ಕಲಬುರಗಿ : ಪತ್ನಿಯ ವಿಷಯದಲ್ಲಿ ನಡೆದ ಗಲಾಟೆ ಅತ್ತೆಯ ಸಾವಿನಲ್ಲಿ ಅಂತ್ಯವಾಗಿದೆ.

ಜಿಲ್ಲೆಯ ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಿಬಾಯಿ(45) ಕೊಲೆಯಾದ ಮಹಿಳೆ. ಆರೋಪಿ ರಾಮು(55) ಅತ್ತೆಯ ತಲೆ ಮೇಲೆಯೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ರಾಮು ಹಾಗೂ ಆತನ ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಹಲವು ದಿನಗಳಿಂದ ಪತ್ನಿ, ತವರು ಮನೆ ಸೇರಿದ್ದಳು. ಹೀಗಾಗಿ ಅತ್ತೆ ಜಗಳ ಬಗೆ ಹರಿಸುತ್ತೇನೆ ಎಂದು ಮಗಳನ್ನು ಅಳಿಯನ ಮನೆಗೆ ಕರೆದುಕೊಂಡು ಬಂದಿದ್ದರು.

ಆದರೆ ಈ ಸಂದರ್ಭದಲ್ಲಿ ಅಳಿಯ ಹಾಗೂ ಅತ್ತೆಯ ಮಧ್ಯೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ರಾಮು ತನ್ನ ಅತ್ತೆ ಲಕ್ಷ್ಮಿಬಾಯಿ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಿಂದ ಭೀಮನಾಳ ಗ್ರಾಮಕ್ಕೆ ಮಗಳನ್ನು ಕಳುಹಿಸಲು ಲಕ್ಷ್ಮಿಬಾಯಿ ಬಂದಿದ್ದಳು. ಈ ವೇಳೆ ದುರ್ಘಟನೆ ಸಂಭವಿಸಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಂವಿಧಾನದ ಸಮಗ್ರತೆ ಎತ್ತಿ ಹಿಡಿಯೋಣ: ಶಾಸಕ ಆರ್.‌ಬಸನಗೌಡ ತುರವಿಹಾಳ

ವರದಿ:ವಿಠ್ಠಲ ಕೇಳುತ್ ಮಸ್ಕಿ: ಜಾತ್ಯತೀತ, ಸಮಾನತೆಯ ಸಮಾಜ ನಿರ್ಮಾಣ ಗಣರಾಜ್ಯದ ಆಶಯವಾಗಿದ್ದು, ಇದನ್ನು ಸಕಾರಗೊಳಿಸುವ ಜವಬ್ದಾರಿ…

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 14295 ಕ್ಕೆ ಏರಿಕೆಯಾದಂತಾಗಿದೆ.

ತೋಂಟದ ಶ್ರೀ, ಹಡೇ೯ಕರ, ಹಳಕಟ್ಟಿ ಜಗದ ಯುಗ ಪುರುಷರು- ಪಟ್ಟಣಶೆಟ್ಟರ

ವರದಿ: ಗುಲಾಬಚಂದ ಜಾಧವಆಲಮಟ್ಟಿ : ಶಾಂತ ಚಿತ್ತತೆ,ಬದ್ದತೆ ಖ್ಯಾತಿಯ ಕನ್ನಡದ ಕುಲದೇವರಾದ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳು,ಕರುನಾಡಿನ…

ಕೊರೋನಾ ಸೊಂಕು ನಿಯಂತ್ರಣಕ್ಕೆ ಪ್ಲಾಸ್ಮಾ ಥೆರಫಿ

ಕೊರೋನಾ ಸೋಂಕಿಗೆ ಯಾವುದೇ ಔಷಧಿ ಕಂಡು ಹಿಡಿಯಲಾಗಿಲ್ಲ. ಆದರೆ ರಾಜ್ಯದಲ್ಲಿ ಈ ಸೋಂಕು ನಿಯಂತ್ರಣಕ್ಕೆ ಪ್ಲಾಸ್ಮಾ ಥೆರಫಿ ಚಿಕಿತ್ಸೆಗೆ ರಾಜ್ಯದ ವೈದ್ಯರು ಮುಂದಾಗಿದ್ದು ಇಬ್ಬರು ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ.