ಗದಗ: ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಉಮೇದುವಾರಿಕೆ ಹಿಂಪಡೆಯಲು ನೀಡಿದ ಸಮಯಾವಕಾಶ ಮುಗಿದ ನಂತರ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳಿಗೆ ಅವರ ಸಮ್ಮುಖದಲ್ಲಿ ಚುನಾವನಾ ಆಯೋಗದ ನಿಯಮಾನುಸಾರ ಡಿ.14 ರಂದು ಚುನಾವಣಾಧಿಕಾರಿಗಳು ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡುತ್ತಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಪ್ರಭಕ್ಕೆ ಗ್ರಾಮ ಪಂಚಾಯತಿಗೆ ಪ್ರತಿನಿಧಿ ಬೇಕಾಗಿದ್ದಾರೆ

ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 21 ರಂತೆ ರಾಜ್ಯ ಚುನಾವಣಾ ಆಯೋಗವು ಆಧಿಸೂಚನೆಯ ಮೂಲಕ ಮುಕ್ತ ಚಿಹ್ನೆಗಳ ಪಟ್ಟಿಯನ್ನು ಪ್ರಕಟಿಸಿದೆ.

ರಾಷ್ಟ್ರೀಯ ಪ್ರಾದೇಶಿಕ ಹಾಗೂ ಇತರ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ಈಗಾಗಲೇ ಹಂಚಿಯಾಗಿರುವ ಚಿನ್ಹೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ ಚಿನ್ಹೆಗಳ ಪೈಕಿ ಯಾವುದಾದರೂ ಒಂದು ಚಿನ್ಹೆಯನ್ನು ಅಭ್ಯರ್ಥಿಗಳು ನಾಮಪತ್ರದಲ್ಲಿ ನಮೂದಿಸಬೇಕು. ಆ ಚಿಹ್ನೆಗಳ ವಿನಹಃ ಬೇರೆ ಯಾವುದೇ ಚಿಹ್ನೆಯನ್ನು ಯಾವುದೇ ಅಭ್ಯರ್ಥಿಗಳಿಗೆ ನೀಡುವುದಿಲ್ಲ. ನಿಯಮ 22 ರಂತೆ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನಾಮಪತ್ರದ ಕ್ರಮಾಂಕವನ್ನು ಅನುಸರಿಸಿ ಹಂಚಿಕೆ ಮಾಡಲಾಗುತ್ತೆದೆ ಆದರೆ ಆ ಮೊದಲು ಯಾವುದೇ ಇಬ್ಬರು ಅಭ್ಯರ್ಥಿಗಳು ಒಂದೇ ಚಿಹ್ನೆಯನ್ನು ಕೋರಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ಒಂದು ವೇಳೆ ಯಾವುದೇ ಇಬ್ಬರು ಅಥವಾ ಹೆಚ್ಚು ಅಭ್ಯರ್ಥಿಗಳು ಒಂದೇ ಚಿಹ್ನೆಯನ್ನು ಕೋರಿದ್ದಲ್ಲಿ ನಿಯಮ 22(5)(ಎ) ಪ್ರಕಾರ ಯಾರಿಗೆ ಆ ಚಿಹ್ನೆಯನ್ನು ನೀಡಬೇಕೆಂಬುದನ್ನು ಚೀಟಿ ಎತ್ತುವ ಮೂಲಕ ತೀರ್ಮಾನಿಸಲಾಗುತ್ತದೆ. ಉಳಿದ ಅಭ್ಯರ್ಥಿಗಳಿಗೆ ಅವರು ಕೋರಿದ 2ನೆಯ ಅಥವಾ 3ನೆಯ ಚಿಹ್ನೆಯನ್ನು ನಿಯಮ 22ನ್ನು ಅನುಸರಿಸಿ ನೀಡಲಾಗುವುದು.

ಇದನ್ನೂ ಓದಿ: ಉತ್ತರಪ್ರಭಕ್ಕೆ ಗ್ರಾಮ ಪಂಚಾಯತಿಗೆ ಪ್ರತಿನಿಧಿ ಬೇಕಾಗಿದ್ದಾರೆ

ಉಮೇದುವಾರರಿಗೆ ಮಂಜೂರು ಮಾಡಿದ ಚುನಾವಣಾ ಚಿಹ್ನೆಯ ಮಾದರಿ ಪ್ರತಿಯನ್ನು ಸ್ಪರ್ದಿಸುವ ಅಭ್ಯರ್ಥಿಗೆ ಅಥವಾ ಚುನಾವಣಾ ಏಜಂಟನಿಗೆ ನೀಡಿ ಸ್ವೀಕೃತಿ ಪಡೆದುಕೊಳ್ಳಲಾಗುತ್ತದೆ. ಯಾವುದೇ ಅಭ್ಯರ್ಥಿಯು ಹಾಜರಿಲ್ಲದಿದ್ದಲ್ಲಿ ಚುನಾವಣಾಧಿಕಾರಿಯು ಆ ಅಭ್ಯರ್ಥಿಗೆ ಮಂಜೂರು ಮಾಡಿರುವ ಚಿಹ್ನೆಯ ಬಗ್ಗೆ ನಡವಳಿ ಮಾಡಿ, ಇತರೆ ಅಭ್ಯರ್ಥಿಗಳಿಂದ ಸಹಿ ಪಡೆದುಕೊಳ್ಳುವರು.

ಕ್ಷೇತ್ರವಾರು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ, ಅವರಿಗೆ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳು ಮಾತ್ರ ಹಾಜರಿರಬೇಕು. ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕ್ರಮವಾಗಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ನಿಯಮವನ್ನನುಸರಿಸಿ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಲಾಗುತ್ತದೆ. ಹೆಚ್ಚಿನ ಅಭ್ಯರ್ಥಿಗಳು ಒಂದೇ ಚಿಹ್ನೆಯನ್ನು ಕೋರಿರುವ ಸಂದರ್ಭದಲ್ಲಿ ಲಾಟರಿ ಮೂಲಕ ಚಿಹ್ನೆಯನ್ನು ಹಂಚಿಕೆ ಮಾಡಬೇಕಾಗಿರುವುದರಿಂದ, ಇಂತಹ ಎಲ್ಲಾ ಅಭ್ಯರ್ಥಿಯನ್ನು ಕರೆದು ಚಿಹ್ನೆಯನ್ನು ಹಂಚಿಕೆ ಮಾಡಬಹುದಾಗಿದ್ದು, ಕೊಠಡಿಯಲ್ಲಿ ಸೇರುವ ಅಧಿಕಾರಿ ಮತ್ತು ಅಭ್ಯರ್ಥಿಗಳು ಕೋವಿಡ್ ಮುಂಜಾಗೃತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಪ್ರಭಕ್ಕೆ ಗ್ರಾಮ ಪಂಚಾಯತಿಗೆ ಪ್ರತಿನಿಧಿ ಬೇಕಾಗಿದ್ದಾರೆ

Leave a Reply

Your email address will not be published. Required fields are marked *

You May Also Like

ಕರ್ಪ್ಯು: ಜಿಲ್ಲಾಧಿಕಾರಿ ವಿವಿಧ ಸ್ಥಳಗಳಿಗೆ ಭೇಟಿ

ಗದಗ : ಜಿಲ್ಲಾದ್ಯಂತ ಜಾರಿಗೊಳಿಸಲಾದ ವಾರಾಂತ್ಯದ ಕರ್ಪ್ಯು ಹಿನ್ನೆಲಯಲ್ಲಿ ನಗರದ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್…

ಜುಲೈನಲ್ಲಿ ಪಿಯುಸಿ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಜುಲೈನಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹಾಗೂ…

ಸಂಕ್ರಾಂತಿಯ ಪುಣ್ಯಸ್ನಾನ : ಇಬ್ಬರು ಯುವಕರು ನದಿ ಪಾಲು.

ರಾಯಚೂರು:ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.ಸಂಕ್ರಾಂತಿ ಪೀಡೆ…

ಮಸ್ಕಿ: ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಮಂಜೂರು

ತಾಲೂಕ ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಭರವಸೆ ನೀಡಿದರು.