ಗದಗ: ಜಿಲ್ಲೆಯ ಖಾಸಗಿ ಹಾಗೂ ಸಹಕಾರಿ ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲದ ನಿಗದಿತ ಎಂ.ಆರ್.ಪಿ ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು. ಏ.1 ರಿಂದ ರಸಗೊಬ್ಬರ ದರ ಏರಿಕೆಯಾಗಿದೆ ಎಂಬ ನೆಪವೊಡ್ಡಿ ಲಭ್ಯವಿರುವ ರಸಗೊಬ್ಬರ ದಾಸ್ತಾನನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ರಸಗೊಬ್ಬರ ಪರವಾನಿಗೆಯನ್ನು ರದ್ದುಗೊಳಿಸಿ, ಕಾನೂನು ಕ್ರಮ ಜರುಗಿಸಲಾಗುವುದು. ರಸಗೊಬ್ಬರ ಮಾರಾಟಗಾರರು ಮುದ್ರಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ರೈತ ಬಾಂಧವರು ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಈ ಕೆಳಗಿನ ದೂರವಾಣಿಗಳನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ತಿಳಿಸಿದ್ದಾರೆ.

ಇದನ್ನೂ ಓದ: ಉತ್ತರಪ್ರಭಕ್ಕೆ ಗ್ರಾಮ ಪಂಚಾಯತಿಗೊಬ್ಬ ಪ್ರತಿನಿಧಿ ಬೇಕಾಗಿದ್ದಾರೆ.

ಸಹಾಯಕ ಕೃಷಿ ನಿರ್ದೇಕರು, ಗದಗ – 8277931403; ಸಹಾಯಕ ಕೃಷಿ ನಿರ್ದೇಕರು, ಮುಂಡರಗಿ -8277931130; ಸಹಾಯಕ ಕೃಷಿ ನಿರ್ದೇಕರು, ನರಗುಂದ – 8277931409; ಸಹಾಯಕ ಕೃಷಿ ನಿರ್ದೇಕರು, ರೋಣ – 8277931451 ; ಸಹಾಯಕ ಕೃಷಿ ನಿರ್ದೇಕರು, ಶಿರಹಟ್ಟಿ – 8277931461 ; ಸಹಾಯಕ ಕೃಷಿ ನಿರ್ದೇಶಕರು, ಜಾರಿದಳ, ಜಕೃನಿ ಕಛೇರಿ ಗದಗ – 9902004783; ಜಂಟಿ ಕೃಷಿ ನಿರ್ದೇಶಕರ ಕಛೇರಿ, ಗದಗ-08372-235443 ಇವರನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ:ಉತ್ತರಪ್ರಭಕ್ಕೆ ಗ್ರಾಮ ಪಂಚಾಯತಿಗೆ ಪ್ರತಿನಿಧಿ ಬೇಕಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಜಿಲೆಟಿನ್‌ ಸ್ಫೋಟ ದುರಂತ: ಗ್ರಾಮಸ್ಥರಿಂದ ಆಕ್ರೋಶ

ಜಿಲ್ಲೆಯ ಹುಣಸೋಡು ಅಕ್ರಮ ಕಲ್ಲು ಕ್ವಾರೆ ಪ್ರದೇಶದಲ್ಲಿ ಜಿಲೆಟಿನ್‌ ಸ್ಪೋಟಗೊಂಡ ಘಟನೆ ಮಾಸುವ ಮೊದಲೇ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ ದುರಂತ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಳ್ಳಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟಗೊಂಡಿದೆ.

ರೋಣ: ಪತ್ರಕರ್ತ ಇಟಗಿ ನಿಧನ

ಗದಗ: ಜಿಲ್ಲೆಯ ರೋಣದ ಹಿರಿಯ ಪತ್ರಕರ್ತ ಎ.ಡಿ. ಇಟಗಿ(62) ಅನಾರೋಗ್ಯದಿಂದ ಬುಧವಾರ ನಿಧನರಾದರು. ಅಸ್ವಸ್ಥರಾಗಿದ್ದ ಅವರಿಗೆ…

ರಾಜ್ಯದ ಉದ್ದಗಲಕ್ಕೂ ಶುರುವಾದ ಬಂದ್ ಬಿಸಿ!

ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ತಾಳುತ್ತಿವೆ ಎಂದು ಆರೋಪಿಸಿ…