ಬೆಂಗಳೂರು: ಕೋವಿಡ್ 19 ಸೋಂಕು ಕರ್ನಾಟಕದಲ್ಲಿ ಕಾಣಿಸಿಕೊಂಡ ದಿನದಿಂದ ಸರ್ಕಾರವು ಸೋಂಕನ್ನು ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಕಾಲಕಾಲಕ್ಕೆ ಕೇಂದ್ರದ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿಯೂ ಸಹ ಲಾಕ್ ಡೌನ್ ವಿಧಿಸುವುದರಲ್ಲದೆ, ಕಡ್ಡಾಯವಾಗಿ ಮಾಸ್ಕ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೋಳಿಸಲಾಗಿದೆ.

ಕೋವಿಡ್ 19 ಸೋಂಕನ್ನು ತಡೆಯಲು ಇದುವರೆಗೂ ‌ಯಾವುದೇ ಲಸಿಕೆ, ಇರದೇ‌ ಇರುದರಿಂದ ಪ್ರಸ್ತುತ ಮಾಸ್ಕ‌ ಬಳಕೆ, ಸ್ಯಾನಿಟೈಸ್ ಉಪಯೋಗ, ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಅನಿವಾರ್ಯ ವಾಗಿದೆ. ಇತ್ತಿಚಿನ‌ ಆದೇಶದಲ್ಲಿ ಸರ್ಕಾರವು ನಗರ ಪ್ರದೇಶದಲ್ಲಿ ಮಾಸ್ಕ ಬಳಸದಿದ್ದರೆ ರೂ.1000 ದಂಡ ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.500 ದಂಡ‌ ವಿಧಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.

ಆದರೆ ಸಾರ್ವಜನಿಕ ವಿರೋಧ ಮತ್ತು ತಜ್ಞರ ‌ಅಭಿಪ್ರಾಯ ಹಿನ್ನೆಲೆಯಲ್ಲಿ ದಂಡದ ಪ್ರಮಾಣದಲ್ಲಿ ನಗರ ಪ್ರದೇಶಗಳಲ್ಲಿ ರೂ.1000 ದಿಂದ ರೂ.200 ರೂ.ಮತ್ತು ‌ಗ್ರಾಮೀಣ ಪ್ರದೇಶದಲ್ಲಿ 500 ರೂ.ದಿಂದ 100 ರೂ.ಗೆ ಇಳಿಸಲು ತೀರ್ಮಾನಿಸಲಾಗಿರುತ್ತದೆ.

ಪ್ರಧಾನಿ ನರೇಂದ್ರ ಮೋದಿ ಹೇಳಿತುವಂತೆ ಜೀವ ಮತ್ತು ‌ಜೀವನ ಎರಡನ್ನು ಸರಿದೂಗಿಸಿಕೊಂಡು‌ ಹೋಗಲು ಸರ್ಕಾರವು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮಾಸ್ಕ,‌ ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೋಳ್ಳುವುದರ ಮೂಲಕ ಸರ್ಕಾರದೊಂದಿಗೆ ಸಹಕರಿಸುಂತೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ವಿಸ್ತರಣೆ ಬಗ್ಗೆ ಗೃಹ ಸಚಿವರು ಹೇಳಿದ್ದೇನು?

ಬೆಂಗಳೂರು: ಇನ್ನು ಲಾಕ್ಡೌನ್ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪರಿಸ್ಥಿತಿ ನೋಡಿಕೊಂಡು ಈ ಕುರಿತಾಗಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನೇ ಅತಿಕ್ರಮಣ ಮಾಡಿದ ಜನರು!

ಧಾರವಾಡ : ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಜಾಗಗಳನ್ನು ವಶಕ್ಕೆ ಪಡೆಯಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ…

ಗದಗ, ನರಗುಂದ, ರೋಣ, ಮುಂಡರಗಿ ತಾಲೂಕಿನಲ್ಲಿಂದು ಸೋಂಕಿರು ಪತ್ತೆ

ಗದಗ: ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ಮದೆನಗುಡಿ ಗ್ರಾಮದ ನಿವಾಸಿ 35 ವರ್ಷದ ಪುರುಷ(ಪಿ-23121)…

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಇಂದು ನಿಧನ

ಹಿರಿಯ ಸಾಹಿತಿ, ಖ್ಯಾತ ಕವಿ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ (85) ಶನಿವಾರ ನಿಧನರಾಗಿದ್ದಾರೆ.