ಈ ಬಾರಿ ಕುಬೇರಪ್ಪ ಗೆಲವು ನಿಶ್ಚಿತ : ವೀರಣ್ಣ ಸೊನ್ನದ

gajendragad gadag election

ಈ ಬಾರಿ ಕುಬೇರಪ್ಪ ಗೆಲವು ನಿಶ್ಚಿತ : ವೀರಣ್ಣ ಸೊನ್ನದ

ಗಜೇಂದ್ರಗಡ: ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಜನಪರ ಸೇವೆಯಲ್ಲಿ ತೊಡಗಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ ಈ ಬಾರಿ ಪಶ್ಚಿಮ ಪದವೀಧರ ಮತದಾರರು ಗೆಲುವು ತಂದು ಕೊಡಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣ ಸೊನ್ನದ ವಿಶ್ವಾಸ ವ್ಯಕ್ತಪಡಿಸಿದರು.

ಸಮೀಪದ ರಾಜೂರ ಗ್ರಾಮದಲ್ಲಿ ಪಶ್ಚಿಮ ಪದವೀಧರ ಮತಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ ಪರ ರವಿವಾರ ಮತಯಾಚಿಸಿ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಧಾರವಾಡದಲ್ಲಿ ಹೈಕೋರ್ಟ ಪೀಠ ಸ್ಥಾಪನೆ, ಧಾರವಾಡ ಜಿಲ್ಲಾ ಒಳಕ್ರೀಡಾಂಗಣ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ರದ್ದು ವಿರುದ್ದ, ವೈದ್ಯಕೀಯ ಪರೀಕ್ಷೆಯಲ್ಲಿನ ಮೌಲ್ಯಾ ಮಾಪನ ಹಗರಣ ದಂತಹ ಕಾನೂನಾತ್ಮಕ ಹೋರಾಟ ಮಾಡಿ ಜನಪರ ಸೇವೆಯಲ್ಲಿ ತೊಡಗಿಸಿಕೊಂಡ ಕುಬೇರಪ್ಪನವರ ಸಾಮಾಜಿಕ ಕಳಕಳಿ ಅನನ್ಯ. ಈ ನಿಟ್ಟಿನಲ್ಲಿ ಅ.28 ರಂದು ನಡೆಯಲಿರುವ ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಪದವಿ ಮತದಾರರು ಅಧಿಕ ಅಂತರದಿAದ ಜಯದ ಮಾಲೆ ತೊಡಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಶಿಗೇರಿಯಲ್ಲಿ ಸಮೀಪದ ಮುಶಿಗೇರಿ ಮತ್ತು ಶಾಂತಗೇರಿ ಗ್ರಾಮದಲ್ಲಿ ಪಶ್ಚಿವ ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ ಕುಬೇರಪ್ಪ ಪರ ಮತಯಾಚನಾ ಸಭೆ ನಡೆಯಿತು. ಈ ವೇಳೆ ಜಿಪಂ ಸದಸ್ಯೆ ಮಂಜುಳಾ ಹುಲ್ಲಣ್ಣವರ, ವೀರಣ್ಣ ಸೊನ್ನದ, ಮುರ್ತುಜಾ ಡಾಲಾಯತ್, ಬಸವರಾಜ ಬಂಕದ, ಶಿವರಾಜ ಘೋರ್ಪಡೆ ಸೇರಿ ಇತರರು ಇದ್ದರು.

ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ, ಪುರಸಭೆ ಸದಸ್ಯ ರಾಜು ಸಾಂಗ್ಲಿಕಾರ, ಮುರ್ತುಜಾ ಡಾಲಾಯತ್, ಬಸವರಾಜ ಬಂಕದ, ಶ್ರೀಧರ ಬಿದರಳ್ಳಿ, ಎಚ್.ಎಸ್. ಸೋಂಪೂರ, ಅಪ್ಪು ಮತ್ತಿಕಟ್ಟಿ, ಮೋಹನ ಕನಕೇರಿ, ಶರಣಪ್ಪ ಚಳಗೇರಿ, ಶ್ರೀಧರ ಗಂಜಿಗೌಡರ, ಉಮೇಶ ರಾಠೋಡ, ರಾಮಚಂದ್ರ ಹುದ್ದಾರ, ಪ್ರಶಾಂತ್ ರಾಠೋಡ, ಹಸನ ತಟಗಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version