ಗದಗ: ಕೊರೋನಾ ಸಂಕಷ್ಟ ಕಾಲದಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ನಾವು ಎಷ್ಟೆ ಹೇಳಿದರೂ ಜನರು ಜಾಗೃತರಾಗುತ್ತಿಲ್ಲ. ಬಹುತೇಕ ಹಳ್ಳಿಗಳಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕುತ್ತಿಲ್ಲ. ಹಣ ಕೊಟ್ಟೆ ಮಾಸ್ಕ್ ಖರೀದಿಸಿ ಹಾಕಿಕೊಳ್ಳಬೇಕೆಂದಿಲ್ಲ. ನಾನು ನನ್ನ ಧೋತರ ಹರಿದು ಮಾಸ್ಕ್ ಮಾಡಿಕೊಂಡಿದ್ದೇನೆ. ಇವುಗಳನ್ನೆ ನಮ್ಮ ಹೊಲದಲ್ಲಿ ಕೆಲಸ ಮಡುವ ಕಾರ್ಮಿಕರಿಗೂ ನೀಡಿದ್ದೇನೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್ ತಾವು ತಯಾರಿಸಿದ ಮಾಸ್ಕ್ ಪ್ರದರ್ಶಿಸಿದರು.
ಯಾವ ಸರ್ಕಾರ ಬಂದ್ರು ಸಾರಾಯಿ ಬಂದ್ ಮಾಡಲ್ಲ. ಈ ನಿಟ್ಟಿನಲ್ಲಿ ಜನರೇ ತಯಾರಬೇಕು. ಸರ್ಕಾರಕ್ಕೆ ಸಾರಾಯಿ ಮಾರಾಟದಿಂದ ಲಾಭ ಇದ್ದಾಗ ಸರ್ಕಾರ ಯಾಕೆ ಸಾರಾಯಿ ಬಂದ್ ಮಾಡುತ್ತದೆ. ಸಾರಾಯಿ ಮಾರಾಟದ ಹೊಣೆ ಎಲ್ಲ ಪಕ್ಷದವರು ಹೊರಬೇಕಾಗಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗಲೂ ಇದನ್ನು ಬಂದ್ ಮಾಡಲು ಆಗಿಲ್ಲ. ಈ ಬಗ್ಗೆ ಧ್ವನಿ ಎತ್ತಿದರೆ ನಮ್ಮ ಮದ್ಯೆ ಇರುವವರೆ ವಿರೋಧ ವ್ಯಕ್ತ ಪಡಿಸಿ ನಮ್ಮನ್ನು ಸುಮ್ಮನಾಗಿಸಿ ಬಿಡುತ್ತಿದ್ದರು. ಇದರ ಹೊಣೆ ನಾವೆಲ್ಲರೂ ಹೊರಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You May Also Like

ಅಂದಪ್ಪ ಸಂಕನೂರ ಹುಟ್ಟು ಹಬ್ಬ ಪ್ರಯುಕ್ತ ರಕ್ತದಾನ: ರಕ್ತದಾನದಿಂದ ಜೀವ ಉಳಿಸಿದ ಪುಣ್ಯಪ್ರಾಪ್ತಿ

ದಾನಗಳಲ್ಲಿಯೇ ಶ್ರೇಷ್ಠತೆಯನ್ನು ಪಡೆದ ರಕ್ತದಾನದಿಂದ ಮತ್ತೊಂದು ಜೀವ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ರಕ್ತದಾನ ಮಾಡುವ ಮೂಲಕ ಅಂದಪ್ಪ ಸಂಕನೂರ ಅವರ ಜನ್ಮದಿನ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ವಿವಿಧ ಸ್ಥಳಗಳ ಪರಿಶೀಲನೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇಂದು ಭೇಟಿ ನೀಡಿ ಗದಗ ನಗರದಲ್ಲಿ ವಲಸೆ ಕಾರ್ಮಿಕರಿಗೆ ಒದಗಿಸಲಾದ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಅಕ್ಕಿ ಕೊಡಿ ಎಂದಿದ್ದಕ್ಕೆ ಸತ್ತು ಹೋಗು ಎಂದ ಅಹಾರ ಸಚಿವ

ಪಡಿತರದಲ್ಲಿನ ಅಕ್ಕಿ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ್ದ ರೈತ ಸಂಘದ ಕಾರ್ಯಕರ್ತರೊಬ್ಬರಿಗೆ, ಆಹಾರ ಸಚಿವ ಉಮೇಶ್ ಕತ್ತಿ ಸತ್ತು ಹೋಗು ಎಂದು ಹೇಳಿ ಉಡಾಫೆತನ ವರ್ತಿಸಿದ್ದಾರೆ.

ರಾಜ್ಯದಲ್ಲಿ PFI SDPI ಸಂಘಟನೆಗಳನ್ನ ಬ್ಯಾನ್ ಮಾಡಬೇಕು: ಬಾಬು ಬಾಕಳೆ ಆಗ್ರಹ

ಉತ್ತರಪ್ರಭ ಗದಗ: ರಾಜ್ಯದಲ್ಲಿ ಪಿ ಎಫ್ ಐ. ಎಸ್ ಡಿ ಪಿ ಐ. ಸಂಘಟನೆಗಳನ್ನ ರಾಜ್ಯ…