ಬೆಂಗಳೂರ: ಇತ್ತೀಚಿಗೆ ವರ್ಲ್ಡ್ ಸ್ಕಿಲ್ ಕಂಪೇಟೇಷನ-2021 ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕರ್ನಾಟಕ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ 7 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ದೇಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಆಯ್ಕೆ ಯಾಗಿ ಮುಂದೆ 2022 ರಲ್ಲಿ ಶಾಂಘೈ ನಡೇಯಲಿರುವ ವಲ್ಡ ಸ್ಕಿಲ್ ಸ್ಪರ್ಧೆಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಮತ್ತು ಸ್ಪರ್ಧೆಯ ಕೌಶಲ್ಯ ವಿಭಾಗ ಹಾಗೂ ಕಾಲೇಜಿನ ವಿವರ ಈ ಕೆಳಕಂಡಂತೆ ಇರುತ್ತದೆ.1. ಹರೀಶ್- ಮೆಡಾಲಿಯನ್ ಆಫ್ ಎಕ್ಸಲೆನ್ಸ್ – ಸಂಯೋಜಕ ಉತ್ಪಾದನೆ- ಜಿಟಿಟಿಸಿ ಧಾರವಾಡ, 2.ಗಿರಿಧರ್ ಕೆ- ಕಂಚು – ಸಂಯೋಜಕ ತಯಾರಿಕೆ- ಜಿಟಿಟಿಸಿ ಬೆಳಗಾವಿ, 3.ಗಣೇಶ ಇರ್ಕಲ್- ಬಂಗಾರ- ಪ್ಲಾಸ್ಟಿಕ್ ಡೈ ತಯಾರಿಕೆ – ಜಿಟಿಟಿಸಿ ಧಾರವಾಡ, 4.ರಾಘವೇಂದ್ರ: ಬಂಗಾರ- ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಯಾಡ- ಜಿಟಿಟಿಸಿ ಬೆಂಗಳೂರು, 5.ಜಸ್ಟಿನ್- ಬೆಳ್ಳಿ- ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಯಾಡ ಜಿಟಿಟಿಸಿ ಬೆಂಗಳೂರು, 6.ಫರ್ಹಾನ್ ಪಂತೋಜಿ- ಬಂಗಾರ – ಸಿಎನ್‌ಸಿ ಮಿಲ್ಲಿಂಗ್ – ಜಿಟಿಟಿಸಿ ಧಾರವಾಡ, 7.ಕಿಶೋರ್ : ಕಂಚು : ಕೈಗಾರಿಕಾ ನಿಯಂತ್ರಣಗಳು, ಜಿಟಿಟಿಸಿ ಬೆಂಗಳೂರು.

ಧಾರವಾಡ ಕೇಂದ್ರದ -3 ವಿದ್ಯಾರ್ಥಿಗಳು ಹಾಗೂ ಬೇಳಗಾವ -1 ಮತ್ತು ಬೇಂಗಳೂರು-3 ವಿದ್ಯಾರ್ಥಿಗಳು ಸೆರಿದಂತೆ ಒಟ್ಟಾರೆ ಜಿಟಿಟಿಸಿ ಸಂಸ್ಥೆಯಿಂದ ಏಳು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.



ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಸಂಸ್ಥೆಯ ಘನತೆ ಹೆಚ್ಚಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ ರಾಘವೇಂದ್ರ , ಆಡಳಿತ ಅಧಿಕಾರಿ ಶ್ರೀ ಮುನಿರ್ ಖತೀಬ್, ಸಹ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಮೇಶ, ಪ್ರಮುಖರಾದ ಪ್ರೋ. ಶ್ರೀ ಮುತ್ತುಕುಮಾರ್,. ಪ್ರೋ ಶ್ರೀ ರಾಜಕುಮಾರ್, ಪ್ರೋ. ಶ್ರೀ ಅಶೋಕ್ ವಾಲಿಕಾರ, ಹಾಗೂ ಧಾರವಾಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶಿವಾನಂದ ಕುಂಬಾರ, ಬೆಳಗಾವ್ ಕಾಲೇಜಿನ ಪ್ರಿನ್ಸಿಪಾಲರು ಪ್ರೋ. ಶ್ರೀ M.G. ಮೊಗೇರ, ಬೆಂಗಳೂರು ಕಾಲೇಜಿನ ಪ್ರಿನ್ಸಿಪಾಲರಾದ ಪ್ರೋ ಶ್ರೀ ಪುಂಡರಿಕಾಕ್ಷೀ, ಪ್ರೊ.ಶ್ರೀ ಬಸವರಾಜ. ತರಬೇತಿದಾರ ಪ್ರೊ. ಶ್ರೀ ಶಂಕರ ಸರ್ವ ಸಿಬ್ಬಂದಿ ವರ್ಗದವರು ಅಭಿನಂದನೆಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೆ ಎಸ್ ಆರ್ ಟಿ ಸಿ ಬಸ್ ಜಪ್ತಿ..!

ಉತ್ತರಪ್ರಭರೋಣ: ರೋಣ ಬಸ್ ನಿಲ್ದಾಣದಲ್ಲಿ ಬಾಗಲಕೋಟೆ ಘಟಕಕ್ಕೆ ಒಳಪಟ್ಟ ಬಸ್ ಹೈಕೋರ್ಟ್ ಆದೇಶದ ಮೇರೆಗೆ ವಶಕ್ಕೆ…

ಕ್ಯಾಶ್ ಲೆಸ್ಸ್ ಹೆಲ್ತ್ ಟ್ರೀಟ್ಮೆಂಟ್ ಸೇವೆ ಶೀಘ್ರ ಜಾರಿಗೆ – ಷಡಕ್ಷರಿ

ಉತ್ತರಪ್ರಭಆಲಮಟ್ಟಿ : ರಾಜ್ಯದ ಸರಕಾರಿ ನೌಕರರಿಗೆ ಹಾಗು ಅವರ ಅವಲಂಬಿತ ಕುಟುಂಬಕ್ಕೆ ಸುವರ್ಣ ಆರೋಗ್ಯ ಟ್ರಸ್ಟ್…

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ

 ಉತ್ತರಪ್ರಭ ಗದಗ: ತೋಂಟದಾರ್ಯ  ಇಂಜೀನಿಯರಿಂಗ್ ಕಾಲೇಜಿನ  ಇಲೇಕ್ಟ್ರೀಕಲ್ & ಇಲೇಕ್ಟ್ರಾನಿಕ್ಸ್ ವಿಭಾಗ ಮತ್ತು ಕಾಲೇಜಿನ ಇಂಟರಪುನರಶಿಪ್…

ಶೌರ್ಯ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ: ಸಿಎಂ ಘೋಷಣೆ

vijaya diwas