ಲಕ್ಷ್ಮೇಶ್ವರ: ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆಯ ಸ್ಪೋಟದಿಂದಾದ ಕರಾಳ ಘಟನೆಯ ನೆನಪು ಇನ್ನು ಹಸಿಯಾಗಿಯೇ ಇದೆ. ಈ ಮದ್ಯೆ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕಲ್ಲು ಕ್ವಾರಿಗಳಲ್ಲಿ ಸ್ಪೋಟಕ ಬಳಸಿ ಗಣಿಗಾರಿಕೆ ಮಾಡುತ್ತಿರುವುದು ಮುಂದುವರದೇ ಇದೆ. ಆದಾಗ್ಯೂ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಮೌನಂ ಸನ್ಮತಿ ಲಕ್ಷಣಂ ಎನ್ನುವ ಅರ್ಥದಲ್ಲಿ ಸುಮ್ಮನೇ ಇದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕ್ವಾರಿಗಳು ಸ್ಪೋಟ ಮಾಡುವಂತಿಲ್ಲ ಎಂಬ ನಿಯಮ ವಿಧಿಸಿದೆ. ಆದರೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಕ್ರಷರ್ ಮಾತ್ರ ಸರಕಾರದ ನಿಯಮಗಳಿಗೆ ಕ್ಯಾರೆ ಎನ್ನುವಂತೆ ಕಾಣುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಸಮಾಧಾನ. ಸರ್ಕಾರದ ನಿಯಮಳನ್ನು ಗಾಳಿಗೆ ತೂರಿ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ.
ರಾತ್ರಿಹೊತ್ತಿನಲ್ಲಿ ಬ್ಲಾಸ್ಟಿಂಗ್ ಮಾಡುತ್ತಿರುವುದರಿಂದ ಗ್ರಾಮಸ್ಥರು ಬೆಸತ್ತು ಹೋಗಿದ್ದಾರೆ. ಅಧಿಕಾರಿಗಳ ಗಮನಕ್ಕೂ ತಂದರೂ ಅಧಿಕಾರಿಗಳು ಮಾತ್ರ ನಮಗೇನೂ ಗೊತ್ತೇ ಇಲ್ಲ ಎನ್ನಯವಂತಿದ್ದಾರೆ. ಎನ್ನುವುದು ಗ್ರಾಮಸ್ಥರ ಆಕ್ರೋಶ.
ಈ ಮೂಲಕ ಇಲ್ಲಿನ ವನಶ್ರೀ ಸ್ಟೋನ್ ಕ್ರಷರ್‌ಗೆ ಸರ್ಕಾರದ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲವೇ? ಹಾಗು ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಅಧಿಕಾರಿಗಳ ಮೌನಕ್ಕೆ ಕಾರಣವೇನು? ಹೀಗೆ ಹತ್ತು ಹಲವು ಪ್ರಶ್ನೆಗಳು ಗ್ರಾಮಸ್ಥರದ್ದಾಗಿದೆ.
ಈಗಾಗಲೇ ಈ ಕ್ರಷರ್ ನಿಂದ ತಮಗೆ ನೆಮ್ಮದಿ ಸಿಕ್ಕರೆ ಸಾಕು ಎಂದು ಸ್ಥಳೀಯರು ಪರದಾಡುತ್ತಿದ್ದಾರೆ. ಆದರೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಗಪ್ ಚುಪ್ ಆಗಿದ್ದಾರೆ ಎನ್ನುವುದು ಅವರ ವರ್ತನೆಯಿಂದಲೇ ಗೊತ್ತಾಗುತ್ತೆ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಜನರ ನೆಮ್ಮದಿ ಹಾಗು ನಮ್ಮ ಪಕೃತಿ ಸಂಪತ್ತು ಉಳಿಸುವ ನಿಟ್ಟಿನಲ್ಲಿ ನ್ಯಾಯಾಂಗದ ಮೂಲಕ ಹೋರಾಟ ಅನಿವಾರ್ಯವಾಗುತ್ತದೆ.
– ಪಿ.ಟಿ.ನಿಂಗಪ್ಪ, ಸಾಮಾಜಿಕ ಕಾರ್ಯಕರ್ತ
ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ವನಶ್ರೀ ಕ್ರಷರ್ ಪ್ರಭಾವಿ ವ್ಯಕ್ತಿ ಒಬ್ಬರಿಗೆ ಸೇರಿದ್ದು, ಈ ಹಿಂದೆ ರೈತರು ಈ ಕ್ರಷರ್ ಉಪಟಳಕ್ಕೆ ಬೇಸತ್ತು, ದಯಾ ಮರಣಕ್ಕೆ ಅವಕಾಶ ಮಾಡಿಕೊಂಡಿ ಎಂದು ಲಕ್ಷ್ಮೇಶ್ವರ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ್ದರು.
ಸರಕಾರದ ನಿಯಮದ ಪ್ರಕಾರ ಯಾವ ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಮಾಡುವಂತಿಲ್ಲ. ಆದರಹಳ್ಳಿ ಗ್ರಾಮದಲ್ಲಿ ಬ್ಲಾಸ್ಟಿಂಗ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ.
– ಉಮೇಶ (ಗಣಿ ಮತ್ತು ಭೂವಿಜ್ಞಾನ ಇಲಾಖೆ ಶಿರಹಟ್ಟಿ ಲಕ್ಷ್ಮೇಶ್ವರ)
ಈ ಕ್ರಷದಿಂದ ನಮ್ಮ ಜಮೀನಿನಲ್ಲಿ ಇರುವ ಬೋರವೆಲ್ ಬತ್ತಿ ಹೋಗುತ್ತಿವೆ ಹಾಗೂ ಜಮೀನುಗಳಲ್ಲಿ ಧೂಳು ಹಾಗೂ ಕಲ್ಲುಗಳು ಬಂದು ಬಿಳುತ್ತಿವೆ. ಇನ್ನೂ ಕೆಲವೊಂದು ಬೋರವೆಲ್ ಗಳು ಬತ್ತಿ ಹೋಗಿವೆ ಎಂದು ಎಷ್ಟೋ ಸಾರಿ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಆದರೆ ಪ್ರಯೋಜನ ಮಾತ್ರ ಶೂನ್ಯವಂತೆ.