ನಿಂಗಪ್ಪ ಮಡಿವಾಳರ

ನರೆಗಲ್ಲ: ಹೋಬಳಿಯ ಎಲ್ಲೇಡೆ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗೆ ತಿವ್ರ ಹಿನ್ನೆಡೆಯಾಗಿದೆ.

ಈಚೆಗೆ ಸುರಿದ ಭಾರಿ ಮಳೆಯಿಂದ ಅಬ್ಬಿಗೇರಿ ಗ್ರಾಮದಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆದ ಈರುಳ್ಳಿ ಸಂಪೂರ್ಣ ನಿರಲ್ಲಿ ನಿಂತು ಕೊಳೆಯುತ್ತಿದೆ. ಇದೆ ರೀತಿ ಹೋಬಳಿಯ ಜಕ್ಕಲಿ. ಮಾರನಬಸರಿ. ಬೂದಿಹಾಳ.ತೋಟಗಂಟಿ ನಿಡಗುಂದಿ.ಇಲ್ಲಿ ಕೂಡ ಈರುಳ್ಳಿ ನಿರಲ್ಲಿ ನಿಂತಿದೆ.ಹಾಗೂ ಕೆಲವು ಬೆಳೆಗಳು ನೀರಿನ ರಭಸಕ್ಕೆ ತೆಲಿಕೂಂಡು ಹೋಗಿವೆ. ಹೊಲದ ತುಂಬೆಲ್ಲ ನೀರು ನಿಂತು ಉಳಿದ ಬೆಳೆಗಳು ಕೂಡಾ ಕೊಳೆಯುತ್ತಿವೆ.

ಕಟಾವಿಗೆ ಬಂದ ಈರುಳ್ಳಿ ಮಳೆಯ ರಭಸಕ್ಕೆ ತೆಲಿಕೂಂಡು ಹೊಗುವದನ್ನು  ನೋಡಿ ರೈತರು ಕಣ್ಣಿರು ಸುರಿಸುತ್ತಾ ಮನೆಗೆ ಬಂದೇವು ಎಂದು ಹೇಳಿದರು.

ರೈತರಿಗೆ ನೆರವಾಗಬೇಕಿದೆ ಅಬ್ಬಿಗೇರಿ ಗ್ರಾಮದಲ್ಲಿ ಬಹಳಷ್ಟು ಈರುಳ್ಳಿ ಬಿತ್ತನೆ ಮಾಡಿದ್ದು ಒಂದು ಎಕರೆ ಗೊಬ್ಬರ ಬೀಜ ಸೇರಿದಂತೆ ಅಂದಾಜು 25000 ರೂ, ವರೆಗೆ ಖರ್ಚು ಮಾಡಿದ್ದೆವೆ. ಈಗ ಅತೀಯಾದ ಮಳೆಯಿಂದ ನಾವುಗಳು ತೀವ್ರ ಸಂಕಷ್ಟಕ್ಕೀಡಾಗಿದ್ದೇವೆ. ಸರ್ಕಾರದ ಪರಿಹಾರ ಕೊಟ್ಟು ರೈತರಿಗೆ ನೆರವಾಗಬೇಕಿದೆ. ಸಂಗಪ್ಪ ಕುಂಬಾರ, ರೈತ

ಪ್ರಮುಖವಾಗಿ ಅಬ್ಬಿಗೇರಿ ಗ್ರಾಮದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಕಟಾವಿಗೆ ಬಂದ ಇನ್ನೆನು ಮಾಲು ಕೈಗೆಬಂತು ಎನ್ನುವಷ್ಟರಲ್ಲಿ ಮಳೆ ಸುರಿಯ ಲಾರಂಬಿಸಿತು. ಕೈಗೆ ಬಂದ ತ್ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಮರುಗುತ್ತಿದ್ದಾರೆ.

ದಿಕ್ಕು ತೋಚದಂತಾಗಿದೆ ನಾನು ಒಬ್ಬ ಇಂಜಿನಿಯರ್ ಪದವಿಧರ  ನಮ್ಮ ಕುಟುಂಬಕ್ಕೆ 5 ಎಕರೆ ಜಮೀನು ಇದರಲ್ಲಿ ಈರುಳ್ಳಿ ಬೆಳೆದಿದ್ದು 150000 ಲಕ್ಷ ರೂಪಾಯಿ ಖರ್ಚು ಮಾಡಿದ್ದೆವೆ. ಅತೀಯಾದ ಮಳೆಯಿಂದ ಬೆಳೆ ಕೊಳೆತಿದ್ದು, ಈಗ ನಮ್ಮ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. – ರವಿಕುಮಾರ್ ಸಿದ್ನೇಕೂಪ್ಪ, ರೈತ

ಬೆಳೆ ನೀರು ಕುಡಿದು ಹಾಳಾಗಿದ್ದು ಅಪಾಯ ಎದುರಾಗಿದೆ. ಮಳೆ ನಿಂತು ಒಂದು ವಾರ ಬಿಸಿಲು ಬಿದ್ದಲ್ಲಿ ಮಾತ್ರ  ಕೃಷಿ ಚಟುವಟಿಕೆ ಅನುಕೂಲವಾಗಲಿದೆ.ಇಲ್ಲದೆ ಇದೆ ರೀತಿ ಮಳೆ ಸುರಿದರೆ ಬೆಳೆ ಸಂಪೂರ್ಣ ಹಾಳಾಗುತ್ತದೆ ಎಂದು ರೈತರ ಅಳಲು.

Leave a Reply

Your email address will not be published. Required fields are marked *

You May Also Like

ಅರಣ್ಯಗಳ ಅಂಚಿನಲ್ಲಿ 650 ಕಿ.ಮೀ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ : ಅರಣ್ಯ ಸಚಿವ ಆನಂದ್ ಸಿಂಗ್

ಕಾಡಂಚಿನ ಗ್ರಾಮಗಳಲ್ಲಿ ಪದೆ ಪದೇ ಜಾನುವಾರಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.

ರಾಜ್ಯದಲ್ಲಿಂದು 267 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 267 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾದಂತಾಗಿದೆ.

ಕೊರೊನಾ ಭಯ – ಹಲವೆಡೆ ಸ್ವಯಂ ಪ್ರೇರಿತ ಬಂದ್!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಹಲವಡೆ ಸ್ವಯಂ…

ನಟ ಪುನೀತ್ ರಾಜ್ ಕುಮಾರ್ ತೀವ್ರ ಅಸ್ವಸ್ಥ:ವಿಕ್ರಮ್ ಆಸ್ಪತ್ರೆಯತ್ತ ಗಣ್ಯರ ದೌಡು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಿಸಲಾಗಿದೆ.