ರೋಣ: ನಗರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಸೂತ್ತಲೂ ಬ್ಯಾರಿಕೇಡ್ ಹಾಗೂ ಸ್ಯಾನಿಟೈಸರ್ ಸಿಂಪಡಿಸಲು ತಾಲೂಕು ದಂಡಾಧಿಕಾರಿಗಳು ಆದೇಶಿಸಿದ್ದರು. ಆದರೆ, ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಮಾತ್ರ ತಾಲೂಕು ದಂಡಾಧಿಕಾರಿಗಳ ಆದೇಶಕ್ಕೆ ಬೆಲೆ ಕೊಡದೇ ನಿರ್ಲಕ್ಷ್ಯವಹಿಸಿದ್ದಾರೆ.

ಮಾರ್ಚ 28 ರಂದು ಅಟಲ್ ಭೀಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ 17 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಅಡುಗೆ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದ್ದರಿಂದ, ಕೊರೊನಾ ನಿಯಂತ್ರಣಕ್ಕಾಗಿ ಶಾಲೆಯನ್ನು ಶೀಲ್ಡೌನ್ ಮಾಡಿ ಶಾಲೆಯ ಸೂತ್ತಲೂ ಬ್ಯಾರಿಕೇಡ್ ಹಾಕಲು ಪೊಲೀಸ್ ಇಲಾಖೆಯವರಿಗೆ ಹಾಗೂ ಸ್ಯಾನಿಟೇಸೇರ ಮಾಡಲು ಪುರಸಭೆಯವರಿಗೆ ಆದೇಶೀಸಿದ್ದರು. ತಾಲೂಕು ದಂಡಾಧಿಕಾರಿಗಳು ಹೊರಡಿಸಿದ ಆದೇಶವನ್ನು ಪಾಲಿಸದೇ ಉಲ್ಲಂಘಿಸಿದ್ದಾರೆ.

ನಮ್ಮ ಮಕ್ಕಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಶಾಲೆಯಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಇಕ್ಕಟ್ಟಾದ ಕೊಠಡಿಗಳಲ್ಲಿ ನಮ್ಮ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಜೊತೆಗೆ ಸರಿಯಾದ ಸೌಲಭ್ಯಗಳಿಲ್ಲ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವುದು ಸಹಜ. ಮುಂದೆ ನಮ್ಮ ಮಕ್ಕಳ ಭವಿಷ್ಯ ಏನಾಗುವದು ಎಂಬ ಭಯ ನಮ್ಮನ್ನು ಕಾಡುತ್ತಿದೆ. ಈ ಪರಸ್ಥಿತಿ ನೋಡಿದರೆ ತಾಲೂಕಾಡಳಿತವು ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಪಾಲಕರ ನೇರವಾಗಿ ಆರೋಪವಾಗಿದೆ.

Leave a Reply

Your email address will not be published. Required fields are marked *

You May Also Like

ಇನ್ನು ಕೆಲವೇ ದಿನಗಳಲ್ಲಿ ಹೊಸ ಮರಳು ನೀತಿ ಅನ್ವಯ ಕಾರ್ಯಾರಂಭ: ಸಿ.ಸಿ.ಪಾಟೀಲ್

ಇನ್ನು ಕೆಲವೇ‌ ದಿನಗಳಲ್ಲಿ ನೂತನ ಮರಳು‌ ನೀತಿ‌ ಪ್ರಾರಂಭಿಸಲಿದ್ದೇವೆ. ಜೊತೆಗೆ ಎಂಎಂಐಎಲ್ ಹಾಗೂ ಹಟ್ಟಿ ಚಿನ್ನದ ಗಣಿ ಎಜಿನ್ಸಿಗಳಿಗೆ ನೂತನ ಮರಳು ನೀತಿ‌ ಅನ್ವಯ ಮರಳು ತೆಗೆಯಲು ಈ ಎರೆಡು ಎಜಿನ್ಸಿಗಳಿಗೆ ಆದೇಶ‌ ನೀಡಲಾಗಿದೆ.

ಇಹಲೋಕ ತ್ಯಜಿಸಿದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು

ಉತ್ತರಪ್ರಭ ಸುದ್ದಿವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು, ಸೋಮವಾರ…

ಹುಬ್ಬಳ್ಳಿ :ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕು ಜಯನಗರದಲ್ಲಿ

ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ಅಲ್ಲಿ ನೀವು ಏನಾದರೂ ಸಂಚಾರ ಮಾಡಬೇಕು ಎಂದರೆ ಸ್ವಲ್ಪ ಎಚ್ಚರಿಕೆ ಇರಬೇಕು. ಸ್ವಲ್ಪ ಅಪ್ಪ ತಪ್ಪಿದರೆ ಸೊಂಟ,‌ಅಥವಾ ಕೈಕಾಲು ಮುರಿಯುವುದು ಗ್ಯಾರಂಟಿ. ಇದು ನಗರದ ಕಿಮ್ಸ್ ಆಸ್ಪತ್ರೆಯ ಎದುರಿಗಿನ ಜಯನಗರ ರಸ್ತೆ. ಮಳೆಯಾದರೂ ಅಂತೂ ಮಳೆಯ ನೀರು ಮನೆ ತುಂಬೆಲ್ಲಾ ನುಗ್ಗುತ್ತವೆ.

ಗೋವಾದಿಂದ ಬಂದ ಕೂಲಿ ಕಾರ್ಮಿಕ: ಕೊರೊನಾ ಸೋಂಕಿನಿಂದ ಸಾವು!

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಹಾನಾಪೂರ ಎಲ್.ಟಿ ತಾಂಡಾ ಗ್ರಾಮದ…