ಗದಗ: ಜೂನ್ ಒಂದರವರೆಗೂ ಇದ್ದ ಲಾಕ್ ಡೌನ್ 7 ನೇ ತಾರೀಖಿನವರೆಗೂ ಮುಂದುವರಿಸಲಾಗುವುದು. ಕೆಲ ಸಡಿಲಿಕೆಯೊಂದಿಗೆ ಗದಗ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಅವರು ಜಿಲ್ಲಾಡಳಿತ ಭವನದಲ್ಲಿ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜೂ.1 ಹಾಗೂ 2ನೇ ತಾರೀಖ್ ಈ ಎರಡು ದಿನಗಳ ಕಾಲ ದಿನಸಿ ಖರೀದಿಗೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ವಿದ್ದು, ಉಳಿದ ದಿನಗಳಲ್ಲಿ ಹೋಂ ಡಿಲೆವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ಹಾಲು ಮೊಸರು ಖರೀದಿಗೆ ಪ್ರತಿದಿನ ಬೆಳಿಗ್ಗೆ 6 ರಿಂದ 8 ರವರೆಗೆ ಮಾತ್ರ ಅವಕಾಶವಿದೆ. ತರಕಾರಿ ಮಾರಾಟಕ್ಕೆ ತಳ್ಳುಗಾಡಿಯಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಗೆ ಕೋವಿಡ್ ನಿಯಮಾವಳಿ ಪಾಲಿಸಿ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಮಾತ್ರ ಸಮಯ ನಿಗದಿಪಡಿಸಲಾಗಿದೆ.

ಮಾಂಸದಂಗಡಿಗೆ ನಾಳೆ ಮತ್ತು ನಾಡಿದ್ದು ಮಾತ್ರ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅವಕಾಶವಿದ್ದು, ಕೃಷಿ ಸಂಬಂಧಿತ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 12 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಹೋಟೆಲ್ ಗಳು ಆರಂಭಕ್ಕೆ ಅವಕಾಶವಿಲ್ಲ. ಹಾಗೂ ಜಿಲ್ಲೆಯ ಎಲ್ಲಾ ವೈನ್ ಶಾಪ್ ಮತ್ತು ಬಾರ್, ರೆಸ್ಟೋರೆಂಟ್ ಗಳ ತೆರವಿಗೆ ಅನುಮತಿಯಿಲ್ಲ. ಇನ್ನು ಈಗಾಗಲೇ ಅನುಮತಿ ಪಡೆದ ಮದುವೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ನನ್ನನ್ನು ಕೇಳಿದರೆ ನನ್ನ ಅಭಿಪ್ರಾಯ ತಿಳಿಸುವೆ. ನಮ್ಮೆಲ್ಲರ ಗಮನ ಈಗ ಕೊರೊನಾ ನಿಯಂತ್ರಣಕ್ಕೆ ತರುವುದು ಮಾತ್ರ ಎಂದು ಹೇಳಿದರು.

ಇದೇ ವೇಳೆ ಗದಗ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಇದುವರೆಗೂ 11 ಬ್ಲಾಕ್ ಫಂಗಸ್ ಪ್ರಕರಣ ಖಾತ್ರಿಯಾಗಿವೆ. ಎಲ್ಲರಿಗೂ ಜಿಮ್ಸ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲಾಕ್ ಫಂಗಸ್ ಚಿಕಿತ್ಸೆಗೆ ಔಷಧಿ ಕೊರತೆಯಿದೆ, ಅದನ್ನು ನೀಗಿಸಲಾಗುತ್ತದೆ ಎಂದರು.

ಸುದ್ದಿಗೋಷ್ಟಿಯಲ್ಲಿ ವಿಪ ಸದಸ್ಯ ಎಸ್.ವಿ.ಸಂಕನೂರ್, ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಎಸ್ಪಿ ಯತೀಶ್ ಎನ್, ಜಿಪಂ ಸಿಇಓ ಭರತ್ ಎಸ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಶೀಘ್ರವೇ ಅಂಗನವಾಡಿ ಬಾಗಿಲು ತೆರೆಯಲು ಸರ್ಕಾರ ನಿರ್ಧಾರ

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಂದ್ ಆಗಿದ್ದ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಟೈರ್ ಗೆ ಬೆಂಕಿ ಹಚ್ಚಲು ಪೊಲೀಸರ ವಿರೋಧ: ಕರವೇ ಕಾರ್ಯಕರ್ತರ ಆಕ್ರೊಶ

ಕರ್ನಾಟಕ ಬಂದ್ ಹಿನ್ನಲೆ, ಮುಳಗುಂದ ನಾಕಾ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಟೈರ್ ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು.

ಬಾಗಲಕೋಟೆ ರೋಟರಿ ಕ್ಲಬ್ ವತಿಯಿಂದ ಹಿರಿಯ ಪತ್ರಕರ್ತರಿಗೆ ಸನ್ಮಾನ..

ಬಾಗಲಕೋಟೆ: ನಗರದ ರೋಟರಿ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಇಂದು ಹಿರಿಯ ಪತ್ರಕ ರ್ತರಾದ…

ದೇಶ ಸೇವೆಗೆ ಮುಂದಾದ ಯುವ ಪಡೆಗೆ ತರಬೇತಿ ಅತ್ಯಾವಶ್ಯ :ಜಿ ಎಸ್ ಪಾಟೀಲ

ಉತ್ತರ ಪ್ರಭ ಸುದ್ದಿರೋಣ : ತಾಲೂಕಿನ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಪುರ ಸಭೆ ಉಪಾಧ್ಯಕ್ಷ ಮಿಥುನ್ ಜಿ…