ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಕುರಿಕಾರ ಗೆಲುವು ಖಚಿತ: ಮಾಜಿ ಶಾಸಕ ಜಿ.ಎಸ್.ಪಾಟೀಲ

ಉತ್ತರಪ್ರಭ

ನರೆಗಲ್: ವಿಧಾನ ಪರಿಷತ್‍ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ಮಾಜಿ ಶಾಸಕ ಜಿ.ಎಸ್.ಪಾಟೀಲ ಮಂಗಳವಾರ ಪಟ್ಟಣದ ವಿವಿಧೆಡೆ ಮತ ಯಾಚಿಸಿದರು. ಶ್ರೀ ಅನ್ನದಾನ ಶಿಕ್ಷಣ ಸಂಸ್ಥೆ.ಸರಕಾರಿ ಪಿ.ಯು. ಕಾಲೇಜು. ಸರಕಾರಿ ಪದವಿ ಕಾಲೇಜು. ಸರಕಾರಿ ಪ್ರೌಢಶಾಲೆ.ಹಾಗೂ ಶ್ರೀ ಕನಕದಾಸ ಶಿಕ್ಷಣ ಸಂಸ್ಥಗೆ ಭೇಟಿ ನೀಡಿದ ಪಾಟೀಲ ಶಿಕ್ಷಕರಲ್ಲಿ ಮತಯಾಚನೆ ಮಾಡಿದರು.

ಬಳಿಕ ಮಾತನಾಡಿದ ಪಾಟೀಲ ಅವರು,ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಕಣ ರಂಗೇರಿದ್ದು. ನಿವೃತ್ತ ಶಿಕ್ಷಕ ಸಂಘಟನಾ ಚತುರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ‘ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗುರಿಕಾರ ಅವರು ಸಂಘವನ್ನು ಸ್ಥಾಪಿಸಿ, ಹಲವು ಹೋರಾಟಗಳನ್ನು ಮಾಡಿದ್ದಾರೆ. ಶಿಕ್ಷಕರ ಅಭ್ಯುದ್ಯಕ್ಕಾಗಿ ಜೀವನವನ್ನು ಮೀಸಲಿಟ್ಟಿದ್ದಾರೆ. ಇಂತಹವರು ಪರಿಷತ್ ಸದಸ್ಯರಾದರೆ ಶಿಕ್ಷಕರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಾಗಾಗಿ, ಎಲ್ಲರೂ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ ಶಿಕ್ಷಣ ಕ್ಷೇತ್ರ ಇರುವುದು ವಿಶ್ವದಾಖಲೆ ಮಾಡಲು ಅಲ್ಲ. ಶಿಕ್ಷಕರ ಕಷ್ಟ.ಸುಖ.ಬಗೇಹರಿಸಲು ಶಿಕ್ಷಕರು ಈ ಬಾರಿ ಬದಲಾವಣೆ ಬಯಸಿರುವ ಕಾರಣ ನನ್ನ ಗೆಲುವು ಖಚಿತ ಎಂದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ. ಡಾ: ಕೆ.ಬಿ.ಧನ್ನೂರ, ವಿ.ಆರ್. ಗುಡಿಸಾಗರ, ಬಸವರಾಜ ಕಳಕೊಣ್ಣವರ, ನಿಂಗನಗೌಡ ಲಕ್ಕನಗೌಡ್ರ, ಎಂ.ಎಸ್.ದಡೆಸೊರಮಠ, ಪ್ರಬು ಮೇಟಿ, ಯೂಸುಫ್ ಇಟಗಿ, ಬಸವರಾಜ ನವಲಗುಂದ, ಸೂಡಿ ಶೆಟ್ಟರ, ಎ.ಆರ್.ಮಲ್ಲನಗೌಡ್ರ, ಅಶೋಕ ಬೇವಿನಕಟ್ಟಿ, ಅಲ್ಲಾಭಕ್ಷಿ ನಧಾಫ್, ಶಿವನಗೌಡ ಪಾಟೀಲ, ಶೇಖಪ್ಪ ಜುಟ್ಲ, ಗುಡದಪ್ಪ ಗೊಡಿ ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರರು. ಮುಖ್ಯೋಪಾಧ್ಯಾಯರು ಶಿಕ್ಷಕರು ಇದ್ದರು.

Exit mobile version