ಬೆಂಗಳೂರು : ಕಿಚ್ಚ ಸುದೀಪ್ ಅವರು ಮಾಜಿ ಕ್ರಿಕೆಟ್ ಅನಿಲ್ ಕುಂಬ್ಳೆ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ, ಅವರ ಸಾಧನೆಯನ್ನು ಕೊಂಡಾಡಿದ್ದಾರೆ.  

ಕನ್ನಡಿಗ ಅನಿಲ್ ಕುಂಬ್ಳೆ ಅವರು ಇಂದು ತಮ್ಮ 50ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಐಪಿಎಲ್ ನಿಮಿತ್ತ ಯುಎಇಯಲ್ಲಿ ಅನಿಲ್ ಇದ್ದಾರೆ. ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಹೆಮ್ಮೆಯ ಕನ್ನಡಿಗನಿಗೆ ವಿಶ್ ಮಾಡುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಶುಭಕೋರಿದ ಕಿಚ್ಚ ಸುದೀಪ್, ನೀವು ಮೈದಾನದಲ್ಲಿ ಹೀರೋ ಆಗಿದಕ್ಕೆ, ಅದು ನಿಮ್ಮನ್ನಿಂದು ಲೆಜೆಂಡ್ ಆಗಿ ಮಾಡಿದೆ, ಅನಿಲ್ ಕುಂಬ್ಳೆ ಸರ್. ಆದರೆ ಎಲ್ಲ ಪರಿಸ್ಥಿತಿಯನ್ನು ನೀವು ನಿಭಾಯಿಸಿದ ರೀತಿ ನಿಮ್ಮನ್ನು ಗುರುತಿಸುವಂತೆ ಮಾಡಿದೆ. ಕೆಲವು ಪರಿಸ್ಥಿತಿಯಲ್ಲಿ ನಿಮ್ಮ ಮಾತುಗಳು ನೀವು ಓರ್ವ ಜೆಂಟಲ್‍ ಮ್ಯಾನ್ ಎಂಬುವುದನ್ನು ತೋರಿಸಿಕೊಟಿವೆ. ಅದೇ ನಮಗೆ ಸ್ಫೂರ್ತಿ. ನೀವು ಎಂದಿಗೂ ನಮ್ಮ ಹೆಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಸರ್ ಎಂದು ಬರೆದುಕೊಂಡಿದ್ದಾರೆ.

1990 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಅನಿಲ್ ಕುಂಬ್ಳೆ ಅವರು ಬರೋಬ್ಬರಿ 18 ವರ್ಷಗಳ ಕಾಲ ದೇಶಕ್ಕಾಗಿ ಆಡಿದ್ದಾರೆ. ಭಾರತದ ಪರ 132 ಟೆಸ್ಟ್ ಮ್ಯಾಚ್ ಆಡಿರುವ ಅವರು, 619 ವಿಕೆಟ್ ಪಡೆದುಕೊಂಡಿದ್ದಾರೆ. 1999 ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಿತ್ತು ದಾಖಲೆ ಬರೆದಿದ್ದಾರೆ. 271 ಏಕದಿನ ಪಂದ್ಯಗಳನ್ನು ಆಡಿರುವ ಕುಂಬ್ಳೆ, 337 ವಿಕೆಟ್ ಕಿತ್ತು ಮಿಂಚಿದ್ದಾರೆ.

Leave a Reply

Your email address will not be published. Required fields are marked *

You May Also Like

ಧೋನಿ ನಿವೃತ್ತಿ ಘೋಷಿಸುವ ಸಿದ್ಧತೆಯಲ್ಲಿದ್ದಾರೆಯೇ?

ಅಬುಧಾಬಿ : ಮ್ಯಾಚ್ ವಿನ್ನರ್ ಧೋನಿ ಐಪಿಎಲ್ ಗೂ ನಿವೃತ್ತಿ ಘೋಷಿಸಲಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ. ಹಾಗಂತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಕ್ರೀಡೆಗಳಿಂದ ಆರೋಗ್ಯಕರ ಭಾವನೆ

ಉತ್ತರಪ್ರಭ ಸುದ್ದಿನಿಡಗುಂದಿ: ಹಲ ಬಗೆಯ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಲು ಸಾಧ್ಯ…

ಪ್ರಾಣಿಗಳೊಂದಿಗೆ ನಿಮ್ಮ ಹೇಡಿತನ ಪ್ರದರ್ಶನ ಬೇಡ : ವಿರಾಟ್ ಕೊಹ್ಲಿ

ಪ್ರಾಣಿಗಳೊಂದಿಗೆ ಹೇಡಿತನ ಪ್ರದರ್ಶಿಸಬೇಡಿ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.

ಚೆನ್ನೈ ವಿರುದ್ಧ ಆರ್ ಸಿಬಿ ಸೋಲಲು ಇವರೇ ಕಾರಣವಂತೆ!

ದುಬೈ : ಗೆಲ್ಲುವ ಫೇವರಿಟ್ ತಂಡವಾಗಿದ್ದ ಆರ್ ಸಿಬಿಯು ಚೆನ್ನೈ ತಂಡದ ವಿರುದ್ಧ ಹೀನಾಯ ಸೋಲು ಕಂಡಿದೆ. ಇದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.