ಬೆಂಗಳೂರು : ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದ ಬೆನ್ನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ.

2 ಕ್ಷೇತ್ರಗಳ ಫಲಿತಾಂಶ ಬರುವುದಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇರುವಂತೆ ಕೆಪಿಸಿಸಿ ಅಧ್ಯಕ್ಷರು ಏಕಾ ಏಕಿ ದೆಹಲಿಗೆ ತೆರಳಿರುವುದು ಅಚ್ಚರಿ ಮೂಡಿಸಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಹೇಳಿಕೆಗಳ ಕೂಗು ಉಪ ಚುನಾವಣೆ ಸಂದರ್ಭದಲ್ಲಿ ಕೇಳಿ ಬಂದಿದ್ದವು. ಇದು ಹಲವರ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೆಹಲಿ ಪ್ರವಾಸಕ್ಕೆ ಕಾರಣವಾಗಿರಬಹುದು ಎಂಬ ಸಂಶಯ  ಕೂಡ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. 

ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಗಾದಿ ಬಗ್ಗೆ ಈಗ ಬಹಿರಂಗ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರಿಗೆ ಹೇಳಬೇಕು. ಪಕ್ಷದಲ್ಲಿನ ಸಮನ್ವಯತೆಗೆ ಇಂತಹ ಹೇಳಿಕೆಗಳು ಧಕ್ಕೆ ಉಂಟು ಮಾಡುತ್ತವೆ ಎಂದು ಡಿಕೆಶಿ ಹೇಳಬಹುದು ಎನ್ನಲಾಗುತ್ತಿದೆ. 

Leave a Reply

Your email address will not be published. Required fields are marked *

You May Also Like

ಶಿಗ್ಲಿ ಗ್ರಾಮ ಪಂಚಾಯತ ಉಪಚುನಾವಣೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೈಲಾ ಜಯಗಳಿಸಿದ್ದಾರೆ

ಲಕ್ಷ್ಮೇಶ್ವರ:ತಾಲೂಕಿನ ಶಿಗ್ಲಿ ಗ್ರಾಮಪಂಚಾಯತ 4 ನೇ ವಾರ್ಡ್ ಉಪಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೈಲಾ,…

ಇಂದಿನಿಂದ ವೈದ್ಯಕೀಯ ಕಾಲೇಜ್ ಆರಂಭ

ರಾಜ್ಯದಲ್ಲಿ ಡಿ. 1 ರಿಂದ ಎಲ್ಲ ವೈದ್ಯಕೀಯ ಕಾಲೇಜುಗಳು ಮತ್ತು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳ ತರಗತಿ ಆರಂಭಕ್ಕೆ ಸರ್ಕಾರ ಅವಕಾಶ ನೀಡಿದ ಹಿನ್ನಲೆಯಲ್ಲಿ ಪಟ್ಟಣದ ಭಗವಾನ್ ಮಹಾವೀರ ಜೈನ್ ಆರ್ಯುವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಸ್ಯಾನಿಟೈಜರ ಮಾಡಲಾಯಿತು.

ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ವಿಫಲ – ಬರಲಿದೆ ಕೇಂದ್ರ ತಂಡ!

ನವದೆಹಲಿ : ದೇಶದಲ್ಲಿ ಕೊರೊನಾ ಹಾವಳಿ ಸ್ವಲ್ಪ ಮಟ್ಟಿಗೆ ತಗ್ಗುತ್ತಿದ್ದರೂ ರಾಜ್ಯದಲ್ಲಿ ಮಾತ್ರ ಇದರ ಪ್ರಭಾವ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ತಂಡವು ರಾಜ್ಯಕ್ಕೆ ಆಗಮಿಸುತ್ತಿದೆ.

ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದ ಚಡಚಣ್ಣವರ

ಸ್ಥಳೀಯ ಜ್ಞಾನ ಜ್ಯೋತಿ ಕೊಚಿಂಗ್ ಸೆಂಟರ್ ವಿದ್ಯಾರ್ಥಿ ಮಂಜುನಾಥ ಚಡಚಣ್ಣವರ ಮೊರಾರ್ಜಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 2ನೇ ಪಡೆದುಕೊಂಡಿದ್ದಾರೆ.