ರಾಯಚೂರು : ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ ವ್ಯಕ್ತಿ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ರಾಗಲಪರ್ವಿ ಗ್ರಾಮದಲ್ಲಿ ನಡೆದಿದೆ.

65 ವರ್ಷದ ವ್ಯಕ್ತಿ ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಳ್ಳಾರಿಯಲ್ಲಿ ಕ್ವಾರಂಟೈನ್ ಆಗಿದ್ದ ವೃದ್ಧನಿಗೆ ಇತ್ತೀಚೆಗೆ ಸೋಂಕು ತಗುಲಿತ್ತು. ಕ್ವಾರಂಟೈನ್ ಅವಧಿ ಮುಗಿದು ಸೋಂಕಿನಿಂದ ಗುಣಮುಖನಾಗಿದ್ದ ಕೂಡ. ಆದರೆ ಗುಣಮುಖರಾದರೂ ಜನರು ಬೇರೆ ದೃಷ್ಟಿಯಿಂದ ನೋಡುತ್ತಿದ್ದ ಕಾರಣ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿದಿದ್ದರು ಎಂಬ ಮಾಹಿತಿ ಲಭಿಸಿದೆ.

ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.

Leave a Reply

Your email address will not be published. Required fields are marked *

You May Also Like

ಉತ್ತರದಲ್ಲಿ ಇನ್ನೂ ನಿಂತಿಲ್ಲ ಪ್ರವಾಹ ಭೀತಿ!

ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಕೆಲವು ದಿನಗಳಿಂದ ಮಳೆಯ ಪ್ರಮಾಣ ತಗ್ಗಿದ್ದರೂ ಪ್ರವಾಹ ಭೀತಿ ಇನ್ನೂ ಕಡಿಮೆಯಾಗಿಲ್ಲ.

ಅಡಕೆ ನುಂಗಿದ ಮಗು ಉಸಿರುಗಟ್ಟಿ ಸಾವು

ತಾಲೂಕು ಹೆದ್ದೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. 1 ವರ್ಷ ಒಂದು ತಿಂಗಳ ಮಗು ನಿಶಾನ್ ಮೃತಪಟ್ಟಿದೆ. ಸಂದೇಶ ಮತ್ತು ಅರ್ಚನಾ ದಂಪತಿಗಳ ಮಗು ನಿಶಾನ್ ಆರೋಗ್ಯವಾಗಿತ್ತು. ಆಟವಾಡುವಾಗ ಅಡಕೆ ನುಂಗಿದ್ದರಿಂದ, ಉಸಿರುರಾಡಲು ಕಷ್ಟವಾಗಿದೆ. ತಕ್ಷಣವೇ ಮಗುವನ್ನು ಕಟ್ಟೆಹಕ್ಕಲುವಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಅಲ್ಲಿಂದ ತೀರ್ಥಹಳ್ಳಿಯ ಜೆ. ಸಿ. ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಗಿದೆ. ಆದರೆ, ಉಸಿರಾಡಲು ಕಷ್ಟವಾಗಿ ಮಗು ಮೃತಪಟ್ಟಿದೆ.