ನವದೆಹಲಿ: ಮೊದಲೆಲ್ಲ ಬ್ಯಾಂಕ್ಗಳಿಗೆ ರಜೆ ಅಂದರೆ ತಲೆ ಕೆಟ್ಟು ಹೋಗ್ತಿತ್ತು. ಆದರೆ ಈಗ ಹಾಗಲ್ಲ ನೆಟ್ ಬ್ಯಾಂಕಿAಗ್ ಮೂಲಕ ಅವಶ್ಯಕ ವ್ಯವಹಾರಗಳನ್ನ ನಾವೇ ನಡೆಸಬಹುದಾಗಿದೆ. ಹಾಗಂತ ನಾವು ಬ್ಯಾಂಕ್ಗಳನ್ನೂ ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಲಾಕರ್ ವ್ಯವಸ್ಥೆ, ಸಾಲದ ಬಗ್ಗೆ ಮಾಹಿತಿ ಹೀಗೆ ಮುಖ್ಯ ಕೆಲಸ ಆಗಬೇಕು ಅಂದರೆ ನಾವು ಬ್ಯಾಂಕ್ಗೆ ತೆರಳಲೇಬೇಕು.

ಆರ್ಬಿಐ ಫೆಬ್ರವರಿ ತಿಂಗಳಲ್ಲಿ ಯಾವ ದಿನಗಳಂದು ಯಾವ ಪ್ರದೇಶದ ಬ್ಯಾಂಕ್ಗಳು ಬಂದ್ ಇರಲಿವೆ ಅನ್ನೋದ್ರ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದೆ. ಇದರನ್ವಯ ಫೆ. 12 ರಂದು ಗ್ಯಾಂಗ್ಟೋಕ್ನಲ್ಲಿ ಸೋನಮ್ ಲೋಚಾರ್ ಹಿನ್ನೆಲೆ ರಜೆ ಇರಲಿದೆ. ಬೇಲಾಪುರ, ಮುಂಬೈ ಹಾಗೂ ನಾಗ್ಪುರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಪ್ರಯುಕ್ತ ಬ್ಯಾಂಕ್ಗಳು ಬಂದ್ ಇರಲಿದೆ. ಮುಂದಿನ ತಿಂಗಳು ಬ್ಯಾಂಕ್ಗಳಿಗೆ 8 ದಿನಗಳ ಕಾಲ ಕ್ಲೋಸ್ ಇರಲಿದ್ದು ಇದರಲ್ಲಿ 6 ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಆಗಿರಲಿದೆ.

ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್ಗಳ ರಜೆ ಬಗ್ಗೆ ಮಾಹಿತಿ: ಫೆ. 7 : ಭಾನುವಾರ, ಫೆ. 13 :ಎರಡನೇ ಶನಿವಾರ, ಫೆ. 14: ಭಾನುವಾರ, ಫೆ. 21: ಭಾನುವಾರ, ಫೆ. 27: 4ನೇ ಶನಿವಾರ, ಫೆ. 28: ಭಾನುವಾರ ಆದರೆ ಈ ರಜಾ ದಿನವೂ ನೆಟ್ ಬ್ಯಾಂಕಿಂಗ್ ಕಾರ್ಯದಲ್ಲೇ ಇರಲಿದೆ. ಹೀಗಾಗಿ ನೀವು ನೆಟ್ ಬ್ಯಾಂಕಿAಗ್ ಮೂಲಕ ಅಗತ್ಯ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದಾಗಿದೆ.

Leave a Reply

Your email address will not be published. Required fields are marked *

You May Also Like

ಹತ್ರಾಸ್ ಪ್ರಕರಣ – ಕುಟುಂಬಸ್ಥರಿಂದಲೇ ಯುವತಿಯ ಕೊಲೆಯಾಗಿದೆ ಎಂದ ಆರೋಪಿ!

ಲಕ್ನೋ : ಹತ್ರಾಸ್ ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಎಸ್ಪಿಪಗೆ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯು ಸೆ. 7ರಂದು ಜೈಲಿನಿಂದಲೇ ಹತ್ರಾಸ್ ಎಸ್ ಪಿಗೆ ಪತ್ರ ಬರೆದಿದ್ದಾನೆ.

ಪ್ರಧಾನಿಯ ಮನ್ ಕಿ ಬಾತ್ ಏನು?

ದೆಹಲಿ: ಇಂದು ಪ್ರದಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಮಾಸಿಕ ಸಂಚಿಕೆಯಲ್ಲಿ…

ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿ: ಡಾ.ಬಸವಲಿಂಗ ಸ್ವಾಮೀಜಿ

ವೇದ ಪರಂಪರೆ, ವೈದಿಕ ಪರಂಪರೆ ಮತ್ತು ಆಚಾರ್ಯ ಪರಂಪರೆಗಳಿಗಿಂತಲೂ ಬಸವ ಪರಂಪರೆ ಶ್ರೇಷ್ಠವಾದುದು. ಎಲ್ಲರ ಬದುಕಿಗೆ ಅನುಗುಣವಾದ ಪರಂಪರೆ ಇದು. ಈ ನಿಟ್ಟಿನಲ್ಲಿ ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿಯಾಗಿದೆ

ರಾಜ್ಯದಲ್ಲಿಂದು 515 ಕೊರೊನಾ ಸೋಂಕಿತರಲ್ಲಿ 482 ಕೇಸ್ ಗೆ ಅಂತರಾಜ್ಯ ಹಿನ್ನೆಲೆ: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 515 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4835 ಕ್ಕೆ ಏರಿಕೆಯಾದಂತಾಗಿದೆ.