ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಿದ ಪೊಗರು ನಿರ್ದೇಶಕ!

ಇದು ಬೇಕಂತ ಒಂದು ಜನಾಂಗಕ್ಕೆ ಧಕ್ಕೆ ತರಲು ಮಾಡಿಲ್ಲ, ಇದೊಂದು ಕಾಲ್ಪನಿಕವಾದ ಕಥೆ, ತಿಳಿದೋ ತಿಳಿಯದೆಯೋ ಈ ರೀತಿ ಆಗಿದೆ, ನಿಮಗೆ ನೋವಾಗಿದ್ದರೆ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಕೈಮುಗಿದಿದ್ದಾರೆ ನಿರ್ದೇಶಕ ನಂದ ಕಿಶೋರ್.

ವಿವಾದಕ್ಕೆ ಗುರಿಯಾದ ಪೊಗರು ಚಿತ್ರ

ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ವಿವಾದವೊಂದಕ್ಕೆ ಗುರಿಯಾಗಿದೆ.