ನವದೆಹಲಿ : ಕೊರೊನಾಗೆ ದೆಹಲಿ ತತ್ತರಿಸಿ ಹೋಗಿದೆ. ಇದು ಹೀಗೆ ಮುಂದುವರೆದರೆ ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಕೊರೊನಾ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನೀಲ್ ಬೈಜಾಲ್ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ, ಆರೋಗ್ಯ ಸಚಿವ ಸತ್ಯಂದ್ರ ಜೈನ್ ಹಾಗೂ ದೆಹಲಿ ತುರ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ಭಾಗವಹಿಸಿದ್ದರು.

ಜೂ. 15ರ ವೇಳೆಗೆ ದೆಹಲಿಯಲ್ಲಿ 44 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ. 6,600 ಬೆಡ್ ಗಳ ಅವಶ್ಯಕತೆ ಇದೆ.

ಜೂ. 30ಕ್ಕೆ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಲಿದೆ. ಆಗ ಕನಿಷ್ಠ 15 ಸಾವಿರ ಬೆಡ್ ಗಳ ಅವಶ್ಯಕತೆ ಇದೆ. ಜುಲೈನಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಜುಲೈ 15ರ ಹೊತ್ತಿಗೆ ಸೋಂಕಿತರ ಸಂಖ್ಯೆ 2.25 ಲಕ್ಷಕ್ಕೆ ಏರಿಕೆಯಾಗಲಿದೆ. ಹೀಗಾಗಿ ಬೆಡ್ ಗಳ ಅವಶ್ಯಕತೆ ಕೂಡ ಇನ್ನೂ ಹೆಚ್ಚಾಗಲಿದೆ. ದೆಹಲಿಯಲ್ಲಿಯೇ ಸೋಂಕಿತರ ಸಂಖ್ಯೆ 5.5 ಲಕ್ಷ ಏರಿಕೆಯಾಗಲಿದ್ದು, ಸುಮಾರು 80 ಸಾವಿರ ಬೆಡ್ ಗಳ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಸೋಂಕಿನ ಸರಣಿ ಸ್ಪೋಟ!: ಇಂದು 40 ಪಾಸಿಟಿವ್..!

ದಿನಕ್ಕೆ ಗದಗ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ನಗರಕ್ಕೆ ಸೀಮಿತವಾಗಿದ್ದ ಸೋಂಕು ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು ತೀವ್ರ ಆತಂಕ ಸೃಷ್ಟಿಸಿದೆ.

ಮಣಿಪುರ ವಿದ್ಯಾರ್ಥಿ ಸಂಘದಿಂದ ಸಚಿವ ಸಿ.ಸಿ.ಪಾಟೀಲ್ ಸಹಾಯಕ್ಕೆ ಕೃತಜ್ಞತೆ

ಮಣಿಪುರ ರಾಜ್ಯದ ವಿದ್ಯಾರ್ಥಿಗಳ ಸಂಘಕ್ಕೆ ಸಹಾಯ ಮಾಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರಿಗೆ ಮಣಿಪುರ ವಿದ್ಯಾರ್ಥಿ ಸಂಘ ಟ್ವೀಟ್ ಮೂಲಕ ಅಭಿನಂದಿಸಿದೆ.

ಗುರುವಾರ ವಿದ್ಯುತ್ ನಿಲುಗಡೆ

ಗದಗ: 110 ಕೆವ್ಹಿ ಗದಗ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಪರಿವರ್ತಕ-1 ಹಾಗೂ ಪರಿವರ್ತಕ-2 ರ…

ಅನ್ಲಾಕ್-2 ಮಾರ್ಗಸೂಚಿ ಬಿಡುಗಡೆ!: ಏನಿರುತ್ತೆ, ಏನಿರಲ್ಲ

ನವದೆಹಲಿ : ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ 31ರ ವರೆಗೆ ಶಾಲಾ, ಕಾಲೇಜು,…