ಬೆಂಗಳೂರು: ಜೂನ್ 7ರ ವರೆಗೆ ಎಂದಿನಂತೆ ಲಾಕ್ಡೌನ್ ಇರುತ್ತದೆ. ಜೂನ್ 7ರ ನಂತರ ಲಾಕ್ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಜೂನ್ 5 ರಂದು ಲಾಕ್ ಡೌನ್ ವಿಸ್ತರಣೆಯ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಈ ಕುರಿತು ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಲಾಕ್ ಡೌನ್ ಹಿನ್ನೆಲೆ ರಾಜ್ಯದ ಜನರು ಸಹಕಾರ ನೀಡಬೇಕು. ಜೂನ್ 7ರ ವರೆಗೆ ರಾಜ್ಯದಲ್ಲಿ ಬಿಗಿ ಕ್ರಮ ಮುಂದುವರಿಯುತ್ತದೆ. ಕೊರೊನಾ ನಿಯಂತ್ರಣ ನೋಡಿಕೊಂಡು ಲಾಕ್ಡೌನ್ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
2ನೇ ಅಲೆಯಲ್ಲಿ ನಿರೀಕ್ಷೆಗೂ ಮೀರಿ ಕೊವಿಡ್ ಪ್ರಕರಣ ಹೆಚ್ಚಳವಾಗಿದೆ. ಈಗ ಕೊರೊನಾ ಕೇಸ್ ಕಡಿಮೆಯಾಗಿರುವುದು ನೆಮ್ಮದಿ ವಿಚಾರ. ಕೊರೊನಾ ಕಡಿಮೆಯಾಯಿತು ಎಂದು ಸುಮ್ಮನಿರುವಂತಿಲ್ಲ. ಹಳ್ಳಿಗಳಲ್ಲಿ ಹೆಚ್ಚು ಕೊವಿಡ್ ಟೆಸ್ಟ್ ಮಾಡಬೇಕು. ಕೆಲವೊಂದು ಹಳ್ಳಿಗಳಲ್ಲಿ ಒಂದೇ ಒಂದು ಕೇಸ್ ಪತ್ತೆಯಾಗಿಲ್ಲ. ಅಂತಹ ಹಳ್ಳಿಗಳಿಗೆ ಕೊರೊನಾ ಹರಡದಂತೆ ನಿಗಾವಹಿಸಬೇಕು ಎಂದು ಜಿಲ್ಲಾಡಳಿತಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು.

Leave a Reply

Your email address will not be published. Required fields are marked *

You May Also Like

ಒಡಿಶಾ ಸಿಎಂ ಜೊತೆ ಪ್ರಧಾನಿ ಸಭೆ: ಯಾಸ್ ಚಂಡಮಾರುತದಿಂದ ಹಾನಿ ಮಾಹಿತಿ

ಭುವನೇಶ್ವರ: ಶುಕ್ರವಾರ ಬೆಳಗ್ಗೆ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಲ್ಲಿನ ವಿಮಾನ ನಿಲ್ದಾಣದ ಕಾನ್ಫರೆನ್ಸ್ ಹಾಲ್ ನಲ್ಲಿ ಇಡಿಶಾ ಸಿಎಂ ನವೀನ್ ಪಟ್ನಾಯಕ್ ಜೊತೆ ಸಭೆ ನಡೆಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಅಗತ್ಯ ಪ್ರೋ. P. S. ಅಣ್ಣಿಗೇರಿ

ನರಗುಂದ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಶ್ರೀ ಸಿದ್ದೇಶ್ವರ ಪ್ರಥಮ ದರ್ಜೆ ಕಾಲೇಜು ನರಗುಂದ ಕಾಲೇಜಿನಲ್ಲಿ…

ಎಂಇಎಸ್ ಗೆ ಖಡಕ್ ವಾರ್ನಿಂಗ್…ಬೆಳಗಾವಿಯಲ್ಲಿ ಹೈ ಅಲರ್ಟ್!

ಬೆಳಗಾವಿ : ರಾಜ್ಯದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ಬೆಳಗಾವಿ ಜಿಲ್ಲೆ ಕೂಡ ಹೊರತಾಗಿಲ್ಲ. ಆದರೆ, ಕನ್ನಡ ಹಬ್ಬ ಆಚರಿಸುವ ಬದಲಾಗಿ ಕರಾಳ ದಿನಾಚರಣೆ ಆಚರಿಸಲು ಮುಂದಾಗಿದ್ದ ಎಂಇಎಸ್‍ ಗೆ ಮುಖ ಭಂಗವಾಗಿದೆ.

ರಾಜ್ಯದಲ್ಲಿನ ಎರಡು ಕ್ಷೇತ್ರಗಳಿಗೆ ಇಂದು ಮತದಾನ!

ಬೆಂಗಳೂರು : ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.