ಕೆರೆ ಹಸ್ತಾಂತರ ಸಮಾರಂಭ,
ಶ್ರೀ ಧರ್ಮಸ್ಥಳ ಕ್ಷೇತ್ರದ ವೀರೇಂದ್ರ ಹೆಗ್ಗಡೆ ಅವರಿಂದ ಉದ್ಘಾಟನೆ

ಮುಳಗುಂದ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಬಾಲಲೀಲಾ ಮಹಾಂತ ಶಿವಯೋಗಿ ಕೆರೆ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿ 246 ನೇ ಪುನಶ್ಚೇತನಗೊಳಿಸಿದ ಪಟ್ಟಣಶೆಟ್ಟಿ ಕೆರೆಯನ್ನ ನಾಳೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿ, ಹಸ್ತಾಂತರ ಮಾಡುವರು. ಎಂದು ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ತಿಳಿಸಿದರು.

ಅವರು ಇಲ್ಲಿನ ಗವಿಮಠದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಗದಗ ಜಿಲ್ಲೆಯಲ್ಲಿ 2021-22 ಸಾಲಿನಲ್ಲಿ ನಮ್ಮೂರು ನಮ್ಮ ಕರೆ ಯೋಜನೆಯಡಿನ 85.90 ಲಕ್ಷ ರೂ ಅನುದಾನದಲ್ಲಿ 10 ಕೆರೆಗಳನ್ನ ಪುನಶ್ಚೇತನ ಕೈಗೊಂಡಿತ್ತು, ಈಗಾಗಲೇ 9 ಕೆರೆಗಳು ಕೆಲಸ ಪೂರ್ಣಗೊಂಡಿದ್ದು ಒಂದು ಕೆರೆ ಆರಂಭದ ಹಂತದಲ್ಲಿದೆ. ಇಲ್ಲಿನ 5 ಎಕರೆ 35 ಗುಂಟೆ ವಿಸ್ತಿರ್ಣದ ಪಟ್ಟಣಶೆಟ್ಟಿ ಕೆರೆಗೆ ಗ್ರಾಮಾಭಿವೃದ್ದಿ ಯೋಜನೆಯು 4. 67 ಲಕ್ಷ ರೂ ಅನುದಾನ ನೀಡಿದ್ದು ಕೆರೆ ಸಮಿತಿ ಹಾಗೂ ಸ್ಥಳಿಯರ ಸಹಕಾರದಿಂದ 5.32 ಲಕ್ಷ ಸಂಗ್ರಹಿಸಿ ಒಟ್ಟು 9.99 ಲಕ್ಷ ವೆಚ್ಚದಲ್ಲಿ ಅಚ್ಚುಕಟ್ಟಾಗಿ ಕೆರೆ ನಿರ್ಮಿಸಲಾಗಿದೆ. ಕೆರೆಯ ದಂಡೆಯ ಮೇಲೆ ಪಂಚಾಯ್ತಿಯವರು ವಿವಿಧ ಬಗೆಯ 750 ಸಸಿಗಳನ್ನ ನೆಟ್ಟಿದ್ದಾರೆ. ಕೆರೆಗೆ ಮಳೆ ನೀರು ಸಂಗ್ರಹವಾಗಿ ಸುತ್ತಮುತ್ತಲಿನ ಭೋರವೆಲ್ ಗಳು ರೀಚಾರ್ಜ ಆಗಿವೆ. ಎಂದರು.

ನಾಳೆ ಬೆಳಿಗ್ಗೆ 9 ಕ್ಕೆವೀರೇಂದ್ರ ಹೆಗ್ಗಡೆ ಅವರಿಂದ ಕೆರೆಗೆ ವಿಶೇಷ ಪೂಜೆ, ಭಾಗಿನ ಅರ್ಪಣೆ, ನಾಮಫಲಕ ಅನಾವರಣ ನಡೆಯಲಿದ್ದು ನಂತರ ಎಸ್.ಜೆ.ಜೆ.ಎಂ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಸಮಾರಂದಲ್ಲಿ ಕೆರೆಯ ಹಸ್ತಾಂತರ ಹಾಗೂ 12001ನೇ ಸ್ವ ಸಹಾಯ ಸಂಘವನ್ನ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಊದ್ಘಾಟಿಸುವರು. ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಶಾಸಕ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಡಿ.ಆರ್.ಪಾಟೀಲ, ಶಿವಣ್ಣ ನೀಲಗುಂದ, ಮಹಾದೇವಪ್ಪ ಬಟ್ಟೂರ ಮೊದಲಾದವರು ಭಾಗವಹಿಸಲಿದ್ದಾರೆ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಗದಗ ತಾಲೂಕ ಯೋಜನಾಧಿಕಾರಿ ಸುರೇಂದ್ರ ನಾಯಕ್, ಕರುಣಾಕರ, ಜಗದೀಶ, ಅಶೋಕ, ರಾಜು ಲಕ್ಕುಂಡಿ, ಅಶೋಕ ಹುಣಸಿಮರದ ಹಾಗೂ ಕೆರೆ ಸಮಿತಿ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಉತ್ತರದಲ್ಲಿ ರಣ ಬಿಸಿಲು….ದಕ್ಷಿಣದಲ್ಲಿ ಭರ್ಜರಿ ಮಳೆ!

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ರಣ ಬಿಸಿಲು ಮುಂದುವರೆದಿದೆ. ವಿಜಯಪುರ…

ಗದಗ ಜಿಲ್ಲೆಯಲ್ಲಿಂದು 06 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 6 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 243…

ಪಕ್ಷೇತರ ಅಬ್ಯರ್ಥಿಗೆ ಸಿಪಿಐಎಂ ಬೆಂಬಲ

ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಸಿಪಿಐಎಂ ಪಕ್ಷ ಬೆಂಬಲಿಸಲಿದೆ ಎಂದು ಸಿಪಿಐಎಂ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ತಿಳಿಸಿದರು.

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ!

ಬೆಂಗಳೂರು : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಮಧ್ಯೆ ತೈಲ ಬೆಲೆ…