ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚೀನಾ ವಿಚಾರದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಹದಿನೈದು ನಿಮಿಷದಲ್ಲಿ ಚೀನಾದ ಸೈನಿಕರನ್ನು ಹೊರಹಾಕುವ ಹೇಳಿಕೆ ನೀಡುತ್ತಾರೆ ಇದು ಹಾಸ್ಯಾಸ್ಪದ ಹೇಳಿಕೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಪಕ್ಷದ ನಾಯಕರೇ ಅವರ ಹೇಳಿಕೆ ಕೇಳಿ ನಗುತ್ತಾರೆ, ಅಕ್ಸಯ್ ಚೀನಾ ಮೊದಲು ನಮ್ಮ ಬಾರ್ಡರ್ ಆಗಿರಲಿಲ್ಲ, ಕಾಂಗ್ರೆಸ್ ಆಡಳಿತದಲ್ಲಿ ರಾಜೀವ್ ಗಾಂಧಿ ಚೀನಾ ಜೊತೆ ಹಲವು ಒಪ್ಪಂದ ಮಾಡಿಕೊಂಡಿದ್ದರು.

ಕಾಂಗ್ರೆಸ್‌ಗೆ ಸಂವಿಧಾನದ ಮೂಲ ಆಶಯದ ಮೇಲೆ ನಂಬಿಕೆಯಿಲ್ಲ. ಕಾಂಗ್ರೆಸ್ ಸತತವಾಗಿ ಪ್ರಜಾಪ್ರಭುತ್ವದ ಅವಹೇಳನ ಮಾಡುವ ಪ್ರವೃತ್ತಿ ಮುಂದುವರೆಸಿಕೊAಡು ಬಂದಿದೆ. ಸಂಸತ್ ಅಧಿವೇಶನದಲ್ಲಿ ಡೆಪ್ಯೂಟಿ ಸ್ಪೀಕರ್ ಮೇಲೆ ಹಲ್ಲೆಮಾಡಿ ತಡೆಯುವ ಯತ್ನ ನಡೆಯಿತು. ಕಾಂಗ್ರೆಸ್ ದೀರ್ಘ ಕಾಲ ಆಡಳಿತ ನಡೆಸಿದವರು ಯಾವುದೇ ಬದಲಾವಣೆ ತರಲು ಆಗಲಿಲ್ಲ. ಕಾಂಗ್ರೆಸ್‌ಗೆ ಅಧಿಕಾರ ಇಲ್ಲದೆ ಬದುಕುವುದು ಗೊತ್ತಿಲ್ಲ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

You May Also Like

ವಿದ್ಯುತ್ ನಿಲುಗಡೆ

110 ಕೆವ್ಹಿ ಶಿರಹಟ್ಟಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಮಾ.16 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದ ವ್ಯಕ್ತಿಯಲ್ಲಿ ಕಂಡು ಬಂದ ಕೊರೊನಾ!

ಬೆಳಗಾವಿ: ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದ ವೃದ್ಧರೊಬ್ಬರಲ್ಲಿ ಮತ್ತೆ ಕೊರೊನಾ ವೈರಸ್ ಕಂಡು ಬಂದಿದೆ. 60…

ಪ್ರಾಣಿ ಪ್ರೇಮ ತೋರಿದ ಡಿಬಾಸ್

ಡಿಬಾಸ್ ದರ್ಶನ್ ಇದೀಗ ಪ್ರಾಣಿ ಪ್ರೇಮ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ. ಎತ್ತೊಂದರ ಚಿಕಿತ್ಸೆಗೆ ನೆರವಾಗುವ ಮೂಲಕ ತಮ್ಮಲ್ಲಿರುವ ಪ್ರಾಣಿಗಳ ಬಗೆಗಿರುವ ಕಾಳಜಿಯನ್ನು ತೋರಿಸಿದ್ದಾರೆ.

ನಿಯಂತ್ರಣ ತಪ್ಪಿ ಕಾರು ಪಲ್ಟಿ: ಮಹಿಳೆ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು ಗ್ರಾಮದ ಹೊರ ವಲಯದಲ್ಲಿ ನಡೆದಿದೆ.