ಭುವನೇಶ್ವರ: ಶುಕ್ರವಾರ ಬೆಳಗ್ಗೆ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಒಡಿಶಾದಲ್ಲಿನ ವಿಮಾನ ನಿಲ್ದಾಣದ ಕಾನ್ಫರೆನ್ಸ್ ಹಾಲ್ ನಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಜೊತೆ ಸಭೆ ನಡೆಸಿದ್ದಾರೆ.

ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ಭಾರತದ ಪೂರ್ವ ಕರಾವಳಿಗೆ ಬುಧವಾರ ಬಂದಪ್ಪಳಿಸಿದ ಯಾಸ್ ಚಂಡಮಾರುತದಿಂದ ನಾಲ್ವರು ಮೃತಪಟ್ಟಿದ್ದು, ಸಾಕಷ್ಟು ಮನೆಗಳು ಹಾನಿಗೀಡಾಗಿವೆ. ನೆರೆ ಬಂದು ರೈತರ ಜಮೀನುಗಳು ಕೊಚ್ಚಿ ಹೋಗಿವೆ. ಇದಕ್ಕೂ ಮೊದಲು ಭದ್ರತೆ ಕಾರಣದಿಂದ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ನ 21 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಚಂಡಮಾರುತ ಅಪ್ಪಳಿಸಿದ ನಂತರ ಗುರುವಾರ ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಇದರಿಂದ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿದಿದೆ. ಒಡಿಶಾದ ನಾಲ್ಕು ಜಿಲ್ಲೆಗಳಾದ ಭದ್ರಕ್, ಕೆಂದ್ರಪಾರ, ಕಿಯೊಂಜಿಹಾರ್ ಮತ್ತು ಜೈಪುರಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿತ್ತು ಎಂದು ಪ್ರಧಾನಿಗೆ ಒಡಿಶಾ ಸಿಎಂ ಮಾಹಿತಿ ನೀಡಿದರು.
ವಿಮಾನ ನಿಲ್ದಾಣಕ್ಕೆ ಆರಂಭಿಸಿದ್ದ ಪ್ರಧಾನಿಯನ್ನು ರಾಜ್ಯಪಾಲ ಗಣೇಶಿ ಲಾಲ್, ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರುಗಳಾದ ಧರ್ಮೇಂದ್ರ ಪ್ರಧಾನ್ ಮತ್ತು ಪ್ರತಾಪ್ ಸಾರಂಗಿ ಬರಮಾಡಿಕೊಂಡರು.

Leave a Reply

Your email address will not be published. Required fields are marked *

You May Also Like

ರಾಜ್ಯಾದ್ಯಂತ ಎರಡುದಿನ ಭಾರಿ ಮಳೆ : ಗದಗ ಸೆರಿ ಇನ್ನು ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..!

ಉತ್ತರಪ್ರಭ ಸುದ್ದಿ ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಹವಾಮಾನ ವೈಪರಿತ್ಯ ಹಿನ್ನೆಲೆ ರಾಜ್ಯದಲ್ಲಿ…

ಗದಗ ಜಿಲ್ಲೆಯಲ್ಲಿ 2 ಸಾವಿರ ತೋಟ ನಿರ್ಮಾಣ ಗುರಿ: ಜಿ.ಪಂ ಅಧ್ಯಕ್ಷ ರಾಜೂಗೌಡ

ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2 ಸಾವಿರ ಹೊಸ ತೋಟಗಳನ್ನು ನಿರ್ಮಿಸಲು ತೋಟಗಾರಿಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 22000 ಅತಿಥಿ ಶಿಕ್ಷಕರ ನೇಮಕಾತಿ

ಉತ್ತರಪ್ರಭ ಹುದ್ದೆ: 2022-23 ನೇ ಶೈಕ್ಷಣಿಕ ಸಾಲಿನ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ…

ಮಹಾದೇವಪ್ಪ ಬಸಪ್ಪ ಹೆಬ್ಬಾಳ ನಿಧನ

ಆಲಮಟ್ಟಿ:ಬಸವನಬಾಗೇವಾಡಿ ತಾಲ್ಲೂಕಿನ ಮಣ್ಣೂರ ಗ್ರಾಮದ ಲಿಂಗಾಯತ ಸಮಾಜದ ಮುಖಂಡ ಮಹಾದೇವಪ್ಪ ಬಸಪ್ಪ ಹೆಬ್ಬಾಳ (69) ಶುಕ್ರವಾರ…