ಅಬುಧಾಬಿ : ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೊನೆಯ ಹಂತದಲ್ಲಿ ವೈಫಲ್ಯ ಅನುಭವಿಸಿತು. ಆದರೂ ಪ್ಲೇ ಆಫ್ ಹಂತ ತಲುಪಿದೆ. ಹೀಗಾಗಿ ಸದ್ಯ ಆರ್ ಸಿಬಿ ಕಪ್ ಗೆಲ್ಲುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್, ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ಗೆಲ್ಲುತ್ತದೆ ಎಂದು ಭಾವಿಸಬೇಡಿ ಎಂದು ಹೇಳಿದ್ದಾರೆ. ದೆಹಲಿ ತಂಡದ ವಿರುದ್ಧ ಆರ್ ಸಿಬಿ ತಂಡ ಹೀನಾಯವಾಗಿ ಸೋತಿದೆ. ಕಪ್ ಗೆಲ್ಲುವ ನೆಚ್ಚಿನ ತಂಡದಲ್ಲಿಯೂ ಆರ್ ಸಿಬಿ ಇದೆ. ಆದರೆ, ಮೈಕಲ್ ವಾನ್ ಅವರು ಮಾತ್ರ ಈ ಬಾರಿ ಆರ್ ಸಿಬಿ ಕಪ್ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

ನಾನು ಆರಂಭದಿಂದಲೂ ಹೇಳುತ್ತಿದ್ದೇನೆ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲುವುದು ಅನುಮಾನ. ಟೂರ್ನಿಯುದ್ದಕ್ಕೂ ಆರ್‌ ಸಿಬಿ ಕಪ್ ಗೆಲ್ಲುವ ರೀತಿಯ ಪದರ್ಶನ ತೋರಿಲ್ಲ. ವಿರಾಟ್ ಕೊಹ್ಲಿಯವರು ಎಡಗೈನಲ್ಲಿ ಬ್ಯಾಟ್ ಮಾಡಿ ತಂಡವನ್ನು ಗೆಲ್ಲಿಸಬಹುದು. ಆದರೆ, ಅದು ಕಷ್ಟ ಎಂದು ವ್ಯಂಗ್ಯವಾಡಿದ್ದಾರೆ.

ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ ಆರ್ ಸಿಬಿ, ಕೊನೆಯ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದರೂ ಆಡಿದ 14 ಪಂದ್ಯದಲ್ಲಿ 7 ಪಂದ್ಯಗಳನ್ನು ಗೆದ್ದು ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇ ಆಫ್ ಗೆ ಆಯ್ಕೆಯಾಗಿದೆ.

Leave a Reply

Your email address will not be published. Required fields are marked *

You May Also Like

ಈದ್ ಮಿಲಾದ್, ದಸರಾ ಆಚರಣೆ : ಶಾಂತಿ ಪಾಲನೆ‌ ಸಭೆ

ಕೋವಿಡ್ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸಿರುವ ಮಾರ್ಗಸೂಚಿಗಳ ಪ್ರಕಾರ ಸಾರ್ವಜನಿಕರು ದಸರಾ ಹಾಗೂ ಈದ್ ಮಿಲಾದ್ ಹಬ್ಬಗಳನ್ನ ಆಚರಿಸಬೇಕು ಎಂದು ಗದಗ ಗ್ರಾಮೀಣ ಸಿಪಿಐ ರವಿಕುಮಾರ ಕಪ್ಪತ್ತನವರ ಹೇಳಿದರು.

ಗೋಹತ್ಯೆ ನಿಷೇಧದಿಂದ ರೈತರಿಗೆ ಲಾಭ ; ಸಚಿವ ಚವ್ಹಾಣ್

ದೀಪಾವಳಿಗೆ ಗೋಮಾತೆ ಪೂಜಿಸುತ್ತೀರಿ, ಸಂಕ್ರಾಂತಿಗೆ ಪೂಜೆ ಮಾಡ್ತೀರಿ ಮತ್ತೆ ಗೋಮಾತೆಯನ್ನು ಕಟ್ ಯಾಕ್ ಮಾಡ್ತೀರಿ, ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪ್ರಶ್ನಿಸಿದರು.

ಉಡುಪಿಯಲ್ಲಿ ಕ್ವಾರಂಟೈನ್ ಆದವರಿಗೆ ಮಂಗಳೂರಿನಲ್ಲಿ ಸೋಂಕು!

ಮಂಗಳೂರು: ಉಡುಪಿಯಲ್ಲಿ ಕ್ವಾರಂಟೈನ್ ಮುಗಿಸಿ ನಂತರ ಮಂಗಳೂರಿಗೆ ಬಂದಿದ್ದ 7 ಜನರಲ್ಲಿ ಕೊರೊನಾ ಸೋಂಕು ಇರುವುದು…