ರಾಜವೀರಮದಕರಿ ನಾಯಕ ಚಿತ್ರಿಕರಣಕ್ಕೆ ಸಿದ್ಧತೆ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರಮದಕರಿ ನಾಯಕ ಸಿನಿಮಾ ಮತ್ತೆ
ಆಗಸ್ಟ್ ನಲ್ಲಿ ಚಿತ್ರೀಕರಣ
ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಕೊರೋನಾದಿಂದಾಗಿ ಸಿನಿಮಾ ಚಿತ್ರಿಕರಣ ಅರ್ಧಕ್ಕೇ ಸ್ಥಗಿತಗೊಂಡಿತ್ತು.
ಆಗಸ್ಟ್ ಅಷ್ಟೊತ್ತಿಗೆ ಚಿತ್ರಿಕರಣಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿಂದ ಚಿತ್ರತಂಡ ಚಿತ್ರಿಕರಣದ ತಯಾರಿ ನಡೆಸಿದೆ.
ಕೊರೊನಾ ಕಾರಣದಿಂದ ಹಲವು ಮುಂಜಾಗೃತ ಕ್ರಮಗಳ ಮೂಲಕ ಸರ್ಕಾರ ಚಿತ್ರಿಕರಣಕ್ಕೆ ಅನುಮತಿ ನೀಡಿದರೆ ಚಿತ್ರಿಕರಣ ಆರಂಭಿಸುವ ತಯಾರಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇದ್ದಾರೆ.