ಬೆಂಗಳೂರು: ಪತ್ನಿಯನ್ನು ಕೊಂದು ಎರಡು ದಿನಗಳ ಕಾಲ ಹೆಣವನ್ನು ಮನೆಯಲ್ಲಿಯೇ ಇಟ್ಟುಕೊಂಡು, ಆ ನಂತರ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೊಲೆ ಮಾಡಿರುವ ವ್ಯಕ್ತಿ ಸೈಕೋ ಎನ್ನಲಾಗಿದೆ. ಈತನ ಹೆಸರು ಮನೀಶ್ ಕುಮಾರ್. ಈ ವ್ಯಕ್ತಿ ನಗರದ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಈತ ಬಿಹಾರಿ ಮೂಲದ ಮನೀಶ್ ಕುಮಾರ್ ಸಂಧ್ಯಾ ಎಂಬುವವರನ್ನು ಮದುವೆಯಾಗಿದ್ದ.

ಎರಡು ವರ್ಷದ ಹಿಂದೆ ಬಿಹಾರದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದು ಕೂಡ್ಲು ಗೇಟ್ ಮಹಡಿಯಲ್ಲಿ ಈ ದಂಪತಿ ವಾಸವಿದ್ದರು. ಆದರೆ ಮನೀಷ್ ಕುಮಾರ್‌ಗೆ ಹುಡುಗಿಯೊಬ್ಬಳ ಪರಿಚಯವಾಗಿ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರ ಹೆಂಡತಿಗೆ ಗೊತ್ತಾಗಿ ಮನೆಯಲ್ಲಿ ಜಗಳ ಶುರುವಾಗಿತ್ತು.

ಕಳೆದ 2 ದಿನದ ಹಿಂದೆ ಹಿಂದೆ ಈ ಜಗಳ ತಾರಕಕ್ಕೇರಿದ್ದು ಸಂಧ್ಯಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಸೈಕೋನಂತಾಗಿದ್ದ ಮನೀಶ್ ಕುಮಾರ್, ಬಳಿಕ ಆಕೆ ಹೆಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಈ ನಡುವೆ ಸಂಧ್ಯಾಳಿಗೆ ಆಕೆ ಸಂಬಂಧಿಕರು ಫೋನ್ ಕರೆ ಮಾಡುತ್ತಿದ್ದರು. ಆದರೆ ಎರಡು ದಿನಗಳಿಂದ ಸಂದ್ಯಾ ಫೋನ್ ಕರೆ ಸ್ವೀಕರಿಸದ ಪರಿಣಾಮ ಆ ಸಂಬಂಧಿಕರೆಲ್ಲ ಮನೆಗೆ ಬಂದಿದ್ದಾರೆ. ಹೀಗಾಗಿ ಸಂಬಂಧಿಕರು ಬಂದಿದ್ದನ್ನು ಕಂಡು ಹೆದರಿ ಮನೀಶ್ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪರಪ್ಪನ ಅಗ್ರಹಾರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 267 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 267 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾದಂತಾಗಿದೆ.

ನಕಲಿ ಪೇಸ್ಬುಕ್ ಸಂದೇಶ!

ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸುವ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ಗದಗ ನಗರದಲ್ಲಿ ಬೆಳಕಿಗೆ ಬಂದಿದೆ.

ಮೊದಲನೇ ಹಂತದ ಚುನಾವಣೆ ಮಪತ್ರಗಳ ಸಲ್ಲಿಕೆ ಅವಧಿ ಮುಕ್ತಾಯ: ಗದಗ ಜಿಲ್ಲೆಯಲ್ಲಿ ಸಲ್ಲಿಕೆಯಾದ ಮತಪತ್ರಗಳ ವಿವರ

ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರಗಳ ಸ್ವೀಕರಿಸುವ ಅವಧಿ ಡಿ.11 ರಂದು ಮುಕ್ತಾಯವಾಗಿದ್ದು, ಒಟ್ಟು 801 ಸ್ಥಾನಗಳಿಗೆ 1212 ಮಹಿಳೆಯರು ಸೇರಿದಂತೆ ಒಟ್ಟಾರೆ 2802 ನಾಮಪತ್ರಗಳ ಸಲ್ಲಿಕೆಯಾಗಿವೆ.

ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣವೇ ಪಕ್ಷ ಬಿಡಲು ಕಾರಣ: ಸಚಿವ ಬಿ.ಸಿ ಪಾಟೀಲ್…!

ಕೊಪ್ಪಳ: ಕಾಂಗ್ರೆಸ್ ನವರು ಶಾಸಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೆ ಅವರಿಗೆ ಮೋಸ ಮಾಡಿದರು. ಇದಲ್ಲದೆ ಮುಖ್ಯಮಂತ್ರಿಯಾಗಿ…