ಪತ್ರ ಚಳುವಳಿಗೆ ಕರೆ ನೀಡಿದ ಭೋವಿ ಶ್ರೀಗಳು

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರ ಈ ಸಮುದಾಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ರಾಜ್ಯ ಸರ್ಕಾರದ ವಿವರಣೆ ಹೀಗಿದೆ: “ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ‘ಸೂಕ್ತ ಪ್ರಾಧಿಕಾರದ (NCSC) ಮುಂದೆ ಹಾಜರಾಗಲು’ ಸೂಚನೆ ನೀಡಿ, ಸರ್ವೋಚ್ಛ ನ್ಯಾಯಾಲಯ ಸದರಿ ಅರ್ಜಿಯನ್ನು 14-2-2020ರಂದು ವಿಲೇವಾರಿ ಮಾಡಿದೆ” ಎಂದು ಹೇಳಲಾಗಿದೆ. ಜೊತೆಗೆ, “ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ, ದೆಹಲಿ, ಇವರ ಅರ್ಜಿಯನ್ನು ಸ್ವೀಕರಿಸಿ, NCSC ಇಂದ, ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಬೆಂಗಳೂರು. ಇವರಿಗೆ ಬರೆದ ಪತ್ರ ಸಂಖ್ಯೆ 36/inclusion & exclusion-3/2020/ssw ದಿನಾಂಕ:12-3-2020ರಲ್ಲಿ ಎಲ್ಲಿಯೂ ಕರ್ನಾಟಕ ರಾಜ್ಯದ ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ತಿಳಿಸಿಲ್ಲ” ಎಂದು ಹೇಳಿದೆ.