ಧಾರವಾಡ : ಜಿಲ್ಲೆಯಲ್ಲಿ ಎರಡು ಪ್ರದೇಶಗಳಲ್ಲಿ 7 ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ವ್ಯಕ್ತಿಗೆ ಇಲ್ಲಿಯ 2ನೇ ಜೆಎಂಎಫ್ ಸಿ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕಳ್ಳತನದ ಆರೋಪಿ ಹಸನಸಾಬ್‌ ಕಾಶೀಮಸಾಬ್‌ ಬೇಗ್‌ ಎಂಬ ವ್ಯಕ್ತಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಬರೋಬ್ಬರಿ 7 ವರ್ಷಗಳ ಹಿಂದೆ ಧಾರವಾಡದ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಮಂಗಳವಾರ ಪೇಟೆಯ ಉಮೇಶ ಮಹೇಂದ್ರಕರ್ ಎಂಬುವವರ ಮನೆಯಲ್ಲಿ ಚಿನ್ನಾಭರಣ, ಬೆಲೆಬಾಳುವ ಸಾಮಾಗ್ರಿ ಹಾಗೂ ಸಂಗಮ್ ಸರ್ಕಲ್ ಹತ್ತಿರದ ಕ್ಷೇತ್ರಿಯ ಮೊಬೈಲ್ ಅಂಗಡಿಯಲ್ಲಿ ಮೊಬೈಲ್‌, ನಗದು ಕಳ್ಳತನ ಮಾಡಿದ್ದ. ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿಯ 2ನೇ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶ ಆಚಪ್ಪ ದೊಡ್ಡ ಬಸವರಾಜ ಅವರು, ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ, ಪ್ರಕರಣದ ದೂರುದಾರರಿಗೆ ರೂ. 2 ಸಾವಿರ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಗೀತಾ ಹೊಸಗಾಣಿಗೇರ ವಾದಿಸಿದ್ದರು. 

Leave a Reply

Your email address will not be published. Required fields are marked *

You May Also Like

ವಿಧಾನಪರಿಷತ್ ಚುನಾವಣೆ ಫಲಿತಾಂಶ ಮುಂದೂಡಿಕೆ!!

ಬೆಂಗಳೂರು : ವಿಧಾನಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಅ. 28ರಂದು ಚುನಾವಣೆ ನಡೆದಿತ್ತು. ನ. 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ, ಸದ್ಯ ಈ ಸಮಯವನ್ನು ಬದಲಾಯಿಸಲಾಗಿದೆ.

ಕನ್ನಡದ ಕೋಟ್ಯಾಧಿಪತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಇನ್ನಿಲ್ಲ ಕಂಠೀರವ್ ಸ್ಟೆಡಿಯಂನಲ್ಲಿ ಸಾರ್ವಜನಿಕರಿಗೆ ದರ್ಶನ..!

ಕನ್ನಡದ ಕೋಟ್ಯಾಧಿಪತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಇನ್ನಿಲ್ಲ ಕಂಠೀರವ್ ಸ್ಟೆಡಿಯಂನಲ್ಲಿ ಸಾರ್ವಜನಿಕರಿಗೆ ದರ್ಶನ..!

ಉತ್ತರದಲ್ಲಿ ರಣ ಬಿಸಿಲು….ದಕ್ಷಿಣದಲ್ಲಿ ಭರ್ಜರಿ ಮಳೆ!

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ರಣ ಬಿಸಿಲು ಮುಂದುವರೆದಿದೆ. ವಿಜಯಪುರ…

24 ಗಂಟೆಗಳಲ್ಲಿ ರಾಜ್ಯದಲ್ಲಿ 37 ಕೋವಿಡ್ ಪಾಸಿಟಿವ್

ಮೇ 03 ಸಂಜೆ 5 ರಿಂದ ಮೇ 04 ಸಂಜೆ 5ರ ವರೆಗೆ 37 ಹೊಸ ಕೋವಿಡ್-19 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ.