ಅಹ್ಮದಾಬಾದ್: ಭಾರತದ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ತಂಡ ಸೋತು ಹೈರಾಣಾಗಿರುವುದು ಕೇವಲ ಕ್ರೀಡೆಯಲ್ಲಿ ಅಷ್ಟೇ ಅಲ್ಲ ಇಂಗ್ಲೆಂಡ್ ಕ್ರೀಡಾಪಟುಗಳೂ ಹೈರಾಣಾಗಿದ್ದಾರೆ.

ಇಂಗ್ಲೆಂಡ್ ನ ಸ್ಟಾರ್ ಆಟಗಾರ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಕ್ರೀಡಾಪಟುಗಳು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು ಒಂದೇ ವಾರದಲ್ಲಿ ತೂಕ ಕಳೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. 41 ಡಿಗ್ರಿ ತಾಪಮಾನದಲ್ಲಿ ಪಂದ್ಯವನ್ನಾಡಿದ್ದರ ಪರಿಣಾಮವಾಗಿ ಇಂಗ್ಲೆಂಡ್ ಆಟಗಾರರಿಗೆ ಆರೋಗ್ಯ ಹದಗೆಟ್ಟು ತೂಕ ಇಳಿಕೆಯಾಗಿದೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.

ಬ್ರಿಟನ್ ನ ಡೈಲಿ ಮಿರರ್ ಜೊತೆಗೆ ಮಾತನಾಡಿರುವ ಸ್ಟೋಕ್ಸ್ ಕ್ರೀಡಾಪಟುಗಳು ಎದುರಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಿದ್ದು, ಒಂದು ವಾರದಲ್ಲಿ ನಾನು 5 ಕೆ.ಜಿ ಇಳಿಕೆಯಾಗಿದ್ದೇನೆ, ಡಾಮ್ ಸಿಬ್ಲೇ 4 ಕೆ.ಜಿ ಹಾಗೂ ಜೇಮ್ಸ್ ಆಂಡ್ರಸನ್ 3 ಕೆ.ಜಿ ತೂಕ ಇಳಿಕೆಯಾಗಿದ್ದಾರೆ. ಜಾಕ್ ಲೀಚ್ ಸಹ ಅನಾರೋಗ್ಯದಿಂದ ಬಳಲಿದ್ದರು ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಗಡಿಯಲ್ಲಿ ತೊಡೆ ತಟ್ಟಿ ನಿಂತಿದೆಯೇ ಚೀನಾ? ಬಗ್ಗು ಬಡಿಯದೆ ಬಿಡಲ್ಲ ಎನ್ನುತ್ತಿದ್ದಾರೆ ಭಾರತೀಯ ಸೈನಿಕರು!

ಬೀಜಿಂಗ್ : ಗಡಿಯಲ್ಲಿ ಉದ್ಧಟತನ ಮೆರೆಯುತ್ತಿರುವ ಚೀನಾ, ಯುದ್ಧದ ಉನ್ಮಾದದಲ್ಲಿ ಇದೆಯೇ ಎಂಬ ಸಂಶಯ ಮೂಡುತ್ತಿದೆ.

ಮೋದಿ ವಿರುದ್ಧ ಗುಡುಗಿದ ಕಾಂಗ್ರೆಸ್ ನಾಯಕ ರಾಹುಲ್!

ನವಾಡ : ರಾಹುಲ್ ಹಾಗೂ ತೇಜಸ್ವಿ ಯಾದವ್ ಜಂಟಿಯಾಗಿ ಪ್ರಧಾನಿ ಮೋದಿ ಹಾಗೂ ಬಿಹಾರದ ನಿತೀಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉದ್ಯೋಗ ಸೃಷ್ಟಿ ಮಾಡುವ ವಿಚಾರದಲ್ಲಿ ಬಿಹಾರ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಜನತೆಗೆ ಶುಭಾಶಯ ಕೋರಿದ ಮೋದಿ!

ನವದೆಹಲಿ : ಇಂದಿನಿಂದ ನವರಾತ್ರಿ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಆನ್ ಲೈನ್ ತರಗತಿ ಹಾಜರಿಗೆ ವೈಫಲ್ಯ: ಆತ್ಮಹತ್ಯೆ ದಾರಿ ಹಿಡಿದ ವಿದ್ಯಾರ್ಥಿನಿ

9ನೇ ತರಗತಿ ವಿದ್ಯಾರ್ಥಿನಿ ಮಲಪ್ಪುರಂ ಜಿಲ್ಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಕುಟುಂಬಸ್ಥರು, ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದೇ ಇರುವ ಕಾರಣಕ್ಕೆ ತೀವ್ರವಾಗಿ ತಳಮಳಕ್ಕೀಡಾಗಿ ಇಂತಹ ಕೃತ್ಯಕ್ಕೆ ಶರಣಾಗಿದ್ದಾಳೆ ಎಂದಿದ್ದಾರೆ. ಇವರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂದು ವರದಿಯಾಗಿದೆ.