ಬೆಂಗಳೂರು: ಈಗಾಗಲೇ ಹಲವು ವರ್ಷಗಳಿಂದ ಮೊಬೈಲ್ ಗಳಲ್ಲಿ ಗೂಗಲ್ ಫೋಟೋಗಳು ಉಚಿತವಾಗಿ ಸಿಗುತ್ತಿದ್ದವು. ಆದರೆ ಇನ್ಮುಂದೆ ಹಾಗಿಲ್ಲ. ಫೋಟೋ ಬ್ಯಾಕ್ ಅಪ್ ಸ್ಟೋರೇಜ್ ಮಾಡಲು ಹಣ ಪಾವತಿಸುವಂತಾಗಿದೆ.
ಮೊಬೈಲ್ ನಲ್ಲಿರುವ ಮೆಮೊರಿ ಖಾಲಿ ಮಾಡಿಕೊಳ್ಳದೇ ಫೋಟೋಗಳನ್ನು ಅಪ್ಲೀಕೇಶನ್ ನಲ್ಲಿ ಶೇಖರಿಸಿಡಬಹುದಾಗಿತ್ತು. ಆದರೆ 2021ರ ಜೂನ್ 21ರ ಬಳಿಕ 15 ಗಿಗಾ ಬೈಟ್ ಮೆಮೊರಿ ಮಾತ್ರ ಉಚಿತವಾಗಿ ಸಿಗಲಿದೆ. ದರೆ ಇಲ್ಲಿಯವರೆಗೆ ಗೂಗಲ್ ಫೋಟೋದಲ್ಲಿ ಶೇಖರಿಸಿಟ್ಟಿರುವ ಫೋಟೋಗಳಿಗೆ ಮಾತ್ರ ಯಾವುದೇ ಚಾರ್ಜ್ ಇರುವುದಿಲ್ಲ. ಜೂ.1ರ ಬಳಿಕ 15 ಜಿಬಿಯಷ್ಟು ಡಾಕ್ಯೂಮೆಂಟ್ಗಳನ್ನ ಮಾತ್ರ ನೀವು ಫ್ರೀಯಾಗಿ ಶೇಖರಣೆ ಮಾಡಬಹುದು. 15 ಜಿಬಿ ಬಳಿಕ ನೀವು ನಿಮ್ಮ ಫೋಟೋಗಳನ್ನು ಡಿಲೀಟ್ ಮಾಡಬಹುದು ಇಲ್ಲವೇ ಗೂಗಲ್ ಒನ್ ಚಂದಾದಾರಗಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.