ನವದೆಹಲಿ : ದೇಶದಲ್ಲಿ ಮುಂದಿನ 6 ತಿಂಗಳಲ್ಲಿ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

 ಭಾರತೀಯ ರೆಡ್‌ಕ್ರಾಸ್ ಸೊಸೈಟಿ (ಐಆರ್‌ಸಿಎಸ್) ಮತ್ತು ಸೇಂಟ್ ಜಾನ್ಸ್ ಆಂಬ್ಯುಲೆನ್ಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಭಾರತವು ಕೂಡ ಇನ್ನಿತರ ರಾಷ್ಟ್ರಗಳಂತೆ ವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಯಲ್ಲಿ ಸಾಧನೆ ಮಾಡುತ್ತಿದೆ. ಸದ್ಯ ಈ ಪ್ರಯತ್ನದಲ್ಲಿ ನಮಗೆ ಜಯ ಸಿಗಲಿದೆ. ಇನ್ನು ಕೆಲವೇ ತಿಂಗಳುಗಳ ಅಂತರದಲ್ಲಿ ಕೊರೊನಾ ವ್ಯಾಕ್ಸಿನ್ ಹೊರಬರುವ ನಿರೀಕ್ಷೆ ಹೆಚ್ಚಾಗಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಆರು ತಿಂಗಳಲ್ಲಿ ವ್ಯಾಕ್ಸಿನ್ ಅನ್ನು ದೇಶಾದ್ಯಂತ ವಿತರಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಐಆರ್ ಸಿಎಸ್ ತನ್ನ ರಕ್ತ ಕೇಂದ್ರಗಳ ಮೂಲಕ ಜನರಿಗೆ ಯಾವುದೇ ರೀತಿಯ ರಕ್ತದ ಕೊರತೆಯುಂಟಾಗದಂತೆ ನೋಡಿಕೊಂಡಿದೆ. ಸ್ವಯಂಪ್ರೇರಿತ ರಕ್ತದಾನದ ಪ್ರಚಾರದ ವಿಧಾನಗಳು ಮತ್ತು ಸಿಬ್ಬಂದಿ, ವ್ಯವಸ್ಥಾಪಕರು ಮತ್ತು ಸ್ವಯಂ ಸೇವಕರ ಸಮರ್ಪಿತ ಪ್ರಯತ್ನಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *

You May Also Like

ಫೆಬ್ರವರಿಯಲ್ಲಿ ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯ

ಮೊದಲೆಲ್ಲ ಬ್ಯಾಂಕ್ಗಳಿಗೆ ರಜೆ ಅಂದರೆ ತಲೆ ಕೆಟ್ಟು ಹೋಗ್ತಿತ್ತು. ಆದರೆ ಈಗ ಹಾಗಲ್ಲ ನೆಟ್ ಬ್ಯಾಂಕಿAಗ್ ಮೂಲಕ ಅವಶ್ಯಕ ವ್ಯವಹಾರಗಳನ್ನ ನಾವೇ ನಡೆಸಬಹುದಾಗಿದೆ. ಹಾಗಂತ ನಾವು ಬ್ಯಾಂಕ್ಗಳನ್ನೂ ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಲಾಕರ್ ವ್ಯವಸ್ಥೆ, ಸಾಲದ ಬಗ್ಗೆ ಮಾಹಿತಿ ಹೀಗೆ ಮುಖ್ಯ ಕೆಲಸ ಆಗಬೇಕು ಅಂದರೆ ನಾವು ಬ್ಯಾಂಕ್ಗೆ ತೆರಳಲೇಬೇಕು.

ಪಶ್ಚಿಮ ಬಂಗಾಳದಲ್ಲಿ ಜುಲೈ 31ರ ವರೆಗೆ ಲಾಕ್ ಡೌನ್!

ಕೋಲ್ಕತ್ತಾ : ದೇಶದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಹೆಚ್ಚಾಗುತ್ತಿದೆ. ಇದರಿಂದಾಗಿ ಪಶ್ಚಿಮ ಬಂಗಾಳ ಸರ್ಕಾರ ಜುಲೈ…

ಮೋದಿ ಸಭೆಗೆ ಹಾಜರಾಗದ ದೀದಿ!

ಕೋಲ್ಕತ್ತಾ: ಕೇಂದ್ರ ಸರ್ಕಾರದ ವಿರುದ್ಧ ಸದಾ ಕಾಲ ಗುಡುಗುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ,…

ಜೈಲಿಗೆ ಪತಿ ಹೋದಾಗ, ಪತ್ನಿ ಮಾಡಿದ್ದೇನು? ಹೊರ ಬಂದಾಗ ಗಂಡನೂ ಮಾಡಿದ್ದೇನು?

ಲಕ್ನೋ : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ, ತನ್ನ ಅಣ್ಣನನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.