ಬೀಜಿಂಗ್ : ಪಾಪಿ ಮಗನೊಬ್ಬ ತನ್ನ 79 ವರ್ಷದ ತನ್ನ ತಾಯಿಯನ್ನು ಜೀವಂತವಾಗಿಯೇ ಸಮಾಧಿ ಮಾಡಿರುವ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಆದರೆ, ಮೂರು ದಿನಗಳ ಬಳಿಕ ಆಶ್ಚರ್ಯಕರ ರೀತಿಯಲ್ಲಿ ತಾಯಿ ಕೊಳೆತ ವಸ್ತ್ರದೊಂದಿಗೆ ಜೀವಂತವಾಗಿ ಪತ್ತೆಯಾಗಿದ್ದಾರೆ.
ಪಾಪಿ ಮಗನನ್ನು 58 ವರ್ಷದ ಯನ್ ಮತ್ತು ಆತನ ತಾಯಿ 79 ವರ್ಷದ ವಾಂಗ್(ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಮೇ. 2 ರಂದು ಪತಿ ತನ್ನ ತಾಯಿಯನ್ನು ಒಂದು ರೀತಿಯ ಚಕ್ರದ ಕೈ ಬಂಡಿಯಲ್ಲಿ ಕರೆದೊಯ್ದಿದ್ದಾನೆ ಎಂದು ವ್ಯಕ್ತಿಯ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಮಾಧಿಯಿಂದ ಹೊರಗೆ ಎತ್ತುವಂತೆ ಸಹಾಯಕ್ಕಾಗಿ ವೃದ್ಧ ಮಹಿಳೆಯೊಬ್ಬರು ಕೂಗಿದ್ದಾರೆ. ಆ ನಂತರ ಆ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ ತಾಯಿಯನ್ನು ನಿರಂತರವಾಗಿ ಆರೈಕೆ ಮಾಡುತ್ತಿದ್ದರಿಂದ ಬೇಸರಗೊಂಡಿದ್ದ ಮಗ ಈ ಕೃತ್ಯ ಎಸಗಿದ್ದಾನೆ ಎಂದು ಮಾಧ್ಯಮವೊಂದು ಸುದ್ದಿ ಮಾಡಿದೆ.
ಮೂರು ದಿನಗಳ ಬಳಿಕ ಮಹಿಳೆ ಹಿಂತಿರುಗಿ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶಾಂಕ್ಸಿ ಪ್ರಾಂತ್ಯದ ಜಿಂಗ್ ಬೈಯನ್ ಕೌಂಟಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.