ಗಜೇಂದ್ರಗಡ: ರಾಜ್ಯದಲ್ಲಿ ಡಿ. 1 ರಿಂದ ಎಲ್ಲ ವೈದ್ಯಕೀಯ ಕಾಲೇಜುಗಳು ಮತ್ತು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳ ತರಗತಿ ಆರಂಭಕ್ಕೆ ಸರ್ಕಾರ ಅವಕಾಶ ನೀಡಿದ ಹಿನ್ನಲೆಯಲ್ಲಿ ಪಟ್ಟಣದ ಭಗವಾನ್ ಮಹಾವೀರ ಜೈನ್ ಆರ್ಯುವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಸ್ಯಾನಿಟೈಜರ ಮಾಡಲಾಯಿತು.
ರಾಷ್ಟ್ರೀಯ ವೈದ್ಯಕೀಯ ಆಯೋಗ, ಯುಜಿಸಿ ಮತ್ತು ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ವೈದ್ಯಕೀಯ ಪದವಿ ಕಾಲೇಜುಗಳನ್ನು ಆರಂಭಿಸಲು ಸೂಚಿಸಿದೆ ಅದರನ್ವಯ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿ ಸುತ್ತೋಲೆ ಹೊರಡಿಸಿದ ಹಿನ್ನಲೆಯಲ್ಲಿ ಪಟ್ಟಣದ ಆರ್ಯುವೇದಿಕ್ ಕಾಲೇಜಿನ ಎಲ್ಲ ಕೊಠಡಿಗಳನ್ನು ಸ್ಯಾನಿಟೈಜರ ಮಾಡಲಾಯಿತು.
ಈಗಾಗಲೇ ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿಗೆ ನಾಳೆಯಿಂದಲೇ ಹಾಜರಾಗಲು ಸೂಚಿಸಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳ ಕೋವಿಡ್ ಪರಿಕ್ಷೆ ಕಡ್ಡಾಯವಾಗಿದೆ. ಈ ಹಿನ್ನಲೆಯಲ್ಲಿ ಪೋಷಕರ ಅನುಮತಿ ಪತ್ರ ಹಾಗೂ ಕೋವಿಡ್ ನೆಗಟಿವ್ ವರದಿ ಪ್ರಮಾಣ ತರಲು ಸೂಚಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಅಶೋಕ ಬಾಗಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಅಜೀತ ಬಾಗಮಾರ, ನಿರ್ದೆಶಕ ವರ್ಧಮಾನ ಬಾಗಮಾರ, ಪ್ರಾಚಾರ್ಯ ಕೆ.ಎಸ್. ಬೆಲ್ಲದ ಇದ್ದರು.