ಗದಗ: ಮೂಲತಃ ಗದಗ ಜಿಲ್ಲೆಯವರಾದ ತೆಲಂಗಾಣ ರಾಜ್ಯದ ಸೈಬರ್ ಪೋಲಿಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಅಂದಾಜು 40 ಲಕ್ಷ ಮೌಲ್ಯದ ವೈಧ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ನೆರವು ನೀಡಿದ್ದಾರೆ.

ಆಕ್ಸಿಜನ್ ಕಾನ್ಸ್ಂಟ್ರೇಟರ್ (22), ಆಕ್ಸಿಜನ ಸಿಲಿಂಡರ್ (84), ಕೋವಿಡ್ ಕಿಟ್ (2000), ಮಾಸ್ಕ (20000), ಸ್ಯಾನಿಟೈಸರ್ (200 ಲೀಟರ್), ಫೇಸ್‌ಶೀಲ್ಡ್ (1000), ರೆಮಿಡಿಸಿವರ್ (24 ಯುನಿಟ್) ಸೇರಿದಂತೆ ಇತರ ಔಷಧಿ ಸಾಮಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರ ಸಹೋದರ ಹುಬ್ಬಳ್ಳಿಯ ಸಾಯಿ ಮಲ್ಟಿಸ್ಪೇಷಾಲಿಟಿ ಕ್ಲಿನಿಕ್‌ನ ಡಾ.ಎಂ.ಸಿ.ಸಜ್ಜನರ ಅವರು ಶುಕ್ರವಾರ ಜಿಲ್ಲಾಡಳಿತದ ಭವನದ ಆವರಣದಲ್ಲಿ ವೈಧ್ಯಕೀಯ ಔಷಧಿ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

You May Also Like

ಕೊರೊನಾ ಜಾಗೃತಿ ಬಗ್ಗೆ ಮಹಿಳೆಯೊಬ್ಬಳ ಮಾತುಗಳನ್ನು ನೀವೊಮ್ಮೆ ಕೇಳಲೇಬೇಕು..!

ಕೊರೊನಾದ ಅನುಭವ ಮಹಿಳೆಯೊಬ್ಬರ ಬಾಯಲ್ಲಿ ಕೇಳಿ.ಮಹಿಳೆಯೊಬ್ಬರು ಕೊರೊನಾದ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ…

ಗದಗ ಜಿಲ್ಲೆಯಲ್ಲಿಂದು ನಿಲ್ಲದ ಕೊರೊನಾ ಸಂಚಾರ: ಇಂದು ಮತ್ತೆ 61 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಕೂಡ 61 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 1004 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 26 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮುರುಡಿ ಗ್ರಾಮಕ್ಕೆ 93.33% ರಷ್ಟು ಫಲಿತಾಂಶ

ಉತ್ತರಪ್ರಭ ಮುಂಡರಗಿ: ತಾಲ್ಲೂಕಿನ ಮುರುಡಿಯ ಸರಕಾರಿ ಪ್ರೌಢ ಶಾಲೆಯ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ…

ಮಾಗಡಿಯಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ

ತಾಲೂಕಿನ ಮಾಗಡಿ ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಮಾಗಡಿಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ ಜರುಗಿತು.