ನವದೆಹಲಿ :  ಯುದ್ಧಕ್ಕೆ ಸಿದ್ಧವಾಗಿ ನಿಂತಿರುವ ಚೀನಾಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಯುದ್ಧಕ್ಕೆ ನೀವು ತಯಾರಿ ನಡೆಸಿದ್ದರೆ, ನಾವೂ ಸಿದ್ಧ ಎಂಬ ಮಾತನ್ನು ಭಾರತ ಹೇಳಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯುದ್ಧದ ಕುರಿತು ಮಾತನಾಡಿದ್ದಾರೆ. ಭಾರತೀಯ ರಕ್ಷಣಾ ಪಡೆ ಯುದ್ಧಕ್ಕೆ ಯಾವಾಗಲೂ ಸಿದ್ಧವಾಗಿದೆ. ಸಾರ್ವಭೌತ್ವ ಹಾಗೂ ಗಡಿ ಕಾಪಾಡಲು ದೇಶ ಸದಾ ಸಿದ್ಧವಾಗಿದೆ ಎಂದು ಹೇಳಿದ್ದಾರೆ. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಜಿನ್ ಪಿಂಗ್ ಅವರು, ಯಾವುದೇ ದೇಶದೊಂದಿಗೆ ಚೀನಾ ಕೋಲ್ಡ್, ಹಾಟ್ ಯುದ್ಧದ ಉದ್ದೇಶ ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಭಾರತದೊಂದಿಗೆ ಮಾತ್ರ ಕಾಲು ಕೆರೆದು ಜಗಳಕ್ಕೆ ನಿಲ್ಲುವುದನ್ನು ನಿಲ್ಲಿಸಿರಲಿಲ್ಲ. ಯುದ್ಧಕ್ಕೆ ಸಿದ್ಧವಾಗುವಂತೆ ತಮ್ಮ ಸೇನೆಗೆ ತಿಳಿಸಿದ್ದರು. ಇದಕ್ಕೆ ಭಾರತ ಕೂಡ ತಯಾರಿ ನಡೆಸಿದ್ದು, ತಕ್ಕ ಉತ್ತರ ನೀಡುತ್ತಿದೆ. 

ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಹಗ್ ಭಾರತದದೊಂದಿಗೆ ಯುದ್ಧಕ್ಕೆ ಚೀನಾ ಸಿದ್ಧವಾಗಬೇಕು ಎಂದು ಪೀಪಲ್ಸ್ ಲಿಬರೇಷನ್ ಆರ್ಮಿಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅಮಿತ್ ಶಾ ಕೂಡ ಚೀನಾಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಭಾರತೀಯ ಸೇನೆ ಯಾವುದೇ ಅಂತಿಮ ನಿರ್ಧಾರಕ್ಕೆ ಯಾವಾಗಲೂ ಸಿದ್ಧವಾಗಿದೆ. ನಿರ್ದಿಷ್ಟ ಹೇಳಿಕೆ ಆಧರಿಸಿ ನಾವು ಈ ರೀತಿಯ ಹೇಳಿಕೆ ನೀಡುತ್ತಿಲ್ಲ. ಯಾವುದೇ ಸಮಯದಲ್ಲಿಯೂ ಭಾರತ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *

You May Also Like

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಕೊರೊನಾ ಲಸಿಕೆ ಎಂದು ಹೇಳಿದ ಬಿಜೆಪಿ!

ನವದೆಹಲಿ : ದೇಶದ ಎಲ್ಲ ಜನರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಹೇಳಿ ಎಲ್ಲ ಟೀಕೆಗಳಿಗೂ ಸ್ಪಷ್ಟನೆ ನೀಡಿದ್ದಾರೆ.

ಮಹಾರಾಷ್ಟ್ರದ ಜನರ ನಿದ್ದೆಗೆಡಿಸಿದ ಮಹಾಮಾರಿ!

ಮುಂಬಯಿ : ನಗರದಲ್ಲಿ ಕೊರೊನಾ ಸಮುದಾಯಿಕ ಹಂತ ತಲುಪಿದಂತಾಗಿದೆ. ಹೀಗಾಗಿ ಅಲ್ಲಿನ ಜನ ಮಹಾಮಾರಿಗೆ ತತ್ತರಿಸಿ…

ಹತ್ರಾಸ್ ಅತ್ಯಾಚಾರ ಪ್ರಕರಣ – ಆಘಾತಕಾರಿ ವಿಷಯ ಹೊರ ಹಾಕಿದ ಪೊಲೀಸರು!

ಲಕ್ನೋ : ಹತ್ರಾಸ್ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಂದು ಆಘಾತಕಾರಿ ಸಂಗತಿ ಹೊರ ಹಾಕಿದ್ದಾರೆ.

ದೇಶದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದೆ ಮಹಾಮಾರಿ!

ನವದೆಹಲಿ : ದೇಶದಲ್ಲಿ ಕೊರೊನಾ ಹಾವಳಿ ಸ್ವಲ್ಪ ಮಟ್ಟಿಗೆ ತಗ್ಗುತ್ತಿದ್ದರೂ ಆತಂಕ ಮಾತ್ರ ಇನ್ನೂ ನಿಂತಿಲ್ಲ.