ಬೆಂಗಳೂರು: ಕೊರೋನಾ ಸೋಂಕಿತರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ಇಡೀ ದೇಶದ ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೆ. ಇತ್ತಿಚೆಗಷ್ಟೆ ಸಿಎಂ ಬಿ.ಎಸ್.ಯಡಿಯೂರಪ್ಪ ಕೊರೋನಾ ಸಂಬಂಧ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ ಒಬ್ಬ ಕೊರೋನಾ ಸೋಂಕಿತರಿಗೆ ರಾಜ್ಯದಲ್ಲಿ ಆಗುತ್ತಿರುವ ಖರ್ಚು ಎಷ್ಟು ಎಂದು ನೋಡುವುದಾದರೆ ನಿಜಕ್ಕೂ ಆಶ್ಚರ್ಯ. ಇದರಿಂದ ನಿತ್ಯ ಸರ್ಕಾರದ ಮೇಲೆ ಎಷ್ಟು ಹೊರೆ ಬೀಳುತ್ತದೆ ಎನ್ನುವುದು ಕುತೂಹಲ.  

ರಾಜ್ಯ ಸರ್ಕಾರದಿಂದ ಒಬ್ಬ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಖರ್ಚು ಮಾಡುತ್ತಿರುವ ವೆಚ್ಚ 3,48,885 ರೂ ಆಗಿದೆ. ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಬಿಎಂಸಿ ಕಾಲೇಜಿನ ಸೋಂಕಿತರ ಚಿಕಿತ್ಸೆ ರಫ್ ಸ್ಕೆಚ್ ಮೂಲಕ ಸಚಿವ ಸುರೇಶ್ ಕುಮಾರ್ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಅಂದರೆ ಮೇ.8ರವರೆಗೆ, 4,74,48,390 ರೂಪಾಯಿ ಹಣ ಇದುವರೆಗೆ ಕೊರೋನಾ ಸೋಂಕಿತರಿಗಾಗಿ ಖರ್ಚಾಗಿದೆ.

ಇದರಲ್ಲಿ ಸೋಂಕು ನಿಯಂತ್ರಣ ಸಲಕರಣೆಗಾಗಿ 89 ಲಕ್ಷ, ಆಸ್ಪತ್ರೆಯಲ್ಲಿ ವಾರ್ಡ್ ನಿರ್ಮಾಣಕ್ಕಾಗಿ 60 ಲಕ್ಷ, ಈ ಹಣವನ್ನು 136 ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಹಂಚಿಕೆಯನ್ನಾಗಿ ವಿಭಾಗಿಸಿದಾಗ, ಒಬ್ಬ ಕೊರೋನಾ ಸೋಂಕಿತನಿಗೆ 3,48,885 ರೂಪಾಯಿ ಖರ್ಚು ಮಾಡಲಾಗಿದೆ ಎಂಬುದಾಗಿ ತಿಳಿಸಿದರು. ಇದು ಕೇವಲ ಬಿಎಂಸಿ ಕಾಲೇಜಿನಲ್ಲಿನ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಖರ್ಚು ಮಾಡಿದಂತ ವೆಚ್ಚವಾಗಿದೆ. ಹೀಗಾಗಿ ರಾಜ್ಯದಲ್ಲಿ ಇತರೆಡೆ ಆಯಾ ಜಿಲ್ಲಾಢಳಿತದ ಮೂಲಕ ಕೊರೋನಾ ಚಿಕಿತ್ಸೆಗಾಗಿ ಹಣ ಖರ್ಚು ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಹಿಜಾಬ್ ಪ್ರಕರಣ: ಅರ್ಜಿದಾರರ ಅರ್ಜಿ ವಜಾ

ಬೆಂಗಳೂರು: ಹಿಜಾಬ್ ಪ್ರಕರಣದ ತಿರ್ಪುನ್ನು ಇಡಿ ದೇಶದ ಜನತೆಯ ಚಿತ್ತ ನ್ಯಾಯಾಲಯದತ್ತ ನೆಟ್ಟಿತ್ತು.ಅದರಲ್ಲೂ ಕರ್ನಾಟಕದ ನ್ಯಾಯಾಲಯವು…

ಮೂರ್ತಿ ತೆರವಿಗೆ ಖಂಡನೆ: ರಾಯಣ್ಣ ಅಭಿಮಾನಿ ಬಳಗದಿಂದ ಮನವಿ

ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸದ್ದನ್ನು ಖಂಡಿಸಿ ತಾಲೂಕು ಕುರುಬರ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

5-8 ಮಿಲಿಯನ್ ವರ್ಷಗಳಷ್ಟು ಹಿಂದಿನ ಆನೆ ಪಳೆಯುಳಿಕೆ ಪತ್ತೆ.!

ಲಖ್ನೋ: ಉತ್ತರಪ್ರದೇಶದ ಸಹರನ್ಪುರದ ಬದ್ಶಾಹಿ ಬಾಗ್ ಬಳಿಯಲ್ಲಿ ಸುಮಾರು 5-8 ಮಿಲಿಯನ್ ವರ್ಷಗಳಷ್ಟು ಹಿಂದಿನ ಆನೆಯ…

ವಿದುತ್ ಸ್ಪರ್ಷ: ಕೂಲಿ ಕಾರ್ಮಿಕ ಸಾವು

ಲಕ್ಷ್ಮೇಶ್ವರ: ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಬುಲೇರೋ ವಾಹನದಲ್ಲಿ ಮನೆಗೆ ಮರಳುವ ವೇಳೆ ವಿದ್ಯುತ್ ಸ್ಪರ್ಷದಿಂದ ಓರ್ವ ಸಾವನ್ನಪ್ಪಿದ್ದು, ಮತ್ತೊರ್ವ ಗಂಭೀರ ಗಾಯಗೊಂಡಿದ್ದಾನೆ.