ಗದಗ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಗದಗ ಶಹರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಮೇ‌ 1ರಂದು ನಗರದ ಡಂಬಳ ನಾಕಾ ಬಳಿ ಇರುವ ರೇಣುಕಾ ಆಟೋಮೊಬೈಲ್ಸ್ ಎದುರಿಗೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಬೈಕ್ ಮಾಲಿಕ ಗಂಗಾಧರ ಮಟ್ಟಿ‌ ಶಹರ ಠಾಣೆಗೆ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಆರೋಪಿ ಸೀತಾಲಹರಿ ಗ್ರಾಮದ ಸೋಮು ಪೂಜಾರನನ್ನು ಬಂಧಿಸಿ ಕಳ್ಳತನವಾಗಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.

ಲಕ್ಷ್ಮೇಶ್ವರ ರಸ್ತೆಯ ರಿಂಗ್ ರೋಡ್ ಬಳಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ಯುವಕ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಗದಗ ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್, ಸರ್ಕಲ್ ಇನ್ಸ್‌ಪೆಕ್ಟರ್ ಪಿ.ವ್ಹಿ ಸಾಲಿಮಠ ಮಾರ್ಗದರ್ಶನದಲ್ಲಿ, ಶಹರ ಠಾಣೆಯ ಪಿಎಸ್ಐ ಜಿ.ಟಿ ಜಕ್ಕಲಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ವ್ಹಿ.ಎಸ್. ಶೆಟ್ಟಣ್ಣವರ್, ಎಸ್ ಎ ಗುಡ್ಡಿಮಠ, ಪಿ ಎಸ್ ಕಲ್ಲೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಬ್ಬಂದಿಗಳ ಈ ಕಾರ್ಯವನ್ನು ಎಸ್ಪಿ ಯತೀಶ್ ಎನ್ ಪ್ರಶಂಶಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗ್ರಾಮದಲ್ಲಿ ಮೂವರು ಕೋವಿಡ್ ಗೆ ಬಲಿ..! : ಕೊಣ್ಣೂರು ಗ್ರಾಮದಲ್ಲಿ ಆತಂಕ..!

ಕೊಣ್ಣೂರ: ಕೋವಿಡ್ 19 ಮಹಾಮಾರಿಯ ಎರಡನೇ ಅಲೆಯು ಗ್ರಾಮೀಣ ಪ್ರದೇಶಕ್ಕೂ ಆವರಿಸಿದ್ದು ತಿಳಿದಿರುವ ವಿಷಯ, ಗ್ರಾಮದಲ್ಲಿ ಮಹಾಮಾರಿ ತನ್ನ ಅಟ್ಟಹಾಸ ಮೆರದಿದ್ದು ಸುಮಾರು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಕೆಲವರು ಗುಣಮುಖರಾಗಿದ್ದಾರೆ.

ಗೋಗೇರಿಯಲ್ಲಿ ಕರವೇ ಯುವಸೈನ್ಯ ದಿಂದ ಆಹಾರದ ಕಿಟ್ ವಿತರಣೆ

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ ಸಂಘಟನೆ ವತಿಯಿಂದ ಬಡವರಿಗೆ ಆಹಾರದ ಕಿಟ್ ವಿತರಿಸಲಾಯಿತು. ಕರವೇ ಯುವ ಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ, ಕೋವಿಡ್ ಎರಡಲೇ ಅಲೆ ಜನಸಾಮಾನ್ಯರನ್ನು ಬೆಂಬಿಡದೇ ಕಾಡುತ್ತಿದೆ.

ಕೋಳಿಗೆ ಡಿಸೆಂಟ್ರಿಯಂತೆ..! ಕಾರಣ ಹೇಳಿ ಹೊರಬಂದ ವ್ಯಕ್ತಿಯ ಮಾತು ಕೇಳಿ..!

ಗದಗ: ಕೋಳಿಗೆ ಭೇದಿ, ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೇನೆ. ಹೀಗಂತ ಕಾರಣ ನೀಡಿದ ವ್ಯಕ್ತಿ ಮಾತಿಗೆ ಪೊಲೀಸರೆ ಸುಸ್ತಾದರು. ಲಾಕ್ ಡೌನ್ ಹಿನ್ನೆಲೆ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಬಿದ್ದಿದೆ.

ಬೆಳಹೋಡ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ದಾವಲಸಾಬ್ ಹಿತ್ತಲಮನಿ ಆಯ್ಕೆ

ಉತ್ತರಪ್ರಭ ಸುದ್ದಿ ಗದಗ: ತಾಲೂಕಿನ ಬೆಳಹೋಡ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ…