ಬೆಂಗಳೂರು : ಬ್ರಷ್ಟಾಚಾರದ ವಿಷಯವೀಗ ಕೈ-ಕಮಲದ ಟ್ವೀಟ್ ಸಮರಕ್ಕೆ ಕಾರಣವಾಗಿದೆ. ಡಿಕೆಶಿ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದರೆ, ಸಿಎಂ ಬಿಎಸ್ವೈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ಭ್ರಷ್ಟಾಚಾರದ ಆರೋಪಿಯನ್ನು ಮೆರವಣಿಗೆಯ ಮೂಲಕ ಕರೆದುಕೊಂಡು ಬಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಿದೆ. ಭ್ರಷ್ಟ ಹಣದ ಮದದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಬೆನ್ನುಮೂಳೆ ಗಟ್ಟಿಯಾಗಿದೆ ಎಂದು ಅಧ್ಯಕ್ಷ ಸ್ಥಾನ ನೀಡಿದ್ದೇ. ಗಲಭೆ ಆರೋಪಿಯೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ಯಾವುದಕ್ಕೆ ನಿದರ್ಶನ ಎಂದು ಬಿಜೆಪಿ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.

ಇದಕ್ಕೆ ಪ್ರತ್ಯುತ್ತರವಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಸಿಎಂ ಯಡಿಯೂರಪ್ಪ ಅವರನ್ನು ಮೆರವಣಿಗೆ ಮಾಡಿ ಕರೆತಂದು, ಪ್ರಕರಣಗಳು ಚಾಲ್ತಿಯಲ್ಲಿದ್ದರೂ ಸಿಎಂ ಮಾಡಿದ್ದೀರಲ್ಲ. ಬೆನ್ನುಮೂಳೆ ಗಟ್ಟಿ ಇರುವವರು ಬಿಜೆಪಿ ಪಕ್ಷಕ್ಕೆ ಯಾರೂ ಸಿಗಲಿಲ್ಲವೇ…? ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಬಿಜೆಪಿಗೆ ಮಾತಿನ ತಿರುಗೇಟು ನೀಡಿದೆ.

Leave a Reply

Your email address will not be published. Required fields are marked *

You May Also Like

ಎಸಿಬಿ ಬಲೆಗೆ ಗದಗ ಕಾರ್ಮಿಕ ನಿರೀಕ್ಷಕಿ

ಕಾರ್ಮಿಕ ಇಲಾಖೆ ಮೇಲೆ ಬುಧವಾರ ಎಸಿಬಿ ದಾಳಿ ನಡೆಸಿದ್ದು, ಕಾರ್ಮಿಕ ಇಲಾಖೆ ನಿರೀಕ್ಷಕಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ದಾವಲಸಾಬ ಉರ್ಪ ಭಾಷಾಸಾಬ ಫಕ್ರುಸಾಬ ಮಲ್ಲಸಮುದ್ರ ಇವರನ್ನು ಗದಗ ಬ್ಲಾಕ್ ಅಧ್ಯಕ್ಷರನ್ನಾಗಿ ಮುಂದುವರಿಕೆ

ಗದಗ : ಕೆ.ಪಿ.ಸಿ.ಸಿ. ಗದಗ ಜಿಲ್ಲಾ ಅಲ್ಪಸಂಖ್ಯಾತ ಘಟಕ ಗದಗ ಬ್ಲಾಕ್ ಅಧ್ಯಕ್ಷರಾದ ದಾವಲಸಾಬ ಉರ್ಪ…

ಟಿಇಟಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ಭಾನುವಾರ ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ…

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಚಲಚಿತ್ರರಂಗದ ಹಿರಿಯ ನಟ ಆರೋಗ್ಯ ಸ್ಥಿತಿ ಗಂಭೀರ. ನಟ ಶಿವರಾಂ ಅವರ  ಆರೋಗ್ಯದಲ್ಲಿ ಏರುಪೇರಾದ…