ಗಜೇಂದ್ರಗಡ: ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ನಿರಂತರವಾಗಿ ಬಡವರು, ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿರುವ ಜಮಾಲಶಾವಲಿ ನೌಜವಾನ ಕಮೀಟಿಯವರ ದಾಸೋಹ ಕಾರ್ಯ ಅಮೋಘವಾದದ್ದು, ಈ ನಿಟ್ಟಿನಲ್ಲಿ ಇಂತಹ ಸಾಮಾಜಿಕ ಕಾರ್ಯದಲ್ಲಿ ಪ್ರತಿಯೊಬ್ಬ ಮನುಷ್ಯ ಜೀವಿಯು ಪಾಲ್ಗೊಳ್ಳಬೇಕಿದೆ ಎಂದು ನೇತ್ರತಜ್ಞ ಡಾ. ಸಿ.ವಿ. ಮಳಗಿ ಹೇಳಿದರು.

ಪಟ್ಟಣದ ಹಜರತ್ ಜಮಾಲಶಾವಲಿ ನೌಜವಾನ ಕಮೀಟಿ ವತಿಯಿಂದ ಕಳೆದ 7 ದಿನಗಳಿಂದ ನಡೆಯುತ್ತಿರುವ ಆಹಾರ ವಿತರಣಾ ಕಾರ್ಯದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಸ್ವಾರ್ಥವೇ ತುಂಬಿದ ಪ್ರಸ್ತುತ ಸಮಾಜದಲ್ಲಿ ಪರರಿಗಾಗಿ ಸೇವೆ ಸಲ್ಲಿಸುವವರು ವಿರಳ ಅಂತವರ ಸಾಲಿಗೆ ಜಮಾಲಶಾವಲಿ ನೌಜವಾನ ಕಮೀಟಿಯವರು ಸೇರುತ್ತಾರೆ. ಕಳೆದೊಂದು ವಾರದಿಂದ ಲಾಕ್‌ಡೌನ್‌ನಿಂದ ಪರದಾಡುತ್ತಿರುವ ಜನರಿಗೆ ಊಟ, ಉಪಹಾರ ನೀಡುತ್ತಿದ್ದಾರೆ. ಬಡ ರೋಗಿಗಳಿಗೂ ಸಹ ಉಪಹಾರ ಪೊಟ್ಟಣಗಳನ್ನು ವಿತರಣೆ ಮಾಡುತ್ತಿರುವುದು ಸಮಾಜ ಮುಖಿಕಾರ್ಯವಾಗಿದೆ ಎಂದರು.

ಹಜರತ್ ಜಮಾಲಶಾವಲಿ ನೌಜವಾನ ಕಮೀಟಿಯ ಫಕ್ರುಸಾಬ ಕಾತರಕಿ ಮಾತನಾಡಿ, ಮಹಾಮಾರಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸೈನಿಕನಂತೆ ಶ್ರಮಿಸಬೇಕಿದೆ. ಹೀಗಾಗಿ ನಮ್ಮ ಕಮೀಟಿಯಿಂದ ಕಳೆದ 7 ದಿನಗಳಿಂದ ನಿರಂತರ ಸೇವೆ ಸಲ್ಲಿಸಲಾಗುತ್ತಿದೆ. ಭೂಮಿ ಮೇಲೆ ಜನ್ಮ ತಾಳಿದ ಮೇಲೆ ನಾವೆಲ್ಲರೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಅಂದಾಗ ಮಾತ್ರ ಜನ್ಮ ಸಾರ್ಥಕತೆ ಪಡೆಯುತ್ತಿದೆ. ಈ ದೆಸೆಯಲ್ಲಿ ಯುವಕರು ನಿಸ್ವಾರ್ಥದಿಂದ ನಿತ್ಯ ಸೇವೆ ಗೈಯುತ್ತಿದ್ದಾರೆ ಎಂದರು.

ಅಬ್ದುಲಸಾಬ ಕಾತರಕಿ, ಬಾಬು ಮುಜಾವರ, ಅಮರೇಶ ಮಾರನಬಸರಿ, ಬಾಬು ಹುನಗುಂದ, ಚಾಂದಸಾಬ ಮನಿಯಾರ, ರಾಜು ಆರಗಿದ್ದಿ, ಬಾಬು ಅಕ್ಕಿ, ಮಹಮ್ಮದರಫಿಕ್ ಮುದಗಲ್, ನಜೀರಸಾಬ ರೋಣದ, ಮೌಲಾಸಾಬ ಮುಧೋಳ, ಮಾಸುಮಲಿ ಮದಗಾರ, ಮೆಹಬೂಬ ಸಾಂಗ್ಲಿಕಾರ, ಮುನ್ನಾ ನಿಶಾನದಾರ, ರಾಜಾಭಕ್ಷಿ ಮೂಲಿಮನಿ, ಬಾಷಾ ಮುದಗಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಮಾಲಿನ್ಯ ನಿಯಂತ್ರಣ ಪ್ರಾದೇಶಿಕ ಕಛೇರಿ ಸ್ಥಳಾಂತರ

ಗದಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿಯನ್ನು ಮೇ.1 ರಂದು ಹುಬ್ಬಳ್ಳಿ ರಸ್ತೆ ಮುಳುಗುಂದ ನಾಕದ ಸಿ.ಡಿ.ಒ ಜೈನ್ ಸ್ಕೂಲ್ ರಸ್ತೆಯ ಪೋಸ್ಟ್ ಆಫೀಸ್ ಹತ್ತಿರವಿರುವ ನಿಖಿಲ್‌ರೆಡ್ಡಿ ಬಿಲ್ಡಿಂಗ್

ಗಂಗಾಮತ ಸಮಾಜದ ವಧು-ವರರ ಸಮಾವೇಶ

ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದಿಂದ ವಧು-ವರರ ಸಮಾವೇಶ ಜ.31 ರಂದು ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಪೂಜ್ಯಶ್ರೀ ಷ.ಬ್ರ. ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿದೆ.

ಪಾಪನಾಶಿ: ಟೋಲ್ ಗೇಟ್ ತೆರುವುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಇಲ್ಲಿನ ಪಾಪನಾಶಿ ಹತ್ತಿರದಲ್ಲಿರುವ ಟೋಲ್ ಗೇಟ್ ಅವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ. ಸಂಪೂರ್ಣ ಎತ್ತರ ಹಾಗೂ ತಿರುವಿನಲ್ಲಿ ಟೋಲ್ ಗೇಟ್ ಇದೆ.

ಕಾನೂನು ಲೆಕ್ಕಕ್ಕಿಲ್ಲ ಲಕ್ಕುಂಡಿ ಗ್ರಾಮ ಪಂಚಾಯತಿಗೆ..?: ಜನರ ಆರೋಗ್ಯ ಒತ್ತೆ ಇಡಲು ಹೊರಟಿತ್ತಾ ಗ್ರಾಪಂ..!

ಗದಗ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿರಬೇಕಿದ್ದ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಗ್ರಾಮವನ್ನೆ ಮಾರಾಟ ಮಾಡಲು ಹಿಂಜರಿಯುವುದಿಲ್ಲ…