ಗದಗ: ಕರ್ತವ್ಯಕ್ಕೆ ಬಂದ ಚಾಲಕ ಹಾಗೂ ನಿರ್ವಾಹರನ್ನು ಹೊರ ಹಾಕಿದರು ಎಂದು ಆರೋಪಿಸಿ ಇಂದು ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ ಸಿಬ್ಬಂಧಿಗಳು ಪ್ರತಿಭಟನೆ ನಡೆಸಿದ ಘಟನೆ ಗದಗನಲ್ಲಿ ನಡೆಯಿತು.

ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಲು ಬಂದ ಸಿಬ್ಬಂಧಿಗಳನ್ನು ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಹಾಗೂ ಎಟಿಎಸ್ ಶಾಂತಮ್ಮ ಗೇಟ್ ನಿಂದ ಹೊರಹಾಕಿದರು ಎಂದು ಆರೋಪಿಸಿ ಚಾಲಕ ಹಾಗೂ ನಿರ್ವಾಹಕರು ಇಲ್ಲಿನ ಬಸ್ ಡಿಪೋ ಬಳಿ ಪ್ರತಿಭಟನೆ ನಡೆಸಿದರು. ಕೊರೋನಾದಂತಹ ಈ ಸಂಕಷ್ಟದಲ್ಲಿ ಕಾರಣಾಂತರಗಳಿಂದ ಬೆಳಿಗ್ಗೆ ಬರಲು ಐದು ನಿಮಿಷ ತಡವಾಯಿತು. ಇದನ್ನೆ ನೆಪವಾಗಿಸಿಕೊಂಡು ಗೇಟಿನಿಂದ ಹೊರಹಾಕುವುದು ಎಷ್ಟು ಸರಿ? ಒಂದು ವೇಳೆ ತಡವಾಗಿದ್ದರೆ ನಮ್ಮ ಡ್ಯೂಟಿ  ಗೈರು ಹಾಕಿ, ಅದನ್ನು ಬಿಟ್ಟು ಈ ರೀತಿ ವರ್ತಿಸುವುದು ಎಷ್ಟು ಸರಿ? ಎಂದು ಸಿಬ್ಬಂಧಿ ಪ್ರಶ್ನಿಸಿದರು. ಸಮಸ್ಯೆ ಅರ್ಥೈಸಿಕೊಳ್ಳದೇ ಈ ರೀತಿ ವರ್ತಿಸುವುದು ಯಾವ ನ್ಯಾಯ? ಇನ್ನು ಕೊರೋನಾ ನೆಪದಲ್ಲೆ ಎರಡು ತಿಂಗಳ ಮನೆಯಲ್ಲಿ ಕುಳಿತು ಹರಾಮಿ ಪಗಾರ ತಿಂದಿದ್ದಿರಿ ಎಂದು ನಮ್ಮನ್ನು ಹಿಯ್ಯಾಳಿಸುತ್ತಾರೆ. ಸರ್ಕಾರ ಕೊಡುವ ವೇತನದ ಬಗ್ಗೆ ಕೇಳಲು ಇವರು ಯಾರು? ಎಂದು ಈ ವೇಳೆ ಡ್ರೈವರ್ ಮತ್ತು ಕಂಡಕ್ಟರ್ ಗಳು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಮನುಷ್ಯರೇ ನಮ್ಮನ್ನೆ ನಂಬಿದ ಕುಟುಂಬ ನಮ್ಮೆಲ್ಲರಿಗೂ ಇದೆ. ಆದಾಗ್ಯೂ ನಾವು ಸಾರ್ವಜನಿಕ ಸೇವೆಯಿಂದ ಮಹಾಮಾರಿ‌ ಕೊರೋನಾದ ಈ ಪರಿಸ್ಥಿತಿಯಲ್ಲೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆವೆ. ಆದರೆ ನಮ್ಮ ಈ ಕಾಳಜಿ ಹಾಗೂ ನಮ್ಮ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳದೇ ನಮ್ಮನ್ನು ಅವಮಾನಿಸುವ ರೀತಿಯಲ್ಲಿ ಡಿಪೋ ಅಧಿಕಾರಿಗಳು ನಡೆದುಕೊಂಡ ರೀತಿ ಸರಿಯಲ್ಲ ಎಂದು ಸಿಬ್ಬಂಧಿಗಳು ಕಿಡಿಕಾರಿದರು. ಡಿಪೋ ಗೇಟ್ ಬಳಿಯೇ ನಿಂತು ಕೆಲಕಾಲ ಸಿಬ್ಬಂಧಿಗಳು ಪ್ರತಿಭಟಿಸಿದರು. ಅಧಿಕಾರಿಗಳ ವರ್ತನೆ ಖಂಡಿಸಿ ಹಿರಿಯ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.

ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಜೊತೆ ಸಿಬ್ಬಂಧಿಗಳ ವಾಗ್ವಾದ

ಈ ವೇಳೆ ಕೆಲವು ಅಧಿಕಾರಿಗಳು ಮದ್ಯ ಪ್ರವೇಶಿಸಿ ಸಿಬ್ಬಂಧಿಗಳನ್ನು ಸಮಾಧಾನಿಸಲು ಮುಂದಾದರು. ಆದರೆ ಅಧಿಕಾರಿಗಳ ವರ್ತನೆಗೆ ಸಮಾಧಾನಗೊಳ್ಳದ ಚಾಲಕ ಹಾಗೂ ನಿರ್ವಾಹಕರು ತಮ್ಮನ್ನ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಿಬ್ಬಂಧಿಗಳ ಒತ್ತಡಕ್ಕೆ ಮಣಿದು ವಿಭಾಗೀಯ ಅಧಿಕಾರಿ ಹಿರೇಮಠ ಸ್ಥಳಕ್ಕೆ ಆಗಮಿಸಿ ಈ ರೀತಿ ಮರುಕಳಿಸದಂತೆ ನೋಡಿಕೊಳ್ಳಲು ಡಿಪೋ ಅಧಿಕಾರಿಗಳಿಗೆ ಸೂಚಿಸಿದರು. ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ 55 ವರ್ಷ ಮೇಲ್ಪಟ್ಟವರು ಕೆಲಸಕ್ಕೆ ಬರಲೇಬೇಕು ಎಂಬ ನಿಯಮವಿಲ್ಲ. ನೀವೇ ಇಷ್ಟ ಪಟ್ಟು ಬಂದರೆ ಮಾತ್ರ ಡ್ಯೂಟಿ ನೀಡಲಾಗುವುದು ಎಂದು ಸಮಜಾಯಿಸಿ ನೀಡಿದರು.

ಈ ವೇಳೆ ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾಮಂಡಳದ ಗೌರವಾಧ್ಯಕ್ಷ ರವಿಕಾಂತ ಅಂಗಡಿ, ಅಧ್ಯಕ್ಷ ಮುತ್ತಣ್ಣ ರಾಮೇನಹಳ್ಳಿ, ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ್ರ. ಸಹಕಾರ್ಯದರ್ಶಿ ಕುಲಕರ್ಣಿ, ವಿಜಯಾ ಮೇಘನಾ ಹಾಗೂ ಬಿಎಂಎಸ್ ಸಂಘಟನೆಯ ಕಪ್ಪತ್ತನವರ ಮತ್ತು ಕೆಎಸ್ಆರ್ಟಿಸಿ ನೌಕರರ ವಿವಿಧ ಸಂಘಟನೆಗಳ ಮುಖಂಡರು ಸಿಬ್ಬಂಧಿಗಳು ಪಾಲ್ಗೊಂಡಿದ್ದರು.  

ಸಿಬ್ಬಂಧಿಗಳಿಗೆ ಆಗುತ್ತಿರುವುದೇನು..?

ಜಿಲ್ಲೆಯಲ್ಲಿ ಕಂಡಕ್ಟರ್,ಡ್ರೈವರ್ ಸೇರಿದಂತೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂಧಿಗಳ ಪಾಡಂತೂ ಹೇಳತೀರದು. ಕೊರೋನಾದ ಈ ಸಂದಿಗ್ಧತೆಯಲ್ಲಿ ಬಹಳಷ್ಟು ಅಪಾಯದಲ್ಲಿ ಕೆಲಸ ಮಾಡುವವರಲ್ಲೂ ಇವರು ಕೂಡ ಹೌದು. ಆದರೆ ಜಿಲ್ಲೆಯಲ್ಲಿ ಇವರ ಗೋಳಾಟ ಸರ್ಕಾರಕ್ಕೆ ಗೊತ್ತಾಗಬೇಕಿದೆ.

ಡ್ಯೂಟಿಗಾಗಿ ಬೆಳಿಗ್ಗೆಯೇ ಡಿಪೋಗೆ ಬಂದರೂ, ಬಂದ ಎಲ್ಲ ಸಿಬ್ಬಂಧಿಗಳಿಗೂ ಸಂಜೆಯವರೆಗೂ ಡ್ಯೂಟಿ ನೀಡುವುದಿಲ್ಲ. ಅವರು ಕರ್ತವ್ಯಕ್ಕೆ ಬಂದರೂ ಡ್ಯೂಟಿ ನೀಡದಿರುವುದು ಅಧಿಕಾರಿಗಳ ತಪ್ಪು. ಆದರೆ ಅವರ ಹಾಜರಿಯನ್ನು ರಜೆ ಎಂದು ಹಾಕುತ್ತಾರೆ. ಒಂದು ವೇಳೆ ಹಾಜರಿ ಪುಸ್ತಕಕ್ಕೆ ಸಹಿ ಮಾಡದಿರುವವರನ್ನು ಗೈರು ಹಾಕುತ್ತಾರೆ. ಹೆಚ್ಚಿನ ಡಿಪೋಗಳಲ್ಲಿ ಸಿಬ್ಬಂಧಿಗಳಿಗೆ ಮೂಲಭೂತ ಸೌಲಭ್ಯಗಳೂ ಇಲ್ಲ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇಗೆ ಸಾದ್ಯ? ಇಂತಹ ಪರಿಸ್ಥಿತಿಯಲ್ಲಿ ಸಿಬ್ಬಂಧಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇಲಧಿಕಾರಿಗಳು ಕೇವಲ ತಮ್ಮ ಆರೋಗ್ಯದ ಬಗ್ಗೆ ಅಷ್ಟೆ ಕಾಳಜಿ ವಹಿಸದೇ ಕೆಳ ಹಂತದಲ್ಲಿರು ಜಿಲ್ಲೆಯ 3500 ಕ್ಕೂ ಹೆಚ್ಚು ಸಿಬ್ಬಂಧಿಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ಈ ಬಗ್ಗೆ ಮೇಲಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತರಬೇಕಿದೆ. ಸರ್ಕಾರ ಕೆಎಸ್ಆರ್ಟಿ ಸಿಬ್ಬಂಧಿಗಳನ್ನು ಕೇವಲ ಬಾಯಿ ಮಾತಿನಿಂದ ಕೊರೋನಾ ವಾರಿಯರ್ಸ್ ಎಂದರೆ ಸಾಲದು. ಅವರ ಸಮಸ್ಯೆಗೂ ಸ್ಪಂದಿಸಬೇಕು ಎಂದು ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾಮಂಡಳದ ಗೌರವಾಧ್ಯಕ್ಷ ರವಿಕಾಂತ ಅಂಗಡಿ ಉತ್ತರಪ್ರಭಕ್ಕೆ ತಿಳಿಸಿದರು.

Leave a Reply

Your email address will not be published. Required fields are marked *

You May Also Like

ವಿಧಾನ ಮಂಡಲದಲ್ಲಿ ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆ-ಶಿಕ್ಷಕರ ಸಂಘ ಹರ್ಷ

ಉತ್ತರಪ್ರಭ ಸುದ್ದಿಆಲಮಟ್ಟಿ: ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕವು ವಿಧಾನಮಂಡಲದಲ್ಲಿ ಮಂಡನೆಯಾಗಿದ್ದು, ಇದರಿಂದ ರಾಜ್ಯದ ಶಿಕ್ಷಕರ…

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ 7 ನಾಮಪತ್ರ ಸಲ್ಲಿಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ 2 ಸ್ಥಾನಗಳಿಗೆ…

ಮದ್ಯಕ್ಕೆ ಕೊಡುವ ಪ್ರೋತ್ಸಾಹ ವಿದ್ಯೆಗೆ ನೀಡಿ- ಗುರುಶಾಂತ ಸ್ವಾಮೀಜಿ

ವರದಿ: ಗುಲಾಬಚಂದ ಜಾಧವ ಆಲಮಟ್ಟಿ : ಬಹಳಷ್ಟು ಯುವಕರ ಮನಸ್ಥಿತಿಯಿಂದು ಕೆಟ್ಟು ಹೋಗುತ್ತಲ್ಲಿದೆ. ದುಷ್ಚಟಗಳ ದಾಸರಾಗಿ…

ಪುರಾಣ ಕವಿ ರಾಮಣ್ಣ ಬ್ಯಾಟಿ ಇನ್ನಿಲ್ಲ

ಗದಗ: ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಗದುಗಿನ ತೋಂಟದಾರ್ಯ ಲಿಂಗೈಕ್ಯ ಪರಮಪೂಜ್ಯ ಡಾಕ್ಟರ್ ತೋಂಟದ ಸಿದ್ದಲಿಂಗ…