ಚೆನ್ನೈ : ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ(74) ಗಾಯನ ಲೋಕ ತೊರೆದಿದ್ದಾರೆ.

ಕೊರೊನಾ ಮಹಾಮಾರಿಯಿಂದಾಗಿ ಹಲವು ದಿನಗಳಿಂದಲೂ ಐಸಿಯುನಲ್ಲಿ ಚಿಕಿತ್ಸೆ ಪಡುತ್ತಿದ್ದ ಎಸ್ ಪಿಬಿ ಈ ಲೋಕ ಬಿಟ್ಟು ತೆರಳಿದ್ದಾರೆ. ಸೋಂಕಿನಿಂದಾಗಿ ಅವರು ಆಗಷ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಶೀತ ಮತ್ತು ಜ್ವರದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ಮಾಡಿದ್ದ ವೈದ್ಯರು ಅವರಲ್ಲಿ ಸೋಂಕು ಇರುವುದಾಗಿ ದೃಢಪಡಿಸಿದ್ದರು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಆರೋಗ್ಯದಲ್ಲಿ ಏರಿಳಿತ ಕಂಡು ಬರಲು ಪ್ರಾರಂಭವಾಯಿತು.

ವೆಂಟಿಲೇಟರ್ ಮೂಲಕವೇ ಅವರಿಗೆ ಚಿಕಿತ್ಸೆ ನಿಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರ ಅಂತ್ಯಕ್ರಿಯೆ ಚೆನ್ನೈನ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. 1946ರ ಜೂ. 4ರಂದು ಎಸ್ ಪಿಬಿ ಜನಿಸಿದ್ದಾರೆ. ಅವರು ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ನಂದಿನಿ ಮಳಿಗೆಯಲ್ಲಿ ಸಿಹಿ ಉತ್ಸವಕ್ಕೆ ಚಾಲನೆ- ಉತ್ಪನ್ನಗಳ ಮೇಲೆ 20•/• ರಿಯಾಯಿತಿ

ಉತ್ತರಪ್ರಭಆಲಮಟ್ಟಿ: ಕ್ರಿಸ್ಮಸ್, ನ್ಯೂಇಯರ್, ಸಂಕ್ರಾಂತಿ ಹೀಗೆ ಒಂದರ ಹಿಂದೆ ಒಂದೊಂದು ವಿಶೇಷ ಹಬ್ಬಗಳು ಎದುರುಗೊಳ್ಳುತ್ತಿವೆ. ಈ…

ಗದಗ-ಯಲವಿಗಿ ರೈಲು ನಿರ್ಮಾಣ ಮಾಡಲು ಶಾಸಕ ರಾಮಣ್ಣ ಒತ್ತಾಯ

ಈ ಸಾಲಿನ ಅಯವ್ಯಯದಲ್ಲಿ ಗದಗ ಯಲವಿಗಿ ರೈಲ್ವೆ ಯೋಜನೆಗೆ ರಾಜ್ಯ ಸರಕಾರದಿಂದ ಅನುದಾನ ಮೀಸಲಿಡಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಮಾನ್ಯ ಬಿ.ಎಸ್.ಯಡಿಯೂರಪ್ಪರವರಿಗೆ ಮನವಿ ಸಲ್ಲಿಸಿದರು.

ಸೋಂಕಿನ ಸವಾಲಿಗೆ ಸರ್ಕಾರ ಸುಸ್ತು!: 3693 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 3693 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…

ಅವ್ಯವಸ್ಥೆಯ ಆಗರವಾದ ಗದಗ ಜಿಲ್ಲಾ ಆಸ್ಪತ್ರೆ; ಬೆಸಿಗೆಯಲ್ಲಿ ಬಾಣಂತಿ ಹಾಗೂ ಹಸುಗುಸುಗಳ ಪರದಾಟ

ಉತ್ತರಪ್ರಭ, ಗದಗ :ಜಿಲ್ಲೆಯ ಪ್ರಮುಖ ಆರೋಗ್ಯ ಕೇಂದ್ರವಾದ ಗದಗ ಜಿಲ್ಲಾ ಆಸ್ಪತ್ರೆ, ಪ್ರಮುಖವಾಗಿ ಬೆಸಿಗೆಯ ದಿನಗಳಲ್ಲಿ…