ಸೂಸಿಬಂದಿದೆ. ಇದಕ್ಕೆಲ್ಲ ಮೂಲ ಪ್ರೇರಣೆ ಆಲಮಟ್ಟಿ ಹಡೇ೯ಕರ
ಮಂಜಪ್ಪನವರಾಗಿದ್ದಾರೆ. ಆ ಕಾರಣಕ್ಕೆ ಸದಾ ಶಿಕ್ಷಣ ಪ್ರೇಮಿಗಳ, ಸಮಾಜ ಚಿಂತಕರ ಮನದಲ್ಲಿ ಮಿನುಗಿ ಇಂದಿಗೂ ಹಸಿರಾಗಿದ್ದಾರೆ ಮಂಜಪ್ಪನವರು ಎಂದರು.


ಮಂಜಪ್ಪನವರ ಕುರಿತು ಹೊಂದಿರುವ ಅಭಿಮಾನ ಕೇವಲ ಅಭಿಮಾನವಾಗಿಯೇ ಉಳಿಯಬಾರದು. ಮಂಜಪ್ಪನವರ ಕುರಿತು ಸಮಾಜದ ಹಲ ಸ್ತರಗಳಲ್ಲಿರುವ ಅನಾಸಕ್ತಿ,ನಿರ್ಲಕ್ಷ್ಯ ಧೋರಣೆಯಿಂದಾಗಿಯೇ ಮಂಜಪ್ಪ ತುಳಿತ್ತಕ್ಕೊಳಪಟ್ಟಿದ್ದಾರೆ. ಅವರ ವ್ಯಕ್ತಿತ್ವದ ಅಧ್ಯಯನದಿಂದ ಸಮಾಜ ದೂರು ಉಳಿದಿದ್ದು ಹಾಗು ಪ್ರೋತ್ಸಾಹ ನೀಡದಿರುವುದು ದುರದೃಷ್ಟಕರ ಮತ್ತು ವಿಷಾಧನೀಯ ಎಂದರು.


ಬಹುತೇಕ ಇಂದಿಗೂ ಅಜ್ಞಾತವಾಗಿಯೇ ಉಳಿದಿರುವ ಈ ಅಜ್ಞಾತ ಶರಣನ ಮಹಾನ ಕೆಲಸಗಳನ್ನು ಪ್ರಾಂಜಲ್ಯ ಮನೋಭಾವದ ದೃಷ್ಟಿಯಿಂದ ಗಮನಿಸಿ ಹೊರ ಜಗತ್ತಿಗೆ ಅವರ ಮೇರು ವ್ಯಕ್ತಿತ್ವದ ವಿಶೇಷತೆ ಸಾರುವ ಸಂಕಲ್ಪ ಮಾಡಬೇಕಾಗಿದೆ. ಅದು ಆಲಮಟ್ಟಿ, ನಿಡಗುಂದಿ ಪವಿತ್ರ ನೆಲದಿಂದ ನಡೆಯಬೇಕು. ಇಲ್ಲಿ ಬದುಕಿಗೆ ಬೆಳಕು ನೀಡುವಂಥ ಶಿಕ್ಷಣ ಮಂಜಪ್ಪನವರು ನೀಡಿದ್ದಾರೆ. 1922 ರಲ್ಲಿ ಆಲಮಟ್ಟಿ ತಮ್ಮ ಕಾಯಕದ ಕರ್ಮಭೂಮಿಯನ್ನಾಗಿಸಿಕೊಂಡು ಮುದ್ದೇಬಿಹಾಳ, ಬಸವನ ಬಾಗೇವಾಡಿ ತಾಲ್ಲೂಕಿನ ಸುಮಾರು 369 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಂದು ಸಂಚರಿಸಿ ವ್ಯಸನಮುಕ್ತ ಗ್ರಾಮಕ್ಕೆ ಶ್ರಮಿಸಿದರು. ಸ್ವಾತಂತ್ರ್ಯ ಚಳುವಳಿಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಮಾಜದ ಬಗೆಬಗೆ ಕೆಲಸವನ್ನು ನಿಷ್ಟೆಯಿಂದ ಗೈದಿದ್ದಾರೆ. ನಾನಾ ಆಂದೋಲನದ ಮೂಲಕ ಸಕ್ರಿಯವಾಗಿ ಧುಮಿಕಿ ಭವ್ಯ ರಾಷ್ಟ್ರ ನಿಮಾ೯ಣಕ್ಕೆ ಅಪಿ೯ತಗೊಂಡಿದ್ದರು ಎಂದರು. ವಕೀಲ ವೃತ್ತಿಯನ್ನು ತೊರೆದು ಬಂಥನಾಳದ ಅಪ್ಪಗಳ ಮೂಲಕ ಶಿಕ್ಷಣ ಕ್ರಾಂತಿ ಗೈದಿದ್ದಾರೆ. ವ್ಯಸನಮುಕ್ತ ಸಮಾಜ ಕನಸು ಹೊತ್ತು ನಿರಂತರವಾಗಿ, ಶಾಶ್ವತವಾಗಿ ಹಸಿರಾಗಿ ಉಳಿಯುವಂತೆ ಸಮಾಜಪರ ಕಾರ್ಯಕ್ರಮಗಳ ಮೂಲಕ ಹೋರಾಡಿರುವ ಈ ಅಪ್ರತಿಮ ಹಡೇ೯ಕರ ಮಂಜಪ್ಪ ಎಂಬ ದಿವ್ಯ ಚೇತನಕ್ಕೆ ಭಾರತರತ್ನ ಪ್ರಶಸ್ತಿ ಲಭಿಸಲೇಬೇಕು. ಆ ದಿಸೆಯಲ್ಲಿ ಮಂಜಪ್ಪನವರ ಅಭಿಮಾನಿಗಳು ಒಕ್ಕೊರಲಿನಿಂದ ಒತ್ತಾಯಿಸುವ ಮೂಲಕ ಆಗ್ರಹಿಸಿಬೇಕು ಎಂದರು.


ಒಂದು ವರ್ಷ ನಿರಂತರವಾಗಿ ಮಂಜಪ್ಪನವರ ಕುರಿತು ವಿಚಾರ ಸಂಕೀರ್ಣಗಳು, ಗೋಷ್ಟಿಗಳು ಈ ಭಾಗದಲ್ಲಿ ಸಂಯೋಜಿಸಬೇಕು. ಈ ನೆಲದ ನೂರಾರು ಗ್ರಾಮಗಳಲ್ಲಿ ವ್ಯಸನಮುಕ್ತ ಸಮಾಜ ನಿಮಾ೯ಣಕ್ಕಾಗಿ ಮಂಜಪ್ಪ, ಬಂಥನಾಳ ಶಿವಯೋಗಿಗಳ ಹೆಸರನ್ನು ಹೊತ್ತಿರುವ ಯಾತ್ರೆಯೊಂದನ್ನು ಕೈಗೊಳ್ಳಬೇಕು ಆ ಕಾರ್ಯಕ್ರಮಗಳಿಗೆ ಸಾಮಾಜಿಕವಾಗಿ ವಚನ ಸಾಹಿತ್ಯದ ಬಗ್ಗೆ, ಮಂಜಪ್ಪನವರ ಬಗ್ಗೆ ಅತ್ಯಂತ ಕಳಕಳಿ ಗೌರವ ಹೊಂದಿರುವ ನಾಡಿನ ಮಠ ಮಾನ್ಯಗಳ ಪೂಜ್ಯರನ್ನು,ಚಿಂತಕರನ್ನು, ಪ್ರತಿಭಾನ್ವಿತ ರಾಜಕೀಯ ಗಣ್ಯಮಾನ್ಯರನೇಕರನ್ನು ಆಹ್ವಾನಿಸಿ ಮಂಜಪ್ಪನವರ ಅರ್ಥಪೂರ್ಣ ಉತ್ಸೋವಾಚರಣೆಗೆ ಮುಂದಾಗಬೇಕು. ಆ ಮೂಲಕ ಭಾರತರತ್ನ ಪ್ರಶಸ್ತಿ ಬೇಡಿಕೆಯ ತೀವ್ರತೆಯನ್ನು ಹೆಚ್ಚಿಸಬೇಕಲ್ಲದೇ ಮಂಜಪ್ಪನವರಿಗೆ ಪ್ರಶಸ್ತಿ ಧಕ್ಕೂವರೆಗೂ ಅಭಿಮಾನಿಗಳು ವಿಶ್ರಮಿಸಬಾರದು ಎಂದು ಅವರು ಹೇಳಿದರು.
ಗ್ರಾ.ಪಂ.ಅಧ್ಯಕ್ಷ ಮಂಜುನಾಥ್ ಹಿರೇಮಠ ಉದ್ಘಾಟಿಸಿದ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.


ರಾಜ್ಯ ಸರಕಾರಿ ನೌಕರರ ಸಂಘದ ಆಲಮಟ್ಟಿ ಯೋಜನಾ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ, ನಿಡಗುಂದಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಂಕರ ಜಲ್ಲಿ, ಸ್ಮಿತಾ ಬೆಳಗಲ್, ಎಂ.ಎಚ್.ಎಂ.ಪ.ಪೂ.ಕಾಲೇಜಿನ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಪದವಿ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಕೆಲೂರ,ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಎಂ.ಎಚ್.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ತನುಜಾ ಪೂಜಾರಿ, ಕನ್ನಡ ಮಾದ್ಯಮ ಪ್ರಾ.ಶಾಲೆ ಗುರುಮಾತೆ ಕಮಲಾಕ್ಷಿ ಹಿರೇಮಠ, ಅತಿಥೇಯ ಶಾಲೆಯ ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ ಗಾಳಪ್ಪಗೋಳ, ಗಂಗಾಧರ ಹಿರೇಮಠ,ಜಗದೇವಿ ಕೆ, ಸಾವಿತ್ರಿ ಸಜ್ಜನ
ಶಾಲಾ ಪ್ರಧಾನಮಂತ್ರಿ ಕಾಶೀಮ್ ಗುಣಕಿ, ತಸ್ಮಿಯಾ ನಿಂಬಾಳ ಇತರರಿದ್ದರು.
ಅಪಿ೯ತಾ ಪೂಜಾರಿ ಸ್ವಾಗತಿಸಿದರು.ಸುಪ್ರಿಯಾ ಹಳ್ಳಿ ನಿರೂಪಿಸಿದರು. ವಿಜಯಲಕ್ಷ್ಮಿ ರಾಠೋಡ ವಂದಿಸಿದರು.
ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *

You May Also Like

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋದಿ ಧೋರಣೆ ಅನುಸರಿಸುತ್ತಿವೆ: ಸುಂಕದ

ಉತ್ತರಪ್ರಭ ಸುದ್ದಿ ಮುಳಗುಂದ: ಅನ್ಯಾಯಕ್ಕೊಳಗಾದ ರೈತರಿಗೆ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರೈತ…

ಹಳ್ಳದ ರಭಸಕ್ಕೆ ಕೊಚ್ಚಿ ಹೋದ ಯುವಕ

ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ ವೇಳೆ ಹಗ್ಗ ತುಂಡಾಗಿ ವ್ಯಕ್ತಿಯೋರ್ವ ಹಳ್ಳದಲ್ಲಿ ಕೊಚ್ಚಿಹೋದ ಘಟನೆ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ನಡೆದಿದೆ. ಪಟ್ಟಣದ ಹಿರೇಹಳ್ಳದ ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ ವೇಳೆಯಲ್ಲಿ ಹಗ್ಗ ತುಂಡಾಗಿದೆ. ಭಾರಿ ಮಳೆಯಿಂದಾಗಿ ಮಸ್ಕಿ ಜಲಾಶಯ ಭರ್ತಿ ಆಗಿದೆ. ಹೀಗಾಗಿ ಜಲಾಶಯದ ನೀರು ಹಳ್ಳಕ್ಕೆ ಬಿಡಲಾಗಿತ್ತು. ಬೆಳಗಿನ ವೇಳೆ ಶೌಚಕ್ಕೆ ತೆರಳಿದ ಯುವಕರು ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿದ್ದರು.

ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾ ಬಗರಹುಕುಮ್ ಸಾಗುವಳಿ; ಸದನದಲ್ಲಿ ಚರ್ಚಿಸಲು ವಿರೋಧ ಪಕ್ಷದ ನಾಯಕರಿಗೆ – ರವಿಕಾಂತ ಅಂಗಡಿ ಒತ್ತಾಯ

ಉತ್ತರಪ್ರಭ ಸುದ್ದಿಗದಗ: ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾದ ಬಗರ ಹುಕುಮ್ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಸಾಗುವಳಿ…