ಉತ್ತರಪ್ರಭ ಸುದ್ದಿ

ಗೋನಾಳ ಗ್ರಾಮದಲ್ಲಿ ಆರೋಪಿ ರಮೇಶ ದುಂಡಪ್ಪ ತೇಲಿ ಇವನು ಹೆಂಡತಿ ಮೇಲೆ ಸಂಶಯ ಮಾಡುತ್ತಾ ಬಂದು ದಿನಾಂಕ: 08-05-2019 ರಂದು ರಾತ್ರಿ 09-30 ಗಂಟೆಯ ಸುಮಾರಿಗೆ ಹೆಂಡರಿಯೊoದಿಗೆ ಬಾಯಿ ಮಾತಿನ ಜಗಳ ಮಾಡಿದಾಗ, ಅವಳು ಏನು ಮಾಡಿಕೊತೀ ಮಾಡಕೋ ಅಂತಾ ಅಂದಿದ್ದಕ್ಕೆ ಅವಳು ಮಲಗಿದ ಮೇಲೆ ಕೊಡ್ಲಿಯಿಂದ ಹೊಡೆದು ಕೊಲೆ ಮಾಡಿದರಾಯಿತು ಅಂತಾ ಯೋಚಿಸಿ ಅವಳು ನಿದ್ದೆ ಮಾಡುತ್ತಿದ್ದನ್ನು ಖಾತ್ರಿ ಮಾಡಿಕೊಂಡು ದಿನಾಂಕ: 09-05-2019 ರ ಬೆಳಗಿನ ಜಾವಾ 03-00 ಗಂಟೆಗೆ ಮನೆಯಲ್ಲಿ ಇದ್ದ ಕೊಡ್ಲಿ ತೆಗೆದುಕೊಂಡು ಅದರ ತುಂಬಿನಿoದ ತನ್ನ ಹೆಂಡತಿಯ ತಲೆಗೆ ಹೊಡೆದು ಭಾರೀ ರಕ್ತಗಾಯ ಮಾಡಿ ಕೊಲೆ ಮಾಡಿ ನಂತರ ತನ್ನ ಆರು ತಿಂಗಳ ಮಗನ ಕುತ್ತಿಗೆಯ ಮೇಲೆ ಕಾಲಿಟ್ಟು ತುಳಿದು ಉಸಿರುಗಟ್ಟಿಸಿ ಕೊಲೆ ಮಾಡಿದ ಅಪರಾಧ ಕುರಿತು ಕಲಂ: 302 ಭಾ.ದಂ.ಸo ರಡಿಯಲ್ಲಿ ಅಪರಾಧ ಮಾಡಿದ್ದಕ್ಕೆ ಶಿರಹಟ್ಟಿ, ಸಿ.ಪಿ.ಐ ಬಾಲಚಂದ್ರ ಡಿ. ಲಕ್ಕಂ ಇವರು ತನಿಖೆ ಮಾಡಿ ಆರೋಪಿ ವಿರುದ್ಧ ಆರೋಪಣ ಪತ್ರವನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಎಸ್ ಮಹಾಲಕ್ಷ್ಮಿ ನೇರಳೆ ಇವರು ಸದರ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿತನಾದ ರಮೇಶ ದುಂಡಪ್ಪ ತೇಲಿ ಇತನಿಗೆ ದಿನಾಂಕ: 24-11-2021 ರಂದು ಭಾ.ದಂ.ಸo 302 ರಡಿ ಜೀವಾವಧಿ ಶಿಕ್ಷೆ ಹಾಗೂ 10,000 / – ರೂ ದಂಡ, ದಂಡ ತುಂಬಲು ತಪ್ಪಿದ್ದಲ್ಲಿ 06 ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಸವಿತಾ ಎಂ ಶಿಗ್ಲಿ ಸರಕಾರಿ ಅಭಿಯೋಜಕರು, ಗದಗ ಇವರು ವಾದವನ್ನು ಮಂಡಿಸಿದರು.

Leave a Reply

Your email address will not be published. Required fields are marked *

You May Also Like

ನದಿ ಪಾತ್ರದ ಜನರ ಬದುಕು ಮೂರುಬಟ್ಟೆ ಮಾಡಿದ ವರುಣ!

ರಾಯಚೂರು : ಮಳೆರಾಯನ ಅಟ್ಟಹಾಸಕ್ಕೆ ಇಡೀ ಉತ್ತರ ಕರ್ನಾಟಕವೇ ನಲುಗಿ ಹೋಗುತ್ತಿದೆ.

ಭಟ್ಕಳದಲ್ಲಿ ಈಗ ಕೊರೊನಾದ್ದೇ ಆಟ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ ಬರೋಬ್ಬರಿ 12 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬ ಸೋಂಕಿಗೆ ಬಲಿಯಾಗಿದ್ದು, ಇಡೀ ಜಿಲ್ಲೆಯ ಜನರೇ ಬೆಚ್ಚಿ ಬೀಳುವಂತೆ ಮಾಡಿದೆ.

ಶಿರಾದಲ್ಲಿ ದಾಖಲೆ ಬರೆದ ಬಿಜೆಪಿ!

ತುಮಕೂರು : ಶಿರಾದಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಇತಿಹಾಸ ನಿರ್ಮಿಸಿದೆ.