ಪಾಟ್ನಾ : ತಂದೆಯ ರುಂಡವನ್ನೇ ಮಗ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

ಈ ಘಟನೆ ಕೈಮೂರ್ ಡುಮರ್ಕೋನ್ ಗ್ರಾಮದಲ್ಲಿ ನಡೆದಿದೆ. ಅ. 19ರಂದು ರುಂಡ – ಮುಂಡ ಬೇರ್ಪಡೆಯಾದ ಶವ ಪತ್ತೆಯಾಗಿತ್ತು. ಚೈನಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದರು. ಕೊಲೆಯಾದ ವ್ಯಕ್ತಿಯ ಗುರುತು ಮೊದಲು ಪತ್ತೆಯಾಗುತ್ತಿದ್ದಂತೆ, ಈ ಕುರಿತು ತನಿಖೆ ಪ್ರಾರಂಭಿಸಿದ್ದಾರೆ.

ಮೃತ ವ್ಯಕ್ತಿ ಅಪರಾಧ ಹಿನ್ನೆಲೆಯುಳ್ಳವನಾಗಿದ್ದರಿಂದ ಗ್ರಾಮದಲ್ಲಿ ಬಹುತೇಕರೊಂದಿಗೆ ಶತೃತ್ವ ಹೊಂದಿದ್ದ. ಆದರೆ, ಪೊಲೀಸರು ಮಗನನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೊದಲಿಗೆ ಸುಳ್ಳು ಹೇಳಿದ ಮಗ, ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ತಪ್ಪು ಒಪ್ಪಿಕೊಂಡಿದ್ದಾನೆ. 

ತಂದೆ ಹಾಗೂ ಮಗನ ನಡುವೆ ಹಣದ ವಿಚಾರವಾಗಿ ವೈಮನಸ್ಸು ಇತ್ತು. ಈ ವಿಚಾರವಾಗಿಯೇ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ತೆರಳುತ್ತಿದ್ದಂತೆ ಕೊಡಲಿಯಿಂದ ತಂದೆಯ ರುಂಡವನ್ನು ಕತ್ತರಿಸಿದ್ದಾನೆ. ನಂತರ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. 

Leave a Reply

Your email address will not be published. Required fields are marked *

You May Also Like

ಹಳೆಯ ಧಾರಾವಾಹಿಗಳಿಗೆ ಮೊರೆ: ದಾಖಲೆ ಸೇರಿದ ರಾಮಾಯಣ ಧಾರಾವಾಹಿ

ಲಾಕ್ ಡೌನ್ ಹಿನ್ನೆಲೆ ಬಹುತೇಕ ಚಾಲ್ತಿಯಲ್ಲಿರು ಧಾರಾವಾಹಿ ಶೂಟಿಂಗ್ ಕಾರ್ಯ ಕೂಡ ನಿಂತಿದೆ. ಇದರಿಂದಾಗಿ ಡಿಡಿ ವಾಹಿನಿ ಮತ್ತೆ ರಾಮಾಯಣ ಧಾರಾವಾಹಿ ಮರುಪ್ರಸಾರ ಮಾಡಿದ್ದು ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮೆರೆದಿದೆ.

ಚಿನ್ನ ಬೆಲೆ ಕುಸಿತ ; ಬೆಳ್ಳಿ ಬೆಲೆ ಕೊಂಚ ಏರಿಕೆ

ಕಳೆದ ಎರಡು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಭಾರೀ ಇಳಿಕೆಯಾಗಿದ್ದು, ಚಿನ್ನ ಕೊಳ್ಳುವವರು ನಿಟ್ಟುಸಿರು ಬಿಡುವಂತಾಗಿದೆ.

ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾಕ್ಕೆ ನೀಡುತ್ತಿದೆ ಭಾರತ?

ಲಡಾಖ್‌: ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರೆದ ನಡುವೆಯೇ ಭಾರತ ಯುದ್ಧಕ್ಕೆ ಸಿದ್ಧ ಎಂಬ…

ದೇಶದ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆಯಂತೆ!

ಮಹಾಮಾರಿ ಕೊರೊನಾದಿಂದಾಗಿ ಜಿಡಿಪಿ ಕುಸಿತ ಕಂಡಿದ್ದು, ಈ ವರ್ಷದಲ್ಲಿ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಅಂದಾಜು ಮಾಡಿದೆ.